Home Interesting ‘ದೆವ್ವ’ ದ ಜೊತೆ ಮಾತನಾಡಿದ ಸೆಕ್ಯೂರಿಟಿ ಗಾರ್ಡ್ | ಆಸ್ಪತ್ರೆಯಲ್ಲಿ ನಡೆಯಿತೊಂದು ವಿಚಿತ್ರ ಘಟನೆ |...

‘ದೆವ್ವ’ ದ ಜೊತೆ ಮಾತನಾಡಿದ ಸೆಕ್ಯೂರಿಟಿ ಗಾರ್ಡ್ | ಆಸ್ಪತ್ರೆಯಲ್ಲಿ ನಡೆಯಿತೊಂದು ವಿಚಿತ್ರ ಘಟನೆ | ಶಾಕಿಂಗ್ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ದೆವ್ವ ಇದನ್ನೆಲ್ಲಾ ಈಗಿನ ಕಾಲದಲ್ಲಿ ಜನ ನಂಬೋದು ಸ್ವಲ್ಪ ಕಷ್ಟ ಅಂತಾನೇ ಹೇಳಬಹುದು. ಆದರೆ ಅಲ್ಲೊಂದು ಇಲ್ಲೊಂದು ಕಡೆಯಲ್ಲಿ ಏನಾದರೂ ಇಂತಹ ಘಟನೆಗಳು ಕಂಡು ಬರುವುದು ವರದಿಯಾಗುತ್ತದೆ. ಅಂತಹುದೇ ಒಂದು ಘಟನೆ ಈಗ ಅರ್ಜೆಂಟೀನಾದಲ್ಲಿ ನಡೆದಿದೆ. ಹೌದು, ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಕಾಣಿಸದ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಅರ್ಜೆಂಟೈನಾದ ಆಸ್ಪತ್ರೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬ ‘ದೆವ್ವದ’ದೊಂದಿಗೆ ಮಾತನಾಡಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ವಿಡಿಯೋದಲ್ಲಿ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಸ್ಪತ್ರೆಯ ಮುಖ್ಯ ಬಾಗಿಲು ಇದ್ದಕ್ಕಿದ್ದಂತೆ ತೆರೆದು, ಆದರೆ ನಿಜವಾಗಿ ಯಾರೂ ಇಲ್ಲ. ಆದ್ರೆ, ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಮಾತ್ರ ಅಲ್ಲಿ ಯಾರೋ ಇದ್ದಂತೆ ಕಂಡಿದೆ. ಕೂಡಲೇ ಆತ ತನ್ನ ಆಸನದಿಂದ ಎದ್ದು ಆತ, ನೋ- ಎಂಟ್ರಿ ಹಗ್ಗ ಹೊರ ತೆಗೆದು, ಆಸ್ಪತ್ರೆಯ ರಿಜಿಸ್ಟರ್’ನಲ್ಲಿ ಯಾರದ್ದೋ ಆಗಮನದ ವಿವರಗಳನ್ನ ದಾಖಲಿಸುವ ದೃಶ್ಯವಿದೆ. ನಂತರ ಆತ ಅದೃಶ್ಯ ವ್ಯಕ್ತಿಯೊಂದಿಗೆ (ಭೂತ ರೋಗಿ) ಸಹ ಮಾತನಾಡುತ್ತಾನೆ.

ಅನಂತರ ಒಳಗೆ ಹೋಗುವುದು ಹೇಗೆ ಎಂದು ವಿವರಿಸಿದ ಗಾರ್ಡ್ ಮತ್ತೆ ತನ್ನ ಆಸನಕ್ಕೆ ಬಂದು ಕುಳಿತುಕೊಳ್ಳುತ್ತಾನೆ. ಇದೆಲ್ಲವೂ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಇದನ್ನ ನೋಡಿ ವೈದ್ಯರು ಮತ್ತು ಇತರ ಸಿಬ್ಬಂದಿ ನಿಜಕ್ಕೂ ನಿಜಾನಾ ಅಂತಾ ವಿಮರ್ಶೆ ಮಾಡ್ತಾ ಇದ್ದಾರೆ.

ವೀಡಿಯೊ ವೈರಲ್ ಆದ ನಂತರ, ‘ದೆವ್ವದ ರೋಗಿ’ ಪ್ರವೇಶಿಸಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ನಡೆದಿದೆ. ಆದರೂ ಹೆಚ್ಚಿನ ವಿವರಗಳು ಇನ್ನೂ ಗೊತ್ತಾಗಿಲ್ಲ. ದೆವ್ವದ ರೋಗಿ ನಿಜವಾಗಿಯೂ ಬಂದಿದ್ದಾನೆಯೇ ಅಥವಾ ಸೆಕ್ಯೂರಿಟಿ ಗಾರ್ಡ್ ಅದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾನೆಯೇ.? ಎಂಬ ಬಗ್ಗೆ ಸಂದೇಹಗಳಿವೆ.

ಈ ವೀಡಿಯೊ ನೋಡಿ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ನಿಜವಾಗಿಯೂ ದೆವ್ವಗಳಿವೆಯೇ.? ಎಂದು ಅವು ಚರ್ಚೆ ಶುರುವಾಗಿದೆ. ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್’ನಲ್ಲಿರುವ ಫಿನೋಚಿಯಾಟೊ ಸ್ಯಾನಿಟೋರಿಯಂ ಎಂಬ ಖಾಸಗಿ ಆರೈಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ವೀಡಿಯೋ ಈ ಕೆಳಗೆ ನೀಡಲಾಗಿದೆ.