ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ !! DA ಹೆಚ್ಚಳದ ಬಳಿಕ ಮತ್ತೊಂದು ಮುಖ್ಯ ಘೋಷಣೆ!!

ದೀಪಾವಳಿ ಹಬ್ಬದ ಬಳಿಕ ಕೇಂದ್ರ ಸರ್ಕಾರದ ನೌಕರರಿಗೆ ಸಿಹಿ ಸುದ್ಧಿ ಆಗಾಗ ಸಿಗುತ್ತಿದ್ದು, ಇದೀಗ ಕೇಂದ್ರ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಲು ಅಣಿಯಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ಮೂಲವೇತನದಲ್ಲಿ ಶೇ.38ಕ್ಕೆ ಏರಿಕೆಯಾಗಿದ್ದು, ಇದು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಎಲ್ಲ ನೌಕರರಿಗೂ ಅನ್ವಯವಾಗಿತ್ತು. ಕೇಂದ್ರ ನೌಕರರ ಡಿಎ ಹೆಚ್ಚಳದ ಬಳಿಕ ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದಿಂದ ಕೇಂದ್ರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಕೇಂದ್ರ ನೌಕರರಿಗೆ ಈ ಬಾರಿ ಸರ್ಕಾರ ಹೊಸ ನಿರ್ಧಾರ ಘೋಷಣೆ ಮಾಡಿದ್ದು, ವಾಸ್ತವವಾಗಿ, ಸರ್ಕಾರವು ಉದ್ಯೋಗಿಗಳಿಗೆ (ಕೇಂದ್ರ ಸರ್ಕಾರಿ ನೌಕರರಿಗೆ) ಬ್ಯಾಂಕ್‌ನಿಂದ ಪಡೆದ ಕಟ್ಟಡ ಮುಂಗಡ (ಎಚ್‌ಬಿಎ) ಮೇಲಿನ ಬಡ್ಡಿ ದರವನ್ನು ಶೇಕಡಾ 7.9 ರಿಂದ ಶೇಕಡಾ 7.1 ಕ್ಕೆ ಇಳಿಕೆ ಮಾಡಿರುವ ಕುರಿತು ಸರ್ಕಾರ ಮಾಹಿತಿ ನೀಡಿದೆ.

ಹಾಗಾಗಿ, ಈಗ ನೌಕರರ ಸ್ವಂತ ಮನೆ ಕಟ್ಟುವ ನನಸು ಮಾಡಲು ಅನುವು ಮಾಡಿಕೊಟ್ಟಿದ್ದು, ಹೊರೆ ಕೊಂಚ ಮಟ್ಟಿಗೆ ಇಳಿಕೆಯಾಗಲಿದೆ. ಅಲ್ಲದೇ, ಉದ್ಯೋಗಿಗಳು ಈಗ ಈ ಬಡ್ಡಿ ದರವನ್ನು 31 ಮಾರ್ಚ್ 2023 ರವರೆಗೆ ಪಡೆಯಬಹುದಾಗಿದೆ.

ಈ ನಿರ್ಧಾರದ ಅಡಿಯಲ್ಲಿ, ಏಪ್ರಿಲ್ 1, 2022 ರಿಂದ ಮಾರ್ಚ್ 31, 2023 ರವರೆಗೆ, ಮನೆ ನಿರ್ಮಾಣ, ಮನೆ ಅಥವಾ ಫ್ಲಾಟ್ ಖರೀದಿಗಾಗಿ ಬ್ಯಾಂಕ್‌ನಿಂದ ಪಡೆದ ಗೃಹ ಸಾಲವನ್ನು ಮರುಪಾವತಿಸಲು ಉದ್ಯೋಗಿಗಳಿಗೆ ಮುಂಗಡದ ಬಡ್ಡಿ ದರವನ್ನು ಸರ್ಕಾರ 80 ಮೂಲಾಂಕಗಳಷ್ಟು ಏರಿಕೆ ಮಾಡಲಾಗಿದ್ದು, ಶೇ.0.8ರಷ್ಟು ಕಡಿತ ಮಾಡಲಾಗಿದೆ.

ಕೇಂದ್ರ ನೌಕರರು ಈಗ ಅಗ್ಗದ ದರದಲ್ಲಿ ಮನೆ ನಿರ್ಮಾಣ ಕಾರ್ಯ ಮಾಡಬಹುದಾಗಿದ್ದು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮುಂಗಡದ ಬಡ್ಡಿದರಗಳಲ್ಲಿನ ಕಡಿತದ ಬಗ್ಗೆ ತಿಳಿಸುವ ಕಚೇರಿ ಜ್ಞಾಪಕ ಪತ್ರವನ್ನು ನೀಡಿದ್ದು, ಈ ಜ್ಞಾಪಕ ಪತ್ರದ ಅನ್ವಯ, ಮಾರ್ಚ್ 31, 2023 ರವರೆಗೆ ಉದ್ಯೋಗಿಗಳು ವಾರ್ಷಿಕ ಶೇಕಡಾ 7.1 ರ ಬಡ್ಡಿದರದಲ್ಲಿ ಮುಂಗಡವನ್ನು ತೆಗೆದುಕೊಳ್ಳಬಹುದಾಗಿದ್ದು, ಇದು ಮೊದಲು ವಾರ್ಷಿಕ ಶೇಕಡಾ 7.9 ರಷ್ಟಿತ್ತು.

HBA ಯೋಜನೆಯು 1 ಅಕ್ಟೋಬರ್ 2020 ರಿಂದ ಪ್ರಾರಂಭವಾಗಿದ್ದು, ಇದರ ಅಡಿಯಲ್ಲಿ, 31 ಮಾರ್ಚ್ 2023 ರವರೆಗೆ, ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ 7.1 ಪ್ರತಿಶತ ಬಡ್ಡಿ ದರದಲ್ಲಿ ಮನೆ ನಿರ್ಮಾಣ ಮುಂಗಡವನ್ನು ನೀಡುತ್ತದೆ.

ವಾಸ್ತವವಾಗಿ, ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಮನೆ ನಿರ್ಮಾಣದ ಮುಂಗಡವನ್ನು ನೀಡಲಿದ್ದು, ಇದರಿಂದ ಕೇಂದ್ರ ಉದ್ಯೋಗಿ ತಮ್ಮ ಕುಟುಂಬದವರ ಹೆಸರಿನಲ್ಲಿ ಪ್ಲಾಟ್‌ನಲ್ಲಿ ಮನೆ ನಿರ್ಮಿಸಲು ಮುಂಗಡವನ್ನು ತೆಗೆದುಕೊಳ್ಳಬಹುದಾಗಿದೆ.

ಎಷ್ಟು ಮುಂಗಡ ತೆಗೆದುಕೊಳ್ಳಬಹುದು??

ಕೇಂದ್ರೀಯ ಉದ್ಯೋಗಿಗಳು ತಮ್ಮ ಮೂಲ ವೇತನದ ಅನುಸಾರ, 34 ತಿಂಗಳವರೆಗೆ ಅಥವಾ ಗರಿಷ್ಠ 25 ಲಕ್ಷದವರೆಗೆ ಎರಡು ರೀತಿಯಲ್ಲಿ ಮುಂಗಡವನ್ನು ತೆಗೆದುಕೊಳ್ಳಬಹುದಾಗಿದೆ. ಇದರ ಜೊತೆಗೆ , ಮನೆಯ ವೆಚ್ಚ ಇಲ್ಲವೇ ಮರುಪಾವತಿ ಮಾಡುವ ಸಾಮರ್ಥ್ಯ, ಇವೆರಡರಲ್ಲಿ ಉದ್ಯೋಗಿಗಳಿಗೆ ಯಾವುದು ಕಡಿಮೆಯೋ ಅದನ್ನು ಮುಂಗಡವಾಗಿ ತೆಗೆದುಕೊಳ್ಳಬಹುದಾಗಿದೆ.

ಹಾಗಾಗಿ, ಈ ಸೌಲಭ್ಯದ ಫಲವಾಗಿ, ಸರ್ಕಾರಿ ನೌಕರರ ಮನೆ ಕಟ್ಟುವ ಕನಸು ಸುಲಭವಾಗಿ ನನಸು ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.

Leave A Reply

Your email address will not be published.