ನಿಮಗಿದು ತಿಳಿದಿರಲಿ : ಭಾರತದಲ್ಲಿ ಅತೀ ಹೆಚ್ಚು ಬಾಳಿಕೆ ಬರುವ, ಮೈಲೇಜ್ ನೀಡುವ ಸ್ಕೂಟರ್ ಯಾವುದೆಂದು?
ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಸ್ಕೂಟರ್‌ಗಳ ಬೇಡಿಕೆಯು ಹೆಚ್ಚಾಗುತ್ತಿದ್ದೂ, ಸ್ಕೂಟರ್‌ಗಳ ಪ್ರಾಯೋಗಿಕತೆ ಮತ್ತು ಕಾರ್ಯಸಾಧ್ಯತೆಯಿಂದಾಗಿ, ಅವು ದೈನಂದಿನ ಪ್ರಯಾಣಿಕರ ಜೀವನದ ಅಗತ್ಯ ಭಾಗವಾಗಿದೆ. ಗ್ರಾಹಕರು ದ್ವಿಚಕ್ರ ವಾಹನ ಖರೀದಿಸುವಾಗ ಗಣನೆಗೆ ತೆಗೆದುಕೊಳ್ಳುವ ಪ್ರಮುಖ ಅಂಶವೆಂದರೆ ಅದರ ಮೈಲೇಜ್. ಪ್ರತಿ ವರ್ಷ ಅತಿ ಹೆಚ್ಚು ಮೈಲೇಜ್ ನೀಡುವ ವಾಹನಗಳು ಹೆಚ್ಚು ಮಾರಾಟವಾಗುತ್ತಿವೆ. ಆದರೆ ಕೆಲವರಿಗೆ ಯಾವುದು ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಎಂಬ ವಿಷಯದಲ್ಲಿ ಗೊಂದಲವಿರುತ್ತದೆ. ನಾವಿಂದು ಭಾರತದಲ್ಲಿನ ಅತ್ಯುತ್ತಮ ಮೈಲೇಜ್ ಸ್ಕೂಟರ್‌ಗಳ ಮಾಹಿತಿಯನ್ನು ಹೇಳಲಿದ್ದೇವೆ.
ಯಮಹಾ ಫ್ಯಾಸಿನೊ ಹೈಬ್ರಿಡ್ 125:- ಯಮಹಾ ಫ್ಯಾಸಿನೊ ಸ್ಕೂಟರ್ ಅದರ ಮೈಲ್ಡ್ 125cc ಎಂಜಿನ್ ನೊಂದಿಗೆ ಬರುತ್ತದೆ. ಈ ಎಂಜಿನ್ 8.2 ಬಿಹೆಚ್ಪಿ ಪವರ್ ಮತ್ತು 10.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದೂ, ಸ್ಮಾರ್ಟ್ ಮೋಟಾರ್ ಜನರೇಟರ್‌ಗೆ ಸಂಯೋಜಿತವಾಗಿದೆ. ಇದು ನಿಲುಗಡೆಯಿಂದ ಅಥವಾ ಟ್ರಾಫಿಕ್-ರಿಡಲ್ ರಸ್ತೆಗಳಲ್ಲಿ ಸುಗಮ ವೇಗವರ್ಧನೆಗೆ ಸಹಾಯ ಮಾಡುತ್ತದೆ. ಇದು ಟಾರ್ಕ್ ಅಸಿಸ್ಟ್ ಸಿಸ್ಟಮ್‌ನಂತೆ ಕಾರ್ಯನಿರ್ವಹಿಸುತ್ತದೆ, ಈ ಸ್ಕೂಟರ್ 68.75 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಯಮಹಾ RayZR 125:- ಯಮಹಾ ಫ್ಯಾಸಿನೊದಂತೆಯೇ 125cc ಮೈಲ್- ಹೈಬ್ರಿಡ್ ಸ್ಕೂಟರ್‌ನಿಂದ ನಡೆಸಲ್ಪಡುತ್ತಿದೆ. . ಈ ಯಮಹಾ RayZR 125 ಸ್ಕೂಟರ್ ಡ್ರಮ್, ಡಿಸ್ಕ್, ಡಿಎಲ್‌ಎಕ್ಸ್, ಮೋಟೋಜಿಪಿ ಮತ್ತು ಸ್ಟ್ರೀಟ್ ರ್ಯಾಲಿ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ. ಗ್ರಾಹಕರು ತಮಗೆ ಬೇಕಾದ ರೂಪಾಂತರವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಯಮಹಾ RayZR 125 ಸ್ಕೂಟರ್ ಆರಂಭಿಕ ಬೆಲೆಯು ರೂ.80,730 ಆಗಿದೆ. ಸ್ಪೋರ್ಟಿಯರ್ RayZR ಸರಿಸುಮಾರು 66 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಸುಜುಕಿ ಆಕ್ಸೆಸ್:- ಈ ಸುಜುಕಿಯ ಆಕ್ಸೆಸ್ 125 ಸ್ಕೂಟರ್ ನಲ್ಲಿ 124cc, ಇಂಧನ-ಇಂಜೆಕ್ಷೆಡ್ ಎಂಜಿನ್ ಹಾಗೂ ಇದು 64 ಕಿಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದು 5-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಫುಲ್ ಟ್ಯಾಂಕ್ ಮಾಡಿದರೆ ಸ್ಕೂಟರ್ 300 ಕಿಲೋಮೀಟರ್ ಗಳಿಗಿಂತ ಹೆಚ್ಚು ದೂರ ಸಂಚರಿಸಬಹುದು. ಪ್ರಸ್ತುತ, ಸುಜುಕಿ ಆಕ್ಸೆಸ್ 125 ಅನ್ನು ಸ್ಟ್ಯಾಂಡರ್ಡ್, ಸ್ಪೆಷಲ್ ಎಡಿಷನ್ ಮತ್ತು ರೈಡ್ ಕನೆಕ್ವೆಡ್ ಎಡಿಷನ್ ಎಂಬ ಮೂರು ರೂಪಾಂತರಗಳಲ್ಲಿ ನೀಡುತ್ತಿದ್ದಾರೆ.
ಟಿವಿಎಸ್ ಜೂಪಿಟರ್:- ಟಿವಿಎಸ್ ಜೂಪಿಟರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಕೂಟರ್ ಗಳಲ್ಲಿ ಒಂದಾಗಿದೆ. ಈ ಟಿವಿಎಸ್ ಜೂಪಿಟರ್ ಸ್ಕೂಟರ್ 110cc ಎಂಜಿನ್ ಅನ್ನು ಹೊಂದಿದ್ದೂ, ಈ ಸ್ಕೂಟರ್ ನಲ್ಲಿ ಇಂಟೆಲಿಗೋ ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ನಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಈ ಸ್ಕೂಟರ್ ಐಡಲಿಂಗ್ ಸಮಯದಲ್ಲಿ ಅನಗತ್ಯ ಇಂಧನ ಬಳಕೆಯನ್ನು ತಡೆಯುತ್ತದೆ, ಹೀಗಾಗಿ, ಈ ಟಿವಿಎಸ್ ಜೂಪಿಟರ್ ಸ್ಕೂಟರ್ ಪ್ರತಿ ಲೀಟರ್‌ಗೆ 62 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
ಹೋಂಡಾ ಆಕ್ಟಿವಾ 6ಜಿ :- ದೇಶದಲ್ಲಿ ಮಾರಾಟವಾಗುವ ಪ್ರತಿ ಎರಡನೇ ಸ್ಕೂಟರ್ ಮತ್ತು ಪ್ರತಿ ಮೂರನೇ ದ್ವಿಚಕ್ರ ವಾಹನವು ಆಕ್ಟಿವಾ ಆಗಿರುತ್ತದೆ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ಹೋಂಡಾ ಆಕ್ಟಿವಾ 6ಜಿ ಸ್ಕೂಟರಿನಲ್ಲಿ 109 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.79 ಬಿಹೆಚ್ಪಿ ಪವರ್ ಮತ್ತು 8.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಪಿಜಿಎಂ-ಫೈ ತಂತ್ರಜ್ಞಾನವಿರುವುದರಿಂದ ಆಕ್ಟಿವಾ 6ಜಿ ಸ್ಕೂಟರಿಗೆ ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ರೂಪಾಂತರದಲ್ಲಿ ಎಸಿಜಿ ಸ್ಟಾರ್ಟರ್ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಹೊಸ ಫೀಚರ್ ಗಳು ಮತ್ತು ಉತ್ತಮ ಗೌಂಡ್ ಕ್ಲಿಯರೆನ್ಸ್ ಮತ್ತು ಉದ್ದವಾದ ವೀಲ್ ಬೇಸ್ ಅನ್ನು ಒಳಗೊಂಡಿದೆ.