Home Technology Google Pixel 6A: ರೂ.43,999 ಬೆಲೆಯ ಫೋನ್‌ ಈಗ ಕೇವಲ ರೂ.10,000 ಗೆ ಮಾರಾಟ |...

Google Pixel 6A: ರೂ.43,999 ಬೆಲೆಯ ಫೋನ್‌ ಈಗ ಕೇವಲ ರೂ.10,000 ಗೆ ಮಾರಾಟ | ಯಾಕೆ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಒಂದನ್ನು ಹುಡುಕುತ್ತಿರುವ ಗ್ರಾಹಕರಿಗಾಗಿ ಬಂದಿದೆ ನೋಡಿ ಬಿಗ್ ಆಫರ್. ಹೌದು ದಿನೇ ದಿನೇ ಸ್ಮಾರ್ಟ್ ಫೋನ್ ಹವಾ ಹೆಚ್ಚುತ್ತಿದೆ. ಪ್ರಸ್ತುತ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್​ಫೋನ್​ಗಳು ರಿಲೀಸ್​ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಮೊಬೈಲ್​ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಹೊಸ ಸ್ಮಾರ್ಟ್​ಫೊನ್​ಗಳು ಬರುತ್ತಲೇ ಇದೆ. ಜೊತೆಗೆ ಗ್ರಾಹಕರಿಗಾಗಿ ಅತ್ಯಾಕರ್ಷಕ ಆಫರ್ ಗಳನ್ನು ಮೊಬೈಲ್ ಕಂಪನಿಗಳು ನೀಡುತ್ತಲಿದೆ. ಹೌದು ಸದ್ಯ ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್ ಫೋನಿಗೆ ಕೈಗೆಟುಕುವ ದರದಲ್ಲಿ ಭರ್ಜರಿ ಆಫರ್ ನೀಡಲಾಗಿದೆ.

ಈಗಾಗಲೇ ಗೂಗಲ್ ತನ್ನ ಕಂಪನಿಯಲ್ಲಿ ಈ ಬಾರಿ ಗೂಗಲ್ ಪಿಕ್ಸೆಲ್ ಸ್ಮಾರ್ಟ್​ಫೋನ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದರ ಆರಂಭಿಕ ಬೆಲೆ 43,999 ರೂಪಾಯಿ ಆಗಿತ್ತು. ಆದರೆ ಈಗ ಈ ಸ್ಮಾರ್ಟ್​ಫೋನ್​ನ ಆಫರ್ಸ್​​ನೊಂದಿಗೆ ಕೇವಲ 10 ಸಾವಿರ ರೂಪಾಯಿಗೆ ಖರೀದಿ ಮಾಡಬಹುದು. ಹಾಗಿದ್ರೆ ಇಷ್ಟೊಂದು ಬೆಲೆಯ ಸ್ಮಾರ್ಟ್​​ಫೋನ್​ ಇಷ್ಟು ಕಡಿಮೆಗೆ ಮಾರಾಟವಾಗಲು ಕಾರಣವೇನು ಎಂಬ ಕುತೂಹಲ ನಿಮಗೆ ಇರಬಹುದು.

ಸದ್ಯ ಸ್ಮಾರ್ಟ್​​ಫೋನ್ ಯುಗ ಇಲ್ಲಿ ಸ್ಮಾರ್ಟ್​​ಫೋನ್​ಗಳು ಹೊಸತನದ ರೂಪದಲ್ಲಿ ಬರುತ್ತಾ ಇರುತ್ತದೆ. ಅದೇ ರೀತಿಯಲ್ಲಿ ಇದರ ಬೆಲೆ ಕೂಡ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಇತ್ತೀಚೆಗೆ ದೊಡ್ಡ ಟೆಕ್ ಕಂಪನಿಯಾಗಿರುವ ಸರ್ಚ್​ ಇಂಜಿನ್ ಗೂಗಲ್​ ತನ್ನ ಬ್ರಾಂಡ್​ನ ಅಡಿಯಲ್ಲಿ ಗೂಗಲ್ ಪಿಕ್ಸೆಲ್ 6ಎ (Google Pixel 6A) ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿತ್ತು. ಆರಂಭದ ದಿನಗಳಲ್ಲಿ ಈ ಸ್ಮಾರ್ಟ್​​ಫೋನ್​ನ ಬೆಲೆ ಕೂಡ ಒಂದು ರೀತಿಯಲ್ಲಿ ಹೆಚ್ಚಿತ್ತು ಎನ್ನಬಹುದು. ಆದರೆ ಈಗ ಈ ಸ್ಮಾರ್ಟ್​​ಫೋನ್​ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈ ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್​ಫೋನ್ ವಿಶೇಷತೆ :

  • ಈ ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್​ಫೋನ್ 6.1-ಇಂಚಿನ ಫುಲ್‌ HD+ 1,080 x 2,400 ಪಿಕ್ಸೆಲ್‌ಗಳ ಜೊತೆಗೆ OLED ಡಿಸ್‌ಪ್ಲೇಯನ್ನು ಹೊಂದಿದೆ.
  • 20:9 ಅನುಪಾತದಲ್ಲಿ ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯು ಹೊಂದಿದೆ.
  • ಈ ಸ್ಮಾರ್ಟ್​​ಫೋನ್​ನ ಡಿಸ್​​ಪ್ಲೇಯ ಸೇಫ್ಟಿಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಯನ್ನು ಅಳವಡಿಸಲಾಗಿದೆ.
  • ಈ ಡಿಸ್​​ಪ್ಲೇಯು 60Hz ರಿಫ್ರೆಶ್ ರೇಟ್ ಅನ್ನು ಕೂಡ ಹೊಂದಿದೆ.
  • ಇನ್ನು ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಮತ್ತು Titan M2 ಸೆಕ್ಯುರಿಟಿ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ.
  • ಈ ಪ್ರೊಸೆಸರ್ ಅನ್ನು 6GB LPDDR5 RAM ನೊಂದಿಗೆ ಜೋಡಿಸಲಾಗಿದೆ.
  • ಇನ್ನು ಈ ಸ್ಮಾರ್ಟ್​​ಫೋನ್ ಆಂಡ್ರಾಯ್ಡ್ 12 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿರುವ ಈ ಸ್ಮಾರ್ಟ್‌ಫೋನ್ ಕನಿಷ್ಠ 5 ವರ್ಷಗಳ ವ್ಯಾರಂಟಿಯನ್ನು ನೀಡುತ್ತದೆ.
  • ಈ ಸ್ಮಾರ್ಟ್​​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಹೇಳುವುದಾದರೆ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಫೀಚರ್ಸ್​​ಗಳನ್ನು ಹೊಂದಿದೆ.
  • ಮೊಬೈಲ್​ನ ಸೆಕ್ಯುರಿಟಿಗಾಗಿ ಡಿಸ್ಪ್ಲೇ ಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್​ ಅನ್ನು ನೀಡಿದ್ದಾರೆ.
  • ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಿದೆ.
  • ರಿಯರ್ ಕ್ಯಾಮೆರಾವು f/1.7 ಅಪಾರ್ಚರ್ ಲೆನ್ಸ್‌ನೊಂದಿಗೆ 12.2-ಮೆಗಾಪಿಕ್ಸೆಲ್ ಮತ್ತು 12-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾದೊಂದಿಗೆ ಅಲ್ಟ್ರಾ-ವೈಡ್-ಆ್ಯಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ.
  • ಸೆಲ್ಫಿಗಳು ಮತ್ತು ವಿಡಿಯೋ ಕಾಲ್​ಗಳಿಗೆ,ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್‌ಫೋನಿನಲ್ಲಿ f/2.0 ಅಪಾರ್ಚರ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
  • ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್​​ಫೋನ್​ನ ಹಿಂದಿನ ಕ್ಯಾಮೆರಾವು 30fps ನಲ್ಲಿ 4K ನಲ್ಲಿ ವಿಡಿಯೋ ರೆಕಾರ್ಡಿಂಗ್ ಅನ್ನು ಮಾಡುವ ಸಾಧ್ಯತೆಯಿದೆ.
  • ಮುಂಭಾಗದ ಕ್ಯಾಮೆರಾ 30fps ನಲ್ಲಿ 1080p ಕ್ವಾಲಿಟಿವರೆಗೆ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ.
  • ಇನ್ನು ಈ ಸ್ಮಾರ್ಟ್​​ಫೋನ್ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು ಗೂಗಲ್ ಪಿಕ್ಸೆಲ್ 6ಎ ನಲ್ಲಿ 4,410mAh ಬ್ಯಾಟರಿಯನ್ನು ನೀಡಲಾಗಿದೆ.
  • ಈ ಸ್ಮಾರ್ಟ್​​ಪೋನ್​ನಲ್ಲಿ 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.
  • ಇನ್ನು ಬ್ಯಾಟರಿ ಸೇವರ್ ಆನ್ ಮಾಡಿದರೆ 72 ಗಂಟೆಗಳ ಕಾಲ ಬಳಸಬಹುದಾಗಿದೆ.

ಒಟ್ಟಿನಲ್ಲಿ ಸ್ಮಾರ್ಟ್ ಫೋನ್ ಗಳು ಜನರ ಮನಸ್ಸನ್ನು ಗೆದ್ದಿರುವುದು ಖಂಡಿತ. ಯಾಕೆಂದರೆ ಕಂಪನಿಗಳು ದಿನೇ ದಿನೇ ಉತ್ತಮ ಬೆಳವಣಿಗೆ ಕಾಣುತ್ತಿದೆ ಮತ್ತು ಅತ್ಯಾಕರ್ಷಕ ಆಫರ್ ನೀಡುತ್ತಿರುವುದು ಜನರನ್ನು ಇನ್ನೂ ಸಂತಸ ಗೊಳಿಸಿದೆ.