ಹೊಸ ವರ್ಷಕ್ಕೆ ವಾಟ್ಸಪ್ ನಲ್ಲಿ ಕಾಲ್ ರೆಕಾರ್ಡಿಂಗ್, ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯ !!!

ವಾಟ್ಸಪ್ ಅನ್ನೋದು ಎಲ್ಲರಿಗೂ ಇಷ್ಟವಾದ ಆ್ಯಪ್ ಆಗಿದೆ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ವಾಟ್ಸಾಪ್ ವೀಡಿಯೋ ಕಾಲ್ ಮಾಡುವುದು,ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್ ಮಾಡೋದು, ವ್ಯವಹಾರ ನಡೆಸೋದು, ಒಟ್ಟಿನಲ್ಲಿ ವಾಟ್ಸಾಪ್ ಒಂದು ಉತ್ತಮ ಸಂಪರ್ಕ ಮಾಧ್ಯಮ ಎಂದರೆ ತಪ್ಪಾಗಲಾರದು.

ವಾಟ್ಸಾಪ್ ನಿಂದ ನಿಮಗೊಂದು ಸಿಹಿ ಸುದ್ದಿ ಇದೆ ಹೌದು ಹೊಸ ವರ್ಷದಲ್ಲಿ ವಾಟ್ಸಾಪ್ ತನ್ನ ಬಳಕೆದಾರರ ಬಹುದಿನದ ಬೇಡಿಕೆ ಆಗಿರುವ ವಾಟ್ಸಾಪ್ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಲಾಗುತ್ತದೆ ಎಂಬ ಮಾಹಿತಿ ದೊರೆತಿದೆ.

ಅದಲ್ಲದೆ ಹಲವು ಬಾರಿ ವಾಟ್ಸಾಪ್ ನಲ್ಲಿ ಏನನ್ನೂ ಕಳುಹಿಸಲು ಹೋಗಿ ತಪ್ಪಾಗಿ ಬೇರೇನೋ ಟೈಪ್ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಡಿಲೀಟ್ ಮಾಡಿ ಬೇರೆ ಸಂದೇಶ ಕಳುಹಿಸುವುದರ ಹೊರತಾಗಿ ಬೇರೆ ಆಯ್ಕೆಯೇ ಇಲ್ಲ. ಆದರೆ ಹೊಸ ವರ್ಷದಲ್ಲಿ ವಾಟ್ಸಾಪ್ ಇದಕ್ಕಾಗಿ ಮೆಸೇಜ್ ಎಡಿಟಿಂಗ್ ಆಯ್ಕೆಯನ್ನು ಪರಿಚಯಿಸಬಹುದಾಗಿದೆ.

ಕೆಲವೊಮ್ಮೆ ನಾವು ಯಾರಿಗೋ ಕಳುಹಿಸಬೇಕಾದ ಸಂದೇಶವನ್ನು ತಪ್ಪಾಗಿ ಬೇರೆಯವರಿಗೆ ಕಳುಹಿಸಿರುತ್ತೇವೆ. ಪ್ರಸ್ತುತ ಬಳಕೆದಾರರು ಅದನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ. ಆದರೆ ಮೆಸೇಜ್ ಡಿಲೀಟ್ ಮಾಡಿದ ನಂತರ ಎದುರಿಗಿದ್ದ ವ್ಯಕ್ತಿಗೆ ಮೆಸೇಜ್ ಕಳುಹಿಸಿ ಡಿಲೀಟ್ ಮಾಡಿರುವುದು ಗೊತ್ತಾಗುತ್ತದೆ. ಇನ್ನುಮುಂದೆ ಡಿಲೀಟ್ ಮಾಡಿದ ಮೆಸೇಜ್ ಮುಂದಿನ ವ್ಯಕ್ತಿಗೆ ತಿಳಿಯದಂತೆ ಕಣ್ಮರೆ ಆಗುತ್ತವೆ.

ಪ್ರಸ್ತುತ ಇನ್ಸ್ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಲಭ್ಯವಿರುವಂತೆಯೇ 2023ರಲ್ಲಿ ವಾಟ್ಸಾಪ್ ನಲ್ಲಿಯೂ ವ್ಯಾನಿಶ್ ಮೋಡ್ ವೈಶಿಷ್ಟ್ಯ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವೈಶಿಷ್ಟ್ಯದ ಸಹಾಯದಿಂದ ಸಂಭಾಷಣೆಯ ನಂತರ, ಸಂಪೂರ್ಣ ಚಾಟ್ ಅನ್ನು ಅಳಿಸಲಾಗುತ್ತದೆ. ಇದಲ್ಲದೆ, ಇದು ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬಹುದು ಎಂದು ಭರವಸೆ ನೀಡಲಾಗಿದೆ.

ಹೀಗೆ ಹೊಸ ವರ್ಷದಲ್ಲಿ ಉತ್ತಮ ಬದಲಾವಣೆ ತರಲಾಗುತ್ತಿದೆ. ಇದೊಂದು ಖುಷಿಯ ವಿಚಾರವು ಹೌದು.

Leave A Reply

Your email address will not be published.