Google vs ChatGPT: ಬಂತು ಹೊಸ ಚಾಟ್ GPT ಎಂಬ ಆ್ಯಪ್! ಗೂಗಲ್ ಇದರ ಮುಂದೆ ಮಂಕಾಗುತ್ತಾ? ಏನು ಇದರ ವಿಶೇಷತೆ?

ಟೆಕ್​ನಲ್ಲಿಯೇ ದೊಡ್ಡ ಕಂಪನಿಯಾದ ಸರ್ಚ್​ ಇಂಜಿನ್ ಗೂಗಲ್ ಸಾಕಷ್ಟು ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿದೆ. ಇಂದಿನ ದಿನಗಳಲ್ಲಿ ಜನರು ಏನಾದರೂ ವಿಷಯಗಳ ಮಾಹಿತಿ ತಿಳಿಯಬೇಕಿದ್ದರೆ ಹೆಚ್ಚಾಗಿ ಗೂಗಲ್ ಅನ್ನೇ ಬಳಸುತ್ತಾರೆ. ಆದರೆ ಇದೀಗ ಗೂಗಲ್​ಗೆ ಪ್ರತಿಸ್ಪರ್ಧಿಯಾಗಿ ಬರಲು ಅಪ್ಲಿಕೇಶನ್ ಒಂದು ಸಜ್ಜಾಗಿ ನಿಂತಿದೆ. ಚಾಟ್​GPT (ChatGPT) ಎಂಬುದು ಅದರ ಹೆಸರಾಗಿದೆ. ಇದು ಗೂಗಲ್​ನ ಹಾಗೆ ಕೆಲಸಮಾಡುವ ಸೋಶಿಯಲ್ ಮೀಡಿಯಾ ಆಗಿದೆ. ಇನ್ನೂ, ಈ ಹೊಸ ಅಪ್ಲಿಕೇಶನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಹೊಸ ಅಪ್ಲಿಕೇಶನ್ ಆದ ಚಾಟ್​GPT ಗೂಗಲ್​ಗಿಂತ ಹೇಗೆ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದು ನೋಡೋಣ. ಗೂಗಲ್​ ಬಿಲಿಯನ್​ನಷ್ಟು ಕೆಲವು ವೆಬ್ ಪುಟಗಳನ್ನು ವಿಶ್ಲೇಷಿಸುತ್ತದೆ ಮತ್ತು ಆ ವಿಷಯವನ್ನು ಇಂಡೆಕ್ಸ್ ಮಾಡುತ್ತದೆ. ಬಳಿಕ ಬಳಕೆದಾರರು ಸರ್ಚ್ ಮಾಡಿದ ಪ್ರಶ್ನೆಗಳಿಗೆ ಮಾಹಿತಿಯನ್ನು ನೀಡುತ್ತದೆ. ನಂತರ ಗೂಗಲ್ ಆ ಲೀಸ್ಟ್​ ಅನ್ನು ಮೊಬೈಲ್​ ಸ್ಕ್ರೀನ್​ ಮೇಲೆ ನೀಡಲಾಗುತ್ತದೆ. ಹೀಗೇ ಗೂಗಲ್ ಸರ್ಚ್ ಇಂಜಿನ್ ಕಾರ್ಯನಿರ್ವಹಿಸುತ್ತದೆ. ಆದರೆ ChatGPT ಇಂಟರ್ನೆಟ್ ಬಳಕೆದಾರರಿಗೆ ಉತ್ತಮ ಮತ್ತು ನಿಖರವಾದ ಮಾಹಿತಿಗಳನ್ನು ನೀಡುತ್ತದೆ. ಹಾಗೇ ಇದು ಬೇರೆ ವೆಬ್‌ಸೈಟ್‌ಗಳನ್ನು ಸ್ಕ್ಯಾನ್ ಮಾಡದೆ ತನ್ನ ಸ್ವಂತ ಹುಡುಕಾಟದಿಂದ ಮಾಹಿತಿಯನ್ನು ವಿಶ್ಲೇಷಿಸಿ ನಂತರ ಬಳಕೆದಾರರಿಗೆ ನಿಖರ ಫಲಿತಾಂಶವನ್ನು ಅತಿಬೇಗನೆ ನೀಡುತ್ತದೆ.

ಗೂಗಲ್ ಬಳಕೆದಾರರು ಕೇಳುವ ಪ್ರಶ್ನೆಗೆ ಉತ್ತರವನ್ನು ಲಿಂಕ್​ಗಳ ಮೂಲಕ ಓದಲು ನೀಡುತ್ತದೆ. ಕೆಲವೊಮ್ಮೆ ಇದು ಸ್ಪಷ್ಟವಾದ ಮಾಹಿತಿ ಆಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ChatGPT ಯಲ್ಲಿ ಬಳಕೆದಾರರು ಕೇಳುವ ಯಾವುದೇ ಪ್ರಶ್ನೆಗಳಿಗೆ ಸ್ಪಷ್ಟವಾದ ಮತ್ತು ನಿಖರವಾದ ಉತ್ತರಗಳನ್ನು ನೀಡುತ್ತದೆ. ChatGPT ಅನ್ನು ಬಳಸಿದ ಬಳಕೆದಾರರು ಸೋಶಿಯಲ್​ ಮೀಡಿಯಾದಲ್ಲಿ, ಗೂಗಲ್​​ಗಿಂತ ಹೆಚ್ಚು ಸ್ಪಷ್ಟವಾದ, ಸರಿಯಾದ ಉತ್ತರಗಳನ್ನು ಇದು ನೀಡುತ್ತದೆ ಎಂದು ಹೇಳುತ್ತಿದ್ದಾರೆ. ಹಾಗೇ ಈ ಹೊಸ ಅಪ್ಲಿಕೇಶನ್ ಆದ ChatGPT ಗೂಗಲ್‌ಗೆ ಭರ್ಜರಿ ಪೈಫೋಟಿ ನೀಡಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಇದೀಗ ChatGPT ಕೇವಲ ಐದು ದಿನಗಳಲ್ಲಿ 1 ಮಿಲಿಯನ್ ಬಳಕೆದಾರರನ್ನು ಸ್ವಾಧೀನಪಡಿಸಿಕೊಂಡಿದ್ದು, ಇದು ಟೆಕ್ನಾಲಜಿ ಯುಗದಲ್ಲಿ ಭಾರೀ ಸಂಚಲನ ಮೂಡಿಸಲಿದೆ ಎಂದು ಟೆಕ್ ತಜ್ಞರು ಹೇಳುತ್ತಾರೆ. ಇನ್ನೂ ಇಷ್ಟು ಸಂಖ್ಯೆಯನ್ನು ತಲುಪಲು ಇನ್​​ಸ್ಟಾಗ್ರಾಮ್​ 2.5 ತಿಂಗಳುಗಳು ಹಾಗೂ ಫೇಸ್ ಬುಕ್ ಸುಮಾರು ಹತ್ತು ತಿಂಗಳು ತೆಗೆದುಕೊಂಡಿತ್ತು. ಭವಿಷ್ಯದ ಅನ್ವಯಗಳ ಕುರಿತು OpenAI ಯಾವುದೇ ಸಾರ್ವಜನಿಕ ಪ್ರಕಟಣೆಗಳನ್ನು ಮಾಡುವುದಿಲ್ಲ. ಆದರೆ ಅದರ ಹೊಸ ಚಾಟ್‌ಬಾಟ್ ಇತರ ವೆಬ್‌ಸೈಟ್‌ಗಳಿಗೆ ಲಿಂಕ್‌ ಶೇರ್​ಮಾಡಲು ಆರಂಭಿಸಿದರೆ ಅದು ಗೂಗಲ್​​ಗೆ ನಷ್ಟವಾಗಬಹುದು ಎಂದು ಹೇಳಲಾಗುತ್ತಿದೆ.

ಈ ಚಾಟ್​ಜಿಪಿಟಿ ಬೀಟಾ ಪರೀಕ್ಷೆಗೆ ಲಭ್ಯವಿರುವ ಉಚಿತ ಸೇವೆಯಾಗಿದೆ. ಆದರೆ ಇದು ಮೊದಲಿನ ಕೆಲವು ದಿನಗಳ ಕಾಲ ಮಾತ್ರ ಉಚಿತವಾಗಿ ಸಿಗಲಿದ್ದು, ನಂತರ ಅದನ್ನು ಬಳಸಬೇಕಾದರೆ ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನೀವು ಇದನ್ನು ಬಳಸಬೇಕೆಂದರೆ ಮೊದಲು OpenAI ವೆಬ್‌ಸೈಟ್ ತೆರೆದು, ‘Try ChatGPT’ ಬಟನ್ ಅನ್ನು ಕ್ಲಿಕ್ ಮಾಡಿ, ಸೈನ್ ಅಪ್ ಆದ ನಂತರ ಚಾಟ್​ಜಿಪಿಟಿ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದಾಗಿದೆ.

Leave A Reply

Your email address will not be published.