ಸುಳ್ಯ |ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಶನ್ ವತಿಯಿಂದ ಟೈಲರ್ ವೃತ್ತಿ ಬಾಂಧವರಿಗೆ ಆಹಾರಧಾನ್ಯಗಳ ಕಿಟ್ ವಿತರಣೆ

ವರದಿ : ಹಸೈನಾರ್ ಜಯನಗರ
ಕಳೆದ ಎರಡು ತಿಂಗಳಿನಿಂದ ದೇಶದಾದ್ಯಂತ ಕೊರೋಣ ವೈರಸ್ನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಹಲವಾರು ಕಸುಬುದಾರರು ಜೀವನೋಪಾಯಕ್ಕೆ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ಟೈಲರ್ ವೃತ್ತಿ ಬಾಂಧವರು ಕೂಡ ಸೇರಿರುತ್ತಾರೆ. ಇವರ ಕಷ್ಟಕ್ಕೆ ಸ್ಪಂದಿಸಿದ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್( ರಿ) ಸುಳ್ಯ ವಲಯ ಸಮಿತಿ ವತಿಯಿಂದ ಜಿಲ್ಲಾಸಮಿತಿ ಹಾಗು ಸುಳ್ಯ ಕ್ಷೇತ್ರ ಸಮಿತಿ ಸಹಕಾರದೊಂದಿಗೆ ಸುಳ್ಯ ತಾಲೂಕಿನ ವಿವಿಧ ಭಾಗಗಳ ಅರ್ಹ 25 ಫಲಾನುಭವಿ ಟೈಲರ್ ವೃತ್ತಿ ಬಾಂಧವರಿಗೆ ಆಹಾರ ಸಾಮಾಗ್ರಿಗಳ ಕಿಟ್ ನ್ನು ಮೇ 16ರಂದು ವಿತರಿಸಿ ಸಹಕರಿಸಿದ್ದಾರೆ.

ಈ ಸಂದರ್ಭದಲ್ಲಿ ಸುಳ್ಯವಲಯ ಅಧ್ಯಕ್ಷೆ ಲಾವಣ್ಯ ಜಯನಗರ, ಪ್ರಧಾನಕಾರ್ಯದರ್ಶಿ ಹೇಮಾವತಿ, ಕೋಶಾಧಿಕಾರಿ ವಸಂತ ದೊಡ್ಡತೋಟ, ಜಿಲ್ಲಾ ಸಮಿತಿ ಕಾರ್ಯದರ್ಶಿ ಲಿಗೋಧರ ಆಚಾರ್ಯ ಜಯನಗರ, ಸುಳ್ಯಕ್ಷೇತ್ರಾಧ್ಯಕ್ಷರಾದ ದಿವಾಕರ ಜಾಲ್ಸೂರು, ಕೋಶಾಧಿಕಾರಿ ಆಶಾಕಿರಣ್ ವಿ ರೈ , ವಿಜಯಕುಮಾರ್ ರೈಎಣ್ಮೂರು, ಕುಸುಮಾಧರ ರೈ ಬೂಡು, ವಿಶ್ವನಾಥ ಪಾಟಾಲಿ, ಬಾಬು ಮಣಿಯಾಣಿ, ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯವರು ಕರೋನವೈರಸ್ ಮಹಾಮಾರಿಯು ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಈ ಒಂದು ಸಂದರ್ಭದಲ್ಲಿ ನಾವೆಲ್ಲರೂ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಎಲ್ಲಾ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಿ ನಮ್ಮ ದೇಶವನ್ನು ಮತ್ತು ರಾಜ್ಯವನ್ನು ವೈರಸ್ಸಿನಿಂದ ಮುಕ್ತಗೊಳಿಸಬೇಕು ಇದು ಭಾರತೀಯ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಹೇಳಿದ್ದಾರೆ.

Leave A Reply

Your email address will not be published.