Home News 2ನೇ ತರಗತಿ ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ | ಏಳರ ಹರೆಯದ ವಿದ್ಯಾರ್ಥಿಯ ಎದೆ ಮೇಲೆ...

2ನೇ ತರಗತಿ ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ | ಏಳರ ಹರೆಯದ ವಿದ್ಯಾರ್ಥಿಯ ಎದೆ ಮೇಲೆ ಹಾರಿದ ವಿದ್ಯಾರ್ಥಿಗಳ ಗುಂಪು | ಬಾಲಕ ಸಾವು

Hindu neighbor gifts plot of land

Hindu neighbour gifts land to Muslim journalist

ವಿದ್ಯಾರ್ಥಿಗಳ ಜಗಳವೊಂದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದ್ದು ನಿಜಕ್ಕೂ ದುರದೃಷ್ಟಕರ ಎಂದೇ ಹೇಳಬಹುದು. ಹೌದು, ಇಂತಹುದೇ ಒಂದು ಘಟನೆ ಉತ್ತರ ಪ್ರದೇಶದ (Uttar Pradesh) ಫಿರೋಜಾಬಾದ್‌ನ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಅಲ್ಲಿನ 2 ನೇ ತರಗತಿ ವಿದ್ಯಾರ್ಥಿ ಸಹಪಾಠಿಗಳ ಜತೆಗಿನ ಜಗಳದಲ್ಲಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸೋಮವಾರ ಫಿರೋಜಾಬಾದ್‌ನ (Firozabad) ಕಿಶನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಂ ಮತ್ತು ಇತರ ಕೆಲವು ವಿದ್ಯಾರ್ಥಿಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಇತರ ವಿದ್ಯಾರ್ಥಿಗಳು ಏಳರ ಹರೆಯದ ಶಿವಂ ಎದೆ ಮೇಲೆ ಹಾರಿದ್ದಾರೆ. ಇದು ಆತನ ಸಾವಿಗೆ ಕಾರಣವಾಯಿತು ಎಂದು ಶಿಕೋಹಾಬಾದ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಹರವೀಂದ್ರ ಮಿಶ್ರಾ ಹೇಳಿದ್ದಾರೆ. ಶಿವಂನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಂಗಳವಾರ ಆತ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ. ಮೃತದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಶಾಲಾ ಆಡಳಿತ ಮಂಡಳಿಯನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ರವಿ ರಂಜನ್ ಅವರನ್ನು ಸಂಪರ್ಕಿಸಿದಾಗ ಮೂಲ ಶಿಕ್ಷಣಾಧಿಕಾರಿ ಆಶಿಶ್ ಕುಮಾರ್ ಪಾಂಡೆ ಮತ್ತು ಎಸ್‌ಡಿಎಂ ಶಿಕೋಹಾಬಾದ್ ಶಿವ ಧ್ಯಾನ್ ಪಾಂಡೆ ವಿಷಯದ ತನಿಖೆಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಫೊರೆನ್ಸಿಕ್ ವರದಿ ಬಂದ ನಂತರ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಿಚಾರಣೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.