ನಿಮಗಿದು ತಿಳಿದರೆ ಉತ್ತಮ | ಮನೆಯಲ್ಲಿ ಹಣ ಇರಿಸಿಕೊಳ್ಳಲು ಎಷ್ಟು ಮಿತಿ ಇದೆ ಎಂದು ಗೊತ್ತೇ?

ಪ್ರತಿಯೊಬ್ಬರು ದುಡಿದ ಆದಾಯವನ್ನು ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟು ತಲೆ ದೋರದಂತೆ ಮುಂಜಾಗ್ರತ ಕ್ರಮವಾಗಿ ಉಳಿತಾಯ ಮಾಡುವುದು ಉತ್ತಮ ಹವ್ಯಾಸವಾಗಿದೆ. ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸುವುದು ಸಹಜ. ಹಾಗಾಗಿ, ಬ್ಯಾಂಕ್, ಪೋಸ್ಟ್ ಆಫೀಸ್, ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರ ದಲ್ಲಿ ಹೂಡಿಕೆ ಮಾಡುವುದು ವಾಡಿಕೆ . ಅವರ ಅವಶ್ಯಕತೆ ಹಾಗೂ ರಿಸ್ಕ್ ತೆಗೆದುಕೊಳ್ಳಲು ಬಯಸುವವರು ಶೇರ್ ಮಾರ್ಕೆಟ್ಗಳಲ್ಲಿ ಹೂಡಿಕೆ ಮಾಡಿ ಠೇವಣಿ ಇಟ್ಟು ಅಗತ್ಯಕ್ಕೆ ಅನುಸಾರ ಹಣ ಪಡೆಯುವ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈ ನಡುವೆ, ಮನೆಯಲ್ಲಿ ಇಡಬಹುದಾದ ಹಣದ ಮೇಲೆ ಸರ್ಕಾರವು ಮಿತಿಯನ್ನು ನಿಗದಿಪಡಿಸುತ್ತದೆ ಎನ್ನುವ ವಿಚಾರ ಎಲ್ಲೆಡೆ ಹಬ್ಬಿದ್ದು ಕೂಡ ಇದೆ.ಹಾಗೆಂದು ಗಾಬರಿ ಯಾಗುವ ಅವಶ್ಯಕತೆ ಇಲ್ಲ. ಅಂದ ಹಾಗೇ, ಮನೆಯಲ್ಲಿ ಹಣವನ್ನು ಇರಿಸಿಕೊಳ್ಳಲು ಯಾವುದೇ ಮಿತಿಯಿಲ್ಲ ಜೊತೆಗೆ ನೀವು ಬಯಸಿದಷ್ಟು ಹಣವನ್ನು ನೀವು ಮನೆಯಲ್ಲಿ ಇಡಬಹುದಾಗಿದೆ.

ತಜ್ಞರ ಪ್ರಕಾರ, ಭಾರತ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ದೇಶವಾಗಿದ್ದು ಹಾಗಾಗಿ ಕನಿಷ್ಠ ಮಿತಿಯನ್ನು ನಿಖರವಾಗಿ ಯೋಜನೆ ರೂಪಿಸುವುದು ಕಷ್ಟ ಸಾಧ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ . ಭಾರತದ ಆದಾಯ ತೆರಿಗೆ ಕಾನೂನುಗಳು ಯಾವುದೇ ಕಾರಣಕ್ಕೂ 2 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟುಗಳನ್ನು ನಿಷೇಧ ಹೇರುತ್ತವೆ. ಅಂದರೆ, ನೀವು ಒಂದೇ ವಹಿವಾಟಿನಲ್ಲಿ ₹ 3 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಖರೀದಿ ಮಾಡಿದರೆ, ನೀವು ಚೆಕ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಬ್ಯಾಂಕ್ ವರ್ಗಾವಣೆ ಮೂಲಕ ಪಾವತಿ ಮಾಡಬೇಕಾಗುತ್ತದೆ.

ಆದರೆ, ಪ್ರತಿಯೊಬ್ಬರು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ನಿಮ್ಮ ಆದಾಯದ ಮೂಲದ ಜೊತೆಗೆ ನೀವು ತೆರಿಗೆ ಸರಿಯಾಗಿ ಪಾವತಿ ಮಾಡುತ್ತಿದ್ದೀರಾ? ಅಕಸ್ಮಾತ್ ಇಲ್ಲದೇ ಹೋದರೆ ತಕ್ಷಣವೆ ಹೆಚ್ಚುವರಿ ದಂಡ ಪಾವತಿಸಿ ತೆರಿಗೆ ಮೊತ್ತ ಕಟ್ಟುವುದು ಉತ್ತಮ.

ಆದಾಯ ತೆರಿಗೆ ನಿಯಮಗಳ ಅನ್ವಯ, ಸಾಮಾನ್ಯವಾಗಿ ಮನೆಯಲ್ಲಿ ಎಷ್ಟು ಹಣವನ್ನು ಬೇಕಾದರೂ ಇಟ್ಟುಕೊಳ್ಳಬಹುದಾಗಿದೆ. ಆದರೆ, ಮತ್ತೊಂದು ಮುಖ್ಯ ವಿಚಾರವೇನೆಂದರೆ, ಯಾವುದೇ ಕಾರಣಕ್ಕಾಗಿ ತನಿಖಾ ಸಂಸ್ಥೆಯಿಂದ ಸಿಕ್ಕಿಬಿದ್ದರೆ, ಹಣದ ಮೂಲವನ್ನು ಸ್ಪಷ್ಟ ಕಾರಣ ನೀಡಿ ರುಜುವಾತು ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ, ಇದರೊಂದಿಗೆ ಐಟಿಆರ್ ಘೋಷಣೆ ಕೂಡ ತೋರಿಸಬೇಕಾಗುತ್ತದೆ.

ಹಣದ ಮೂಲದ ನಿಖರ ಮಾಹಿತಿ ನೀಡದೆ ಇದ್ದಲ್ಲಿ ನೀವು ಪೋಲಿಸ್ ಠಾಣೆಗೆ ಅಂದರ್ ಆಗ ಬೇಕಾಗಬಹುದು. ಇಲ್ಲವೇ, ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದಷ್ಟೇ ಅಲ್ಲ, ಒಟ್ಟು ಮರುಪಡೆಯಲಾದ ಮೊತ್ತದ 137% ದಂಡವನ್ನು ವಿಧಿಸಬೇಕಾಗುತ್ತದೆ.

Leave A Reply

Your email address will not be published.