18-25 ವರ್ಷದ ಒಳಗಿನ ಯುವಜನರಿಗೆ ಉಚಿತ ಕಾಂಡೋಮ್‌ : ಹೊಸ ಘೋಷಣೆ

Share the Article

ಲೈಂಗಿಕವಾಗಿ ಹರಡುವ ರೋಗಗಳ ತಡೆಗಟ್ಟುವುದಕ್ಕಾಗಿ ಮುಂದಿನ ವರ್ಷದಿಂದ ಔಷಧಾಲಯಗಳಲ್ಲಿ 18-25 ವರ್ಷದ ಒಳಗಿನ ಯುವಜನರಿಗೆ ʻಉಚಿತ ಕಾಂಡೋಮ್‌ʼ ನೀಡಲಾಗುವುದು ಎಂದು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಘೋಷಣೆ ಮಾಡಿದ್ದಾರೆ.

ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಔಷಧಾಲಯಗಳಲ್ಲಿ ಜನವರಿ 1 ರಿಂದ 18 ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಫ್ರಾನ್ಸ್‌ನಲ್ಲಿ 2020 ಮತ್ತು 2021 ರಲ್ಲಿ ಎಸ್‌ಟಿಡಿ ಹರಡುವ ಪ್ರಮಾಣ ಶೇ.30 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಮುಂದಿನ ವರ್ಷದಿಂದ ಲೈಂಗಿಕವಾಗಿ ಹರಡುವ ರೋಗಗಳ ಹರಡುವಿಕೆಯನ್ನು ಕಡಿಮೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಚ್ಚರಿಕೆ ದೃಷ್ಟಿಯಿಂದ ಈ ನಿರ್ಧಾರಕ್ಕೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಂದಾಗಿದ್ದಾರೆ

Leave A Reply