ಶಾಸಕ ಯು.ಟಿ. ಖಾದರ್ ಕಾರು ಬ್ರೇಕ್ ಫೈಲ್‌ : ಪ್ರಾಣಪಾಯದಿಂದ ಪಾರು

Share the Article

ಮಂಗಳೂರು : ವಿಧಾನಸಭೆ ವಿಪಕ್ಷ ಉಪನಾಯಕ, ಶಾಸಕ ಯು ಟಿ ಖಾದರ್ ಅವರು ಪ್ರಯಾಣಿಸುತ್ತಿದ್ದ ಕಾರು ಬ್ರೇಕ್ ಫೈಲ್ ನಿಂದಾಗಿ ಅಪಘಾತಕ್ಕಿಡಾಗಿದೆ. ಘಟನೆಯಲ್ಲಿ ಶಾಸಕರು ಅಪಾಯದಿಂದ ಪಾರಾಗಿದ್ದಾರೆ.

ಬಂಟ್ವಾಳ ಬಿ ಸಿ ರೋಡ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಪಡೀಲ್ ಬಳಿಯ ಕಣ್ಣೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಕಾರ್‌ನ ಬ್ರೇಕ್ ಫೈಲ್ ಆಗಿದ್ದು, ಚಾಲಕ ತಕ್ಷಣ ಕಾರ್‌ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಶಾಸಕರು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಬದಲಿ ಕಾರಿನ ಮೂಲಕ ಮಂಗಳೂರಿಗೆ ಶಾಸಕರು ತೆರಳಿದ್ದಾರೆ ಎಂದು ತಿಳಿದುಬಂದಿದೆ.

Leave A Reply