ಸಾವು ಈ ರೀತಿ ಕೂಡಾ ಬರುತ್ತಾ? ಸಾಯಿಬಾಬಾ ಭಕ್ತ ದೇವರಿಗೆ ನಮಸ್ಕರಿಸುವಾಗಲೇ ಸಾವು!

Share the Article

ಒಂದು ಜೀವಿ ಹುಟ್ಟಿದ ಮೇಲೆ ಸಾವು ಖಚಿತ. ಆದರೆ ಯಾವ ರೀತಿ ಯಾವಾಗ ಸಾವು ಬರುತ್ತೆ ಅನ್ನೋದು ಊಹಿಸೋಕೆ ಸಾಧ್ಯವಿಲ್ಲ. ಮನುಷ್ಯ ಎಷ್ಟೇ ಹಾರಾಡಿದರು ಕೊನೆಗೆ ಒಂದಲ್ಲಾ ಒಂದು ಕಾರಣಕ್ಕೆ ಮಣ್ಣಿನಲ್ಲಿ ಮಣ್ಣಾಗುತ್ತಾರೆ. ಹಾಗೆಯೇ ಮಧ್ಯಪ್ರದೇಶದ ಕಟ್ನಿಯ ದೇವಾಲಯವೊಂದರಲ್ಲಿ ಪ್ರಾರ್ಥಿಸುವಾಗ ಒಬ್ಬ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸದ್ಯ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಸಾಯಿ ಭಕ್ತ ರಾಜೇಶ್ ಮೆಹಾನಿ ಎಂಬ ವ್ಯಕ್ತಿ ದೇವಾಲಯದಲ್ಲಿ ವಿಗ್ರಹದ ಮುಂದೆ ಇರುವುದನ್ನು ನೋಡಬಹುದಾಗಿದೆ. ಇದೇ ವೇಳೆ ಅವರು ದೇವರಿಗೆ ಪ್ರಾರ್ಥನೆ ಮಾಡಲು ಕುಳಿತಿಕೊಂಡಿದ್ದಾರೆ. ಬಳಿಕ ಅದೇ ವೇಳೇ ಅವರು ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ದೇವಾಲಯದ ಇತರ ಭಕ್ತರು ಆ ವ್ಯಕ್ತಿ ಸುಮಾರು 15 ನಿಮಿಷಗಳ ಕಾಲ ಏಳದೆ ಇದ್ದುದನ್ನು ಗಮನಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅಲ್ಲಿ ಸಾವನ್ನಪ್ಪಿದ್ದಾರೆ ಆಂತ ತಿಳಿಸಲಾಯಿತು ಅಂತ ತಿಳಿದು ಬಂದಿದೆ.

ಸ್ಥಳೀಯ ಪೋಲಿಸ್‌ ಅಧಿಕಾರಿಗಳ ಪ್ರಕಾರ, ಮೆಹಾನಿ ವೈದ್ಯಕೀಯ ಅಂಗಡಿಯೊಂದನ್ನು ನಡೆಸುತ್ತಿದ್ದು, ಪ್ರತಿ ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು ಅವರನ್ನು ಜನರು ದೈವ ಭಕ್ತರು ಎಂದು ಕರೆಯಲಾಗುತ್ತಿತ್ತು.

Leave A Reply