ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಹೋದ ಬಾಲಕನಿಗೆ ಪ್ರವೇಶ ನಿರಾಕರಣೆ | ಸ್ಥಳೀಯರಿಂದ ತೀವ್ರ ಆಕ್ರೋಶ

ಶಬರಿಮಲೆಯ ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಹೋದ ವಿದ್ಯಾರ್ಥಿ ಗೆ ಪ್ರವೇಶ ನಿರಾಕರಿಸಿದ ಘಟನೆ ಹೈದರಾಬಾದ್‌ನ ಮಲಕ್‌ಪೇಟ್ ಯಲ್ಲಿ ನಡೆದಿದೆ. ಈ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹೈದರಾಬಾದ್‌ನ ಮೋಹನ್ ಗ್ರಾಮರ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದ ವಿದ್ಯಾರ್ಥಿಗೆ ಶಾಲೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅಖಿಲ ಭಾರತ ದೀಕ್ಷಾ ಪ್ರಚಾರಕ ಸಮಿತಿಯ ರಾಷ್ಟ್ರೀಯ ಪ್ರಚಾರಕ ಕಾರ್ಯದರ್ಶಿ ಪ್ರೇಮ್ ಗಾಂಧಿ ಅವರು ನಾವು ಶಬರಿಮಲೆಗೆ ಹೋಗಲು ಮಾಲೆ ಧರಿಸುತ್ತಿದ್ದೇವೆ. ಯಾರಾದರೂ ಇದನ್ನು ತಡೆಯಲು ಪ್ರಯತ್ನಿಸಿದರೆ, ನಾವು ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಅಲ್ಲದೆ, ತೆಲಂಗಾಣದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮತ್ತು ಬೇರೆ ಧರ್ಮಗಳಿಗೆ ಸೇರಿದ ಖಾಸಗಿ ಶಾಲೆಗಳು ಅನಾಗರಿಕರಂತೆ ವರ್ತಿಸುತ್ತಿವೆ. ಅವರು ಅಯ್ಯಪ್ಪ ಮಾಲೆ ಧರಿಸುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇಂದು 1,000 ಅಯ್ಯಪ್ಪ ಸ್ವಾಮಿ ಭಕ್ತರೊಂದಿಗೆ, ಮಾಲೆ ಧರಿಸುವುದನ್ನು ವಿರೋಧಿಸಿದ ಶಾಲೆಯ ಮುಂದೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಇದಕ್ಕೆ ಶಾಲೆಯ ಅಧಿಕಾರಿಗಳು ಸ್ಪಂದಿಸಿ ಅಯ್ಯಪ್ಪ ಮಾಲೆ ಹಾಕಿದ ಮಕ್ಕಳಿಗೆ ಶಾಲೆಗೆ ಪ್ರವೇಶ ನೀಡಬೇಕು ಎಂದು ಪ್ರೇಮ್ ಗಾಂಧಿ ಹೇಳಿದರು.

ಶಬರಿಮಲೆಗೆ ತೆರಳುವ ಭಕ್ತರು ಮಾಲೆ ಧರಿಸುವುದು ‌ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತದ್ದು, ಅಲ್ಲಿಗೆ ತೆರಳುವ ಭಕ್ತರು ಪ್ರತೀದಿನ ಮಾಲೆ ಧರಿಸಿಕೊಂಡಿರಬೇಕು. ಮಾಲೆ ಧರಿಸುವುದು ರಾಜ್ಯಾದ್ಯಂತ ಎಲ್ಲೆಡೆ ನಡೆಯುತ್ತಿದೆ. ಹಾಗಾಗಿ ಯಾವುದೇ ತಡೆಮಾಡದೆ ಶಾಲೆಯ ಎಲ್ಲಾ ಮಕ್ಕಳಿಗೂ ಇದಕ್ಕೆ ಅವಕಾಶ ನೀಡುವಂತೆ ನಾವು ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.

ಈ ಘಟನೆ ಬಗ್ಗೆ ಮಾತನಾಡಿದ ಚಂದರ್ ಘಾಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೈ ಪ್ರಕಾಶ್ ರೆಡ್ಡಿ, ಇಂದು ವಿದ್ಯಾರ್ಥಿಯೊಬ್ಬ ಚಪ್ಪಲಿ ಹಾಕದೆ, ಅಯ್ಯಪ್ಪ ಮಾಲೆ ಮತ್ತು ಖಾಂಡ್ವ ಧರಿಸಿ ಶಾಲೆಗೆ ಹೋಗಿದ್ದಾನೆ. ಇದಕ್ಕೆ ಶಾಲಾ ಆಡಳಿತ ಮಂಡಳಿಯವರು ಖಾಂಡ್ವಾ ಇಲ್ಲದೆಯೂ ಶಾಲೆಗೆ ಬರಬಹುದು ಎಂದು ಸೂಚಿಸಿದ್ದರು. ಸುಮಾರು 10 ಮಂದಿ ಶಾಲೆಗೆ ತೆರಳಿ ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದು ತಪ್ಪು ತಿಳುವಳಿಕೆಯಾಗಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.