Home latest Crime news : ಶ್ರದ್ಧಾಳ ಬರ್ಬರ ಹತ್ಯೆ ಮಾಸೋ ಮುನ್ನವೇ ಅದೇ ರೀತಿಯಲ್ಲಿ ನಡೆಯಿತು ಇನ್ನೊಂದು...

Crime news : ಶ್ರದ್ಧಾಳ ಬರ್ಬರ ಹತ್ಯೆ ಮಾಸೋ ಮುನ್ನವೇ ಅದೇ ರೀತಿಯಲ್ಲಿ ನಡೆಯಿತು ಇನ್ನೊಂದು ಪ್ರಕರಣ | ದೆಹಲಿಯಲ್ಲಿ ಮತ್ತೊಂದು ಪೀಸ್ ಪೀಸ್ ಪ್ರಕರಣ!

Hindu neighbor gifts plot of land

Hindu neighbour gifts land to Muslim journalist

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ಧಾ ವಾಕರ್ (Shraddha Walker) ಭೀಕರ ಹತ್ಯೆಯ ಕರಳತೆ ಮಾಸುವ ಮುನ್ನವೇ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಶ್ರದ್ದಾ ಕೊಲೆ ಪ್ರಕರಣ ರಾಷ್ಟ್ರ ರಾಜಧಾನಿ (National Capital) ದೆಹಲಿ (Delhi) ಮಾತ್ರವಲ್ಲ ಇಡೀ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ.ಈ ನಡುವೆ ದೆಹಲಿಯಲ್ಲೇ ಇದೇ ರೀತಿಯ ಮತ್ತೊಂದು ಹತ್ಯೆ ಪ್ರಕರಣ (Murder Case) ನಡೆದಿದ್ದು, ಕೆಲವೊಂದು ಭೀಕರ ಕೃತ್ಯ ಎಷ್ಟರಮಟ್ಟಿಗೆ ನಡುಕ ಹುಟ್ಟಿಸುತ್ತದೋ ಹಾಗೆಯೆ ಮತ್ತೊಬ್ಬರಿಗೆ ಅನುಕರಣೆ ಮಾಡಲು ದೊರೆಯುವ ಅಸ್ತ್ರದಂತೆ ಬಳಸಿಕೊಳ್ಳುತ್ತಿರುವ ಆಘಾತಕಾರಿ ಘಟನೆಗಳು ನಡೆಯುತ್ತಿವೆ ಎನ್ನುವುದು ಅಷ್ಟೆ ಸತ್ಯ. ಇದಕ್ಕೆ ನಿದರ್ಶನ ಎಂಬಂತೆ ರಾಷ್ಟ್ರ ರಾಜಧಾನಿಯ ಪೂರ್ವ ಭಾಗದಲ್ಲಿ ಶ್ರದ್ದಾ ಕೊಲೆ ಮಾದರಿಯಲ್ಲೇ ಭೀಕರ ಅಪರಾಧ ಎಸಗಿರುವುದು ಬೆಳಕಿಗೆ ಬಂದಿದ್ದು, ಅದರ (Crime) ಸುಳಿವುಗಳನ್ನು ಪೊಲೀಸರು ಕಂಡುಹಿಡಿದಿದ್ದಾರೆ.

ತಾಯಿ ಮತ್ತು ಮಗ ಇಬ್ಬರು ಜೊತೆಗೂಡಿ ಪತಿಯನ್ನು ಕೊಂದು ಶವವನ್ನು ಕತ್ತರಿಸಿ ಫ್ರಿಡ್ಜ್​ನಲ್ಲಿಟ್ಟಿದ್ದು, ಬಳಿಕ ಇಬ್ಬರೂ ಬೇರೆ ಬೇರೆ ದಿನಗಳಲ್ಲಿ ಬಂದು ಮಧ್ಯರಾತ್ರಿಯಲ್ಲಿ ಮೃತದೇಹದ ಭಾಗಗಳನ್ನು ಚಾಂದ್ ಚಿತ್ರಮಂದಿರದ ಮುಂಭಾಗದ ಮೈದಾನದಲ್ಲಿ ಎಸೆದಿರುವ ಘೋರ ಕೃತ್ಯ ಬಯಲಾಗಿದೆ.

ಪೂರ್ವ ದೆಹಲಿಯಲ್ಲಿ ಒಬ್ಬ ವ್ಯಕ್ತಿಯ ಕತ್ತರಿಸಿದ ದೇಹದ ಭಾಗಗಳನ್ನು ಪೋಲೀಸರು ಪತ್ತೆ ಹಚ್ಚಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರಾಂಚ್ ತನಿಖೆ ನಡೆಸಿ ದೆಹಲಿಯ ಪಾಂಡವನಗರದ ಮಹಿಳೆ ಮತ್ತು ಆಕೆಯ ಮಗನನ್ನು ಅಪರಾಧದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.

ಜೂನ್‌ ತಿಂಗಳಲ್ಲೇ ದೆಹಲಿಯ ಪಾಂಡವ್ ನಗರದಲ್ಲಿ ಪೊಲೀಸರಿಗೆ ಮೊದಲ ಬಾರಿಗೆ ದೇಹದ ಭಾಗಗಳು ಪತ್ತೆಯಾಗಿದ್ದು,ಅವುಗಳ ಕೊಳೆತ ಸ್ಥಿತಿಯಲ್ಲಿ ಇದ್ದುದ್ದರಿಂದ ದೇಹದ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಇಲ್ಲೂ ಮೃತದೇಹವನ್ನು 22 ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಡಲಾಗಿತ್ತು ಎಂಬ ವಿಚಾರ ತಿಳಿದು ಬಂದಿದೆ.

ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣದ ರೋಚಕ ಸತ್ಯ ಬಯಲಾಗುತ್ತಿದ್ದಂತೆ ಅಪರಿಚಿತ ದೇಹದ ಭಾಗಗಳು ಆಕೆಯದೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗಿದ್ದು, ಆದರೆ ಇದೀಗ ಮೃತದೇಹದ ಭಾಗಗಳು ಪಾಂಡವನಗರ ನಿವಾಸಿ ಅಂಜನ್ ದಾಸ್ ಎಂಬುವವರದ್ದು , ಎಂದು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.ತಂದೆಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿದ್ದಿದ್ದು ತಿಳಿದ ಬಳಿಕ , ಆ ಕಾರಣಕ್ಕಾಗಿ ಮಗ ತಾಯಿಯೊಂದಿಗೆ ಸೇರಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಯ ಹೆಸರು ಪೂನಂ ಮತ್ತು ಮಗನ ಹೆಸರು ದೀಪಕ್ ಹಾಗೂ ಮೃತರ ಹೆಸರು ಅಂಜನ್ ದಾಸ್ ಎಂದು ಹೇಳಲಾಗಿದ್ದು,ತಾಯಿ ಮತ್ತು ಮಗ ಇಬ್ಬರೂ ಮೃತ ಅಂಜನ್ ದಾಸ್‌ಗೆ ಮೊದಲು ಅಮಲು ಮಾತ್ರೆಗಳನ್ನು ತಿನ್ನಿಸಿ, ನಂತರ ಕೊಂದಿದ್ದಾರೆ ಎನ್ನಲಾಗಿದೆ. ಆ ಬಳಿಕ ಆರೋಪಿಗಳು ಆತನ ದೇಹವನ್ನು ಕತ್ತರಿಸಿ, ಫ್ರಿಡ್ಜ್‌ನಲ್ಲಿ ಮೃತದೇಹದ ತುಂಡುಗಳನ್ನು ಸಂಗ್ರಹಿಸಿ ಪಾಂಡವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದೊಂದೇ ಬಿಸಾಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಯಾರಿಗೂ ಅನುಮಾನ ಬರದಂತೆ ಬೇರೆ ಬೇರೆ ದಿನಗಳಲ್ಲಿ, ಮಧ್ಯರಾತ್ರಿಯಲ್ಲಿ, ಮೃತ ದೇಹಗಳ ತುಂಡುಗಳನ್ನು ಚಾಂದ್ ಚಿತ್ರಮಂದಿರದ ಮುಂಭಾಗದ ಮೈದಾನದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ಕುರಿತಾಗಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎನ್ನಲಾಗಿದೆ.