ನಿಮಗಿದು ತಿಳಿದಿದೆಯೇ? ಸ್ಮಾರ್ಟ್ ಫೋನ್ ನಲ್ಲಿ ಕ್ಯಾಮೆರಾ ಎಡಭಾಗದಲ್ಲಿರಲು ಕಾರಣವೇನು? ಇಲ್ಲಿದೆ ಉತ್ತರ!

ಮೊಬೈಲ್ ಎಂಬ ಮಾಯಾವಿ ಪ್ರತಿಯೊಬ್ಬರ ಕೈಯಲ್ಲೂ ಹರಿದಾಡಿ ಅರೆ ಕ್ಷಣವು ಬಿಟ್ಟಿರಲಾಗದಷ್ಟು ಈ ಸಾಧನದ ಮೋಡಿಗೆ ಜನತೆ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರ ನಡೆಯುತ್ತಿದ್ದು, ಮೊದಲು ಕೇವಲ ಲ್ಯಾಂಡ್ ಫೋನ್, ಇಲ್ಲವೇ ಬೇಸಿಕ್ ಸೆಟ್ ಮಾತ್ರ ಬಳಕೆಯಾಗುತ್ತಿತ್ತು. ಆದ್ರೆ ಈಗ ಕಾಲ ಬದಲಾಗಿದ್ದು, ವಿಭಿನ್ನ ವೈಶಿಷ್ಟ್ಯದ ಮೂಲಕ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

ಅದರಲ್ಲಿ ಕೂಡ ನೀವು ಇತ್ತೀಚಿನ ಯಾವುದೇ ಸ್ಮಾರ್ಟ್‌ಫೋನ್ ಗಮನಿಸಿದರೆ, ಅದರಲ್ಲಿನ ಹಿಂಬದಿಯ ಕ್ಯಾಮೆರಾವು ಎಡಭಾಗದಲ್ಲಿ ಮಾತ್ರ ಇರುತ್ತದೆ. ಹಲವು ಬ್ರ್ಯಾಂಡ್‌ಗಳ ವಿವಿಧ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫಿ ಕ್ಯಾಮೆರಾವು ಮಧ್ಯ, ಬಲ ಅಥವಾ ಎಡ ಮೇಲ್ಭಾಗದಲ್ಲಿ ಇಟ್ಟಿರುತ್ತವೆ. ಆದರೆ, ಹಿಂಬದಿಯ ಕ್ಯಾಮೆರಾವನ್ನು ಮಾತ್ರ ಸ್ಮಾರ್ಟ್‌ಫೋನಿನ ಎಡಭಾಗದಲ್ಲೇ ಇಟ್ಟಿರುತ್ತಾರೆ. ಇದಕ್ಕೆ ಕಾರಣವೇನು ಎಂಬ ಕುತೂಹಲಕಾರಿ ಪ್ರಶ್ನೆ ಹಲವರನ್ನು ಕಾಡಿರಬಹುದು. ಇದಕ್ಕೆ ಉತ್ತರ ಕಂಡುಕೊಳ್ಳಲು ನೀವು ಪ್ರಯತ್ನ ಕೂಡ ಪಟ್ಟಿರಬಹುದು. ಅಕಸ್ಮಾತ್ ನಿಮಗೆ ಉತ್ತರ ಸಿಗದಿದ್ದರೆ ನಾವು ಹೇಳ್ತೀವಿ ಕೇಳಿ!!

ಸ್ಮಾರ್ಟ್‌ಫೋನಿನ ಎಡಬದಿಯಲ್ಲಿಯೇ ನಿರ್ದಿಷ್ಟವಾಗಿ ಕ್ಯಾಮೆರಾವನ್ನು ಇಡುವಂತಹ ಸ್ಪಷ್ಟ ಕಾರಣದ ಬಗ್ಗೆ ಯಾವುದೇ ಮೊಬೈಲ್ ಕಂಪನಿಗಳು ಇದುವರೆಗೆ ಮಾಹಿತಿ ನೀಡಿಲ್ಲ. ಆದರೆ, ಇದಕ್ಕೆ ಮಾತ್ರ ಹಲವು ಕಾರಣಗಳಿವೆ ಎಂದು ಅಂದಾಜಿಸಬಹುದು. ನೀವು ಕೆಲ ವರ್ಷಗಳ ಹಿಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಮಧ್ಯದಲ್ಲಿ ಇರುತ್ತಿದ್ದದನ್ನು ಗಮನಿಸಿರ ಬಹುದು. ಆದರೆ, ಕಾಲ ಬದಲಾದ ಹಾಗೇ ತಂತಜ್ಞಾನ ಬೆಳೆದಂತೆ ಸ್ಮಾರ್ಟ್‌ಫೋನ್‌ಗಳ ಎಡಭಾಗದಲ್ಲೇ ಕ್ಯಾಮೆರಾ ಇಡುವ ಪರಿಪಾಟ ಆರಂಭವಾಗಿದೆ.

ವಿಶ್ವದಲ್ಲಿ ಹೆಚ್ಚಿನವರು ಬಲಗೈಯಲ್ಲಿಯೆ ಹೆಚ್ಚು ಸ್ಮಾರ್ಟ್‌ಫೋನ್ ಬಳಸುವುದರಿಂದ ಸ್ಮಾರ್ಟ್‌ಫೋನಿನಲ್ಲಿ ಕ್ಯಾಮೆರಾ ಮಧ್ಯ ಅಥವಾ ಬಲಭಾಗದಲ್ಲಿ ಇದ್ದರೆ, ಕ್ಯಾಮೆರಾ ಲೆನ್ಸ್ ಮೇಲೆ ಬೆವರು ತಾಗಿ ಒಳ್ಳೆಯ ಪೋಟೋಗಳನ್ನು ಕ್ಲಿಕ್ ಮಾಡಲು ಸಾಧ್ಯವಾಗುವುದಿಲ್ಲ ಇದೇ ಕಾರಣಕ್ಕೆ ಬಲಗೈ ಬೆರಳುಗಳಿಗೆ ಲೆನ್ಸ್ ತಾಗದ ರೀತಿಯಲ್ಲಿ ಕ್ಯಾಮೆರಾವನ್ನು ಎಡಭಾಗದಲ್ಲಿ ಇಡಲಾಗುತ್ತದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್‌ನಿನ ಸೌಂದರ್ಯ ಹಾಗೂ ಒಳ್ಳೆ ಲುಕ್ ನೀಡುವ ನಿಟ್ಟಿನಲ್ಲಿ ಕೂಡ ಸ್ಮಾರ್ಟ್ಫೋನ್ನ ಹಿಂಬದಿಯ ಎಡಭಾಗದಲ್ಲಿ ಕ್ಯಾಮೆರಾಗಳನ್ನು ಇಡಲಾಗಿದೆ ಎನ್ನಲಾಗುತ್ತದೆ. ಆರಂಭದಲ್ಲಿ ಆಪಲ್ ಕಂಪನಿ ಈ ವಿಧಾನವನ್ನು ಶುರು ಮಾಡಿದ ಬಳಿಕ ಈ ಟ್ರೆಂಡ್ ಶುರುವಾಗಿದೆ ಎಂಬ ಮಾತು ಕೂಡ ಇದೆ.

ತಂತ್ರಜ್ಞಾನ ಬದಲಾದಂತೆ, ಜನರ ಅವಶ್ಯಕತೆ ಅಭಿರುಚಿಗೆ ಅನುಗುಣವಾಗಿ ಬದಲಾವಣೆಗಳಾಗಿ ಸ್ಮಾರ್ಟ್‌ಫೋನ್ ಕ್ಯಾಮೆರಾ ಇಡುವ ಜಾಗವೂ ಬದಲಾಗುತ್ತಾ ಬಂದಿದೆ. ಇದು ಮುಂದೆಯೂ ಬದಲಾಗುವ ಸಾಧ್ಯತೆ ಕೂಡ ಇದೆ. ಹಾಗೆಂದು ಇದೆ ನಿಖರ ಕಾರಣ ಎಂದು ಹೇಳಲಾಗದು.

ಸ್ಮಾರ್ಟ್‌ಫೋನಿನ ಎಡಬದಿಯಲ್ಲಿಯೇ ನಿರ್ದಿಷ್ಟವಾಗಿ ಕ್ಯಾಮೆರಾವನ್ನು ಇನ್ನೂ ಹಲವು ಕಾರಣಗಳಿದ್ದು , ಅದರಲ್ಲಿ ಲ್ಯಾಂಡ್‌ಸ್ಕೇಪ್ ಮೋಡ್ ಕೂಡ ಕಾರಣ ಎಂದರೆ ತಪ್ಪಾಗದು. ಹೌದು!!.. ನೀವು ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಫೋಟೋ, ವಿಡಿಯೋಗಳನ್ನು ತೆಗೆಯುವಾಗ ದೊಡ್ಡದಾದ ಪರದೆಯನ್ನು ಉಪಯೋಗಿಸಲು ಇಲ್ಲವೇ ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ಬಳಸಲು ಹೆಚ್ಚು ಇಷ್ಟ ಪಡಬಹುದು.

ಸ್ಮಾರ್ಟ್‌ಫೋನ್‌ನ ಎಡಭಾಗದಲ್ಲಿ ಕ್ಯಾಮೆರಾವನ್ನು ಇಡುವುದರಿಂದ ಕೈಬೆರಳುಗಳು ಕ್ಯಾಮೆರಾದ ಮೇಲೆ ಹೋಗದ ರೀತಿಯಲ್ಲಿ ಸುಲಭವಾಗಿ ಫೋಟೋ, ವಿಡಿಯೋಗಳನ್ನು ಚಿತ್ರಿಸಲು ಸಾದ್ಯವಾಗುತ್ತದೆ. ಹೀಗಾಗಿ, ಮೊಬೈಲ್ ಕಂಪೆನಿಗಳು ಸ್ಮಾರ್ಟ್‌ಫೋನ್‌ನ ಎಡಭಾಗದಲ್ಲಿ ಕ್ಯಾಮೆರಾ ಇಟ್ಟಿರುತ್ತಾರೆ. ಹೀಗಾಗಿ, ಮೇಲೆ ತಿಳಿಸಿದ ಕಾರಣಗಳಿಂದ ಸ್ಮಾರ್ಟ್ ಫೋನ್ ಗಳಲ್ಲಿ ಎಡ ಬದಿಯಲ್ಲಿ ಕ್ಯಾಮೆರಾ ಇಡಲಾಗುತ್ತದೆ.

Leave A Reply

Your email address will not be published.