ಮಸೀದಿ ಸ್ಥಳದಲ್ಲೇ ಮಂದಿರ ನಿರ್ಮಾಣ – ಹಿಂದೂ ಜಾಗರಣ ವೇದಿಕೆ

Share the Article

ಶ್ರೀರಂಗಪಟ್ಟಣ ಪಟ್ಟಣದಲ್ಲಿದ್ದ ಹನುಮಾನ್ ದೇಗುಲವನ್ನು ಒಡೆದುಹಾಕಿ ಟಿಪ್ಪು ಸುಲ್ತಾನ್ ಮಸೀದಿ ಕಟ್ಟಿಸಿದ್ದು ಅಲ್ಲದೆ, ಅದೇ ಸ್ಥಳದಲ್ಲಿಯೇ ಮತ್ತೆ ಹನುಮ ಮಂದಿರ ಕಟ್ಟುವ ಕುರಿತಾಗಿ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಣಿ ಸದಸ್ಯ ಕೆ.ಟಿ.ಉಲ್ಲಾಸ್ ಹೇಳಿದ್ದಾರೆ.

ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಮೈದಾನದಲ್ಲಿ ಭಾನುವಾರ ಸಂಕೀರ್ತನಾ ಯಾತ್ರೆ ಅಂಗವಾಗಿ ನಡೆದ ಹನುಮ ಮಾಲಾಧಾರಿಗಳ ಸಮಾವೇಶದಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಹನುಮ ಮಂದಿರ ನಿರ್ಮಿಸಲು ನ್ಯಾಯಾಲಯದಲ್ಲಿ ಹೋರಾಟ ನಡೆಸುವ ಕುರಿತು ಅಯೋಧ್ಯೆಯಂತೆ ಇಲ್ಲಿ ಕೂಡ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ ಎಂಬ ಕೆ.ಟಿ.ಉಲ್ಲಾಸ್ ವಿಶ್ವಾಸ ಹೊರ ಹಾಕಿದ್ದಾರೆ.

ಮೇಲುಕೋಟೆ, ಕೊಡಗು ಮೊದಲಾದ ಕಡೆ ಹಿಂದೂಗಳಿಗೆ ಟಿಪ್ಪು ಕಿರುಕುಳ ನೀಡಿದಕ್ಕೆ ಜೊತೆಗೆ , ಒಡೆಯರ್ ಕುಟುಂಬಕ್ಕೂ ಹಿಂಸೆ ನೀಡಿದ್ದಕ್ಕೆ ಪುರಾವೆ ಇದ್ದು ಕನ್ನಡ ಕಡೆಗಣಿಸಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಹೇರಿದ್ದಾರೆ ಎಂದಿದ್ದಾರೆ.

Leave A Reply