Tiger Mosquito : ಸೊಳ್ಳೆ ಕಡಿತದಿಂದ ಕೋಮಾಗೆ ಜಾರಿದ ವ್ಯಕ್ತಿ!
ಆರೋಗ್ಯವೇ ಭಾಗ್ಯ. ಆದರೆ ನಾವು ಎಷ್ಟೇ ಜಾಗೃತಿ ಆಗಿದ್ದರೂ ಸಹ ಕೆಲವೊಮ್ಮೆ ಜೀವಕ್ಕೆ ಯಾವ ರೀತಿ ಅಪಾಯ ಬರುತ್ತವೆ ಎಂದು ಊಹಿಸಲು ಸಹ ಸಾಧ್ಯವಿಲ್ಲ. ಹೌದು ಇಲ್ಲೊಬ್ಬರಿಗೆ ಒಂದು ಸಣ್ಣ ಸೊಳ್ಳೆ ಕಚ್ಚಿ ಏನೆಲ್ಲಾ ನಡೆದಿದೆ ನೀವೇ ನೋಡಿ.
ಸಾಮಾನ್ಯವಾಗಿ ಸೊಳ್ಳೆ ಕಡಿತವನ್ನು ನಾವು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ, ಅಬ್ಬಬ್ಬಾ ಎಂದರೆ ಸ್ವಲ್ಪ ರಕ್ತ ಹೀರಬಹುದು, ಆ ಜಾಗದಲ್ಲಿ ತುರಿಕೆಯುಂಟಾಗಿ ಸ್ವಲ್ಪ ಊದಿಕೊಳ್ಳಬಹುದು ಅಷ್ಟೇ ಎಂದು ಬಿಟ್ಟು ಬಿಡುತ್ತೇವೆ.
ಆದರೆ ಒಂದು ಸೊಳ್ಳೆ ಕಡಿತದಿಂದ ವ್ಯಕ್ತಿಯೊಬ್ಬ ಕೋಮಾಗೆ ಜಾರಿದ ಘಟನೆ ಬೆಳಕಿಗೆ ಬಂದಿದೆ. ಹೌದು ಸೊಳ್ಳೆ ಕಡಿತದಿಂದ 30 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಈಗ ಕೋಮಾಗೆ ಜಾರಿರುವ ಘಟನೆ ವರದಿಯಾಗಿದೆ.
ಒಂದೇ ಸೊಳ್ಳೆಯ ಕಡಿತದಿಂದ ಒಬ್ಬ ವ್ಯಕ್ತಿ 30 ಆಪರೇಷನ್‌ಗಳಿಗೆ ಒಳಗಾಗಿದ್ದಾರೆ. ವರದಿಗಳ ಪ್ರಕಾರ, ಈ ವ್ಯಕ್ತಿಯ ತೊಡೆಯ ಮೇಲೆ ಸೊಳ್ಳೆ ಕಚ್ಚಿದೆ. ಇದಾದ ಬಳಿಕ ಅಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರ ಬಳಿ ಹೋದರೂ ಕ್ರಮೇಣ ಸೋಂಕು ಹರಡಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಇದಾದ ನಂತರ ಈ ಮೂಲಕ ಆತ ಹಲವು ಸಮಸ್ಯೆಗಳನ್ನು ಎದುರಿಸಲು ಆರಂಭಿಸಿದಾಗ ವೈದ್ಯರೇ ಬೆಚ್ಚಿಬಿದ್ದಿದ್ದರು.
ಆಸ್ಪತ್ರೆಗೆ ದಾಖಲಾದ ನಂತರ ಸೋಂಕು ಹರಡಿ ಅವರ ಯಕೃತ್ತು, ಮೂತ್ರಪಿಂಡ, ಹೃದಯ ಮತ್ತು ಶ್ವಾಸಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು. ನಂತರ ಅವರು ತಮ್ಮ ತೊಡೆಯ ಬಳಿ ಆಪರೇಷನ್ ಮಾಡಬೇಕಾಯಿತು. ಶಸ್ತ್ರಚಿಕಿತ್ಸೆಯ ನಂತರ ಪರಿಸ್ಥಿತಿ ಸಾಮಾನ್ಯವಾಗಬಹುದು ಎಂದು ವೈದ್ಯರು ಭಾವಿಸಿದ್ದರು ಆದರೆ ಅದು ಆಗಲಿಲ್ಲ ಮತ್ತು ಸೋಂಕು ಮತ್ತಷ್ಟು ಹೆಚ್ಚಾಯಿತು. ಇದರ ನಂತರ, ಅನೇಕ ರೀತಿಯ ಚರ್ಮಕ್ಕೆ ಸಂಬಂಧಿಸಿದ ವಸ್ತುಗಳನ್ನು ತೊಡೆಯ ಮೇಲೆ ಕಸಿ ಮಾಡಬೇಕಾಗಿತ್ತು.
ಒಟ್ಟಾರೆಯಾಗಿ, ಈ ವ್ಯಕ್ತಿ 30 ದೊಡ್ಡ ಮತ್ತು ಸಣ್ಣ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು ಮತ್ತು ಈಗ ಕೋಮಾಗೆ ಜಾರಿದ್ದಾರೆ. ಈ ವ್ಯಕ್ತಿಗೆ ಹಲವು ತಿಂಗಳ ಹಿಂದೆ ಸೊಳ್ಳೆ ಕಚ್ಚಿತ್ತು, ಆದರೆ ಇತ್ತೀಚೆಗೆ ಅವರು ಕೋಮಾಕ್ಕೆ ಹೋದಾಗ, ಅವರ ಸಮಸ್ಯೆ ಇದೀಗ ವೈರಲ್ ಆಗಿದೆ.
ಸದ್ಯ ಏಷ್ಯನ್ ಟೈಗರ್ ಜಾತಿಯ ಸೊಳ್ಳೆ ವ್ಯಕ್ತಿಗೆ ಕಚ್ಚಿದೆ ಎಂದು ಹೇಳಲಾಗುತ್ತಿದೆ. ಇವು ತುಂಬಾ ಅಪಾಯಕಾರಿ ಸೊಳ್ಳೆಗಳು ಎಂದು ಮಾಹಿತಿ ದೊರೆತಿದೆ.
ಒಂದು ಸೊಳ್ಳೆ ಕಡಿತದಿಂದ ವ್ಯಕ್ತಿ ಒಬ್ಬ ಇಷ್ಟೊಂದು ಆಪರೇಷನ್ ಮಾಡಿದರೂ ಸಹ ಕೋಮಾಕ್ಕೆ ಹೋಗಿರುವುದರಿಂದ ಸದ್ಯ ಅವರ ಸ್ಥಿತಿ ಊಹಿಸಲು ಸಾಧ್ಯವಿಲ್ಲ.