ಮಾರುಕಟ್ಟೆಗೆ ಧೂಳೆಬ್ಬಿಸಲು ಬರುತ್ತಿದೆ ಆ್ಯಪಲ್ ಕಾರ್ ! ಯಾವಾಗ ಗೊತ್ತೇ? ಅಷ್ಟಕ್ಕೂ ಇದರ ಬೆಲೆ ಎಷ್ಟು ಗೊತ್ತಾ?
ಕಾಲ ಸರಿಯುತ್ತಿದ್ದಂತೆ ಹೊಸ ವಾಹನ ಖರೀದಿ ಮಾಡಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಬಿಗುತ್ತಿದೆ. ನೀವು ಸಹ ಹೊಸ ಕಾರು ಖರೀದಿಸಲು ಬಯಸಿದ್ದೀರಾ ಹಾಗಾದರೆ ಇಲ್ಲಿ ನೋಡಿ.
ಜಗತ್ತಿನ ಅತಿದೊಡ್ಡ ಟೆಕ್ ಕಂಪನಿಯಾಗಿರುವ ಆ್ಯಪಲ್ ತನ್ನಪ್ರೀಮಿಯಂ ಸ್ಮಾರ್ಟ್ಫೋನ್ ಟ್ಯಾಬ್, ಹಾಗೂ ಇತರ ಕೆಲವು ಬ್ರಾಂಡ್ ಮೂಲಕ ಜನಪ್ರಿಯವಾಗಿದೆ. ಈಗ ಆ್ಯಪಲ್ ಕಂಪನಿಯು ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಆ್ಯಪಲ್ ಕಂಪನಿಯು ಕಾರ್ (Apple Car) ತಯಾರಿಸಲಿದೆ ಎಂದು ಹೇಳಲಾಗುತ್ತಿತ್ತು. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿ ಬಂದಿದ್ದು, ಆ್ಯಪಲ್ 2026ರಲ್ಲಿ ಮಾರುಕಟ್ಟೆಗೆ ಆ್ಯಪಲ್ ಕಾರ್ ಲಾಂಚ್ ಮಾಡಲಿದೆ! ಆದರೆ ಈ ಕಾರಿನ ಬೆಲೆ ಬರೋಬ್ಬರೀ 80 ಲಕ್ಷ ರೂಪಾಯಿ ಆಗಿದೆಯಂತೆ!
ಕಳೆದ ಕೆಲವು ವರ್ಷಗಳಿಂದ ಆ್ಯಪಲ್ ಕಂಪನಿ ತನ್ನ ಕಾರನ್ನು ಅಭಿವೃದ್ಧಿ ಮಾಡುತ್ತಿದೆ. ಈ ಕಾರು ಹಿಂದೆ ಸ್ಟೀರಿಂಗ್ ವೀಲ್ ಅಥವಾ ಪೆಡಲ್ ಇಲ್ಲದೆ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಆ್ಯಪಲ್ ಎಲೆಕ್ಟ್ರಿಕ್ ಕಾರ್ ಹೆಚ್ಚು ಸಾಂಪ್ರದಾಯಿಕ ರೀತಿಯಲ್ಲೇ ವಿನ್ಯಾಸಗೊಳಿಸಲಾಗುತ್ತಿದೆ ಎನ್ನಲಾಗಿದೆ.
ಬ್ಲೂಮ್‌ಬರ್ಗ್ ಪ್ರಕಾರ, ಕಂಪನಿಯು ಬಹು ನಿರೀಕ್ಷಿತ ಆಪಲ್ ವಾಹನವನ್ನು 2026 ರಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯ ಇಲ್ಲಿಯವರೆಗಿನ ಬ್ರ್ಯಾಂಡ್ನ ಅತ್ಯಂತ ದುಬಾರಿ ಉತ್ಪನ್ನ ಈ ಕಾರ್ ಆಗಿರಲಿದೆ ಎಂದು ಹೇಳಬಹುದು. ಅದಲ್ಲದೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಸದ್ಯಕ್ಕೆ ಎಲಾನ್ ಮಸ್ಕ್ ಅತಿ ದೊಡ್ಡ ಉದ್ಯಮಿಯಾಗಿದ್ದಾರೆ. ಹಾಗಾಗಿ, ಆ್ಯಪಲ್ ಕಾರುಗಳಿಗೆ ಮಾರುಕಟ್ಟೆಗೆ ಅತಿದೊಡ್ಡ ಸ್ಪರ್ಧೆ ಎಂದರೆ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಾರುಗಳು ಎಂದು ಹೇಳಬಹುದು. ಹಾಗಾಗಿ, ಆ್ಯಪಲ್ ನವೀನ ರೀತಿಯಲ್ಲಿ ಮಾರುಕಟ್ಟೆಗೆ ಅಡಿ ಇಡಬೇಕಾದ ಅಗತ್ಯವಿದೆ.
ಸದ್ಯ ಟೆಸ್ಲಾ ವಾಹನಗಳ ಬೆಲೆ ವ್ಯಾಪ್ತಿಯು 47,000 ಡಾಲರ್‌ಗಳಿಂದ ರಿಂದ 100,000 ಡಾಲರ್‌ಗಳ ವರೆಗೆ ಇರುತ್ತದೆ. ಆ್ಯಪಲ್ ಬೇಸ್ ಕಾರ್ ಬೆಲೆ ಅಂದಾಜು ಟೆಸ್ಲಾ ಕಂಪನಿ ಪ್ರೀಮಿಯಂ ಬ್ರ್ಯಾಂಡ್ ಕಾರಿನೊಂದಿಗೆ ಸ್ಪರ್ಧೆ ಮಾಡಲಿದೆ. ಅಂದರೆ, ಆ್ಯಪಲ್‌ನ ಎಂಟ್ರಿ ಲೇವಲ್ ಕಾರು ಟೆಸ್ಲಾ ಕಂಪನಿಯ ಹೈಎಂಡ್ ಕಾರಿನ ಬೆಲೆಗೆಸಮವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಅದರರ್ಥ ಆ್ಯಪಲ್ ಕಾರ್ ಬೆಲೆ 100,000 ಡಾಲರ್‌ಗಳಿಂದ ಶುರುವಾಗುತ್ತದೆ ಎಂದು ಅಂದಾಜಿಸಲಾಗಿದೆ.
ವರದಿಗಳ ಪ್ರಕಾರ, ಆಪಲ್ ಕಾರ್ ಅನ್ನು 120,000 ಡಾಲರ್‌ಕ್ಕಿಂತ ಹೆಚ್ಚು ದುಬಾರಿಯಾಗಿರುತ್ತದೆ ಎಂದು ಹೇಳಲಾಗಿತ್ತು. ಆದರೆ ವ್ಯಾಪಾರವು ವೃದ್ಧಿಯ ಕಾರಾಣಕ್ಕಾಗಿ ಕಂಪನಿಯು ಕಾರಿನ ಬೆಲೆಯನ್ನು ತಗ್ಗಿಸಿದೆ ಎಂದು ಹೇಳಲಾಗುತ್ತಿದೆ.
ಕಂಪನಿಯು ಮುಂದಿನ ವರ್ಷದ ವೇಳೆಗೆ ಕಾರಿನ ವಿನ್ಯಾಸವನ್ನು ಪೂರ್ಣಗೊಳಿಸಲಿದೆ ಎಂದು ವರದಿಗಳು ಹೇಳುತ್ತಿವೆ. ಆ್ಯಪಲ್ ತನ್ನ ಕಾರನ್ನು ಮಾರುಕಟ್ಟೆಗೆ 2026ರಲ್ಲಿ ಪರಿಚಯಿಸಲಿದೆ. ಆದರೆ ಅದಕ್ಕೂ ಮೊದಲು ಅಂದರೆ 2025ರಲ್ಲಿ ಆ್ಯಪಲ್ ಕಾರಿನ ಪರೀಕ್ಷೆ ನಡೆಯಲಿದೆ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ 2026ರ ಸಮಯದಲ್ಲಿ ಆ್ಯಪಲ್ ಕಾರು ಲಗ್ಗೆ ಇಡಲಿದೆ.