Home Health ಮಕ್ಕಳಿಗೆ ಆಗುವ ಜಂತು ಹುಳು ಸಮಸ್ಯೆಗೆ ಪರಿಹಾರ

ಮಕ್ಕಳಿಗೆ ಆಗುವ ಜಂತು ಹುಳು ಸಮಸ್ಯೆಗೆ ಪರಿಹಾರ

Hindu neighbor gifts plot of land

Hindu neighbour gifts land to Muslim journalist

ಮಕ್ಕಳ ಆರೋಗ್ಯದ ಕಡೆಗೆ ಎಷ್ಟು ಗಮನ ವಹಿಸಿದರು ಕೂಡ ಸಾಲದು. ಏಕೆಂದರೆ ಈಗಿನ ಜೀವನ ಶೈಲಿ, ಆಹಾರ ಪದ್ಧತಿಯೇ ಹಾಗಿದೆ. ಇದರಿಂದ ಹೆಚ್ಚಾಗಿ ಮಕ್ಕಳೇ ರೋಗ ರುಜಿನಗಳಿಗೆ ಬಲಿಯಾಗುತ್ತಾರೆ. ಹೀಗಾಗಿ ಇವರಿಗೆ ಹೆಚ್ಚಿನ ರೀತಿಯಲ್ಲಿ ಕಾಳಜಿಯನ್ನು ವಹಿಸಲೇ ಬೇಕು.

ಜಂತುಹುಳುವಿನ ಸೋಂಕಿನಿಂದ ತೊಂದರೆಯಿಂದ ಹೆಚ್ಚಿನ ಜನರಲ್ಲಿ ಅಜೀರ್ಣ ಹೊರತುಪಡಿಸಿ ಇನ್ನಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಜಂತು ಹುಳುವಿನಿಂದ ಗಂಭೀರವಾದ ಅಥವಾ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ಬೇಜವಾಬ್ದಾರಿತನವನ್ನು ಮಾಡುವ ಹಾಗೆ ಇಲ್ಲ.

ಹೇಗೆ ಕಂಡು ಹಿಡಿಯುವುದು?
ಜಂತುಹುಳುವಿನ ಸಂಖ್ಯೆ ಅಧಿಕವಾದರೆ ತೂಕ ಕಡಿಮೆಯಾಗುವುದು ಮತ್ತು ಅಪೌಷ್ಟಿಕತೆ ಉಂಟಾಗುವುದು. ಹೊಟ್ಟೆ ನೋವು ಮತ್ತು ವಾಂತಿ ಕೂಡ ಬರುತ್ತದೆ. ಅವು ಬಾಯಿ, ಮೂಗು ಅಥವಾ ಮಲದ ಮೂಲಕ ಹೊರಕ್ಕೆ ಬರಬಹುದು.

ಹುಳುಗಳಿಂದ ಕರುಳಿಗೆ ಅಡಚಣೆಯಾಗುವುದು. ಇವು ಶ್ವಾಸಕೋಶಕ್ಕೂ ಹೋಗಬಹುದು. ಮಲ ಪರೀಕ್ಷೆಯಿಂದ ಇವುಗಳನ್ನು ಪತ್ತೆ ಮಾಡಬಹುದು. ಇದಕ್ಕೆ ಮೆಬೆಂಡಝೋಲ್ ಔಷಧವನ್ನು ದಿನಕ್ಕೆ ಎರಡು ಬಾರಿಯಂತೆ ಮೂರು ದಿನ ತೆಗೆದುಕೊಳ್ಳಬೇಕು. ಇದು ಕೆಲವು ದಿನಗಳಲ್ಲಿ ಹುಳಗಳನ್ನು ಸಾಯಿಸುತ್ತವೆ.

ಸೋಂಕು ಆಗದಂತೆ ತಡೆಗಟ್ಟಲು ಶೌಚಾಲಯಕ್ಕೆ ಹೋಗಿ ಬಂದ ನಂತರ, ನ್ಯಾಪಿ ಬದಲಾಯಿಸಿದ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ. ಊಟಕ್ಕೆ ಮೊದಲು ಮತ್ತು ಅಡುಗೆ ಮಾಡುವುಕ್ಕಿಂತ ಮುಂಚೆ ಕೈಗಳನ್ನು ತೊಳೆಯಿರಿ. ತರಕಾರಿ ಹಾಗೂ ಹಣ್ಣುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಡಿಯಲು ಕುದಿಸಿದ ನೀರನ್ನೇ ಬಳಸಿ. ಹೊರಗಡೆ, ಬೇಯಿಸಿದ ಬಿಸಿಯಾದ ಆಹಾರವನ್ನು ಮಾತ್ರ ಸೇವಿಸುವುದು ಒಳ್ಳೆಯದು ಮತ್ತು ಸಲಾಡ್ ತಿನ್ನಬೇಡಿ. ಮಕ್ಕಳಿಗೆ ಹೊಟ್ಟೆ ಹುಳದ ಮಾತ್ರೆಗಳನ್ನು ಆಗಾಗ ನೀಡಿ. ಇದು ಶಾಲೆಗಳಲ್ಲಿ ಮತ್ತು ನಿಮ್ಮ ಊರಿನ ಅಂಗನವಾಡಿ ಕೇಂದ್ರಗಳಲ್ಲಿ ದೊರೆಯುತ್ತದೆ.