Home Business Kantara – KGF Hotel : ಕಾಂತಾರ ಕೆಜಿಎಫ್ ಹೆಸರಲ್ಲಿ ಬರಲಿದೆ ಹೋಟೆಲ್ !!ಏನಿದು ಹೊಸ...

Kantara – KGF Hotel : ಕಾಂತಾರ ಕೆಜಿಎಫ್ ಹೆಸರಲ್ಲಿ ಬರಲಿದೆ ಹೋಟೆಲ್ !!ಏನಿದು ಹೊಸ ಸುದ್ದಿ ಅಂತೀರಾ?

Hindu neighbor gifts plot of land

Hindu neighbour gifts land to Muslim journalist

ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಇಷ್ಟು ದಿನವಾದರೂ ಸಿನಿಮಾದ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಅಷ್ಟೇ ಅಲ್ಲದೇ, ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ ತಪ್ಪಾಗದು.

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ.ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು.

ಕಾಂತಾರ ಸಿನಿಮಾ ನೋಡಿ ಸ್ಟಾರ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ, ಅಷ್ಟು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿ ಹಿಟ್ ಸಿನಿಮಾಗಳ ಸಾಲಿನಲ್ಲಿ ಇತಿಹಾಸ ಸೃಷ್ಟಿಸಿದೆ. ಇಷ್ಟೇ ಅಲ್ಲದೆ ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದ್ದಂತು ಸುಳ್ಳಲ್ಲ.

ಕಾಂತಾರ ಕಥೆಗೆ, ರಿಷಬ್ ಶೆಟ್ಟಿ ಅತ್ಯುತ್ತಮ ನಟನೆಗೆ ಪ್ರೇಕ್ಷಕರಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಗಣ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಜಿಎಫ್‌ ಹಾಗೂ ಕೆಜಿಎಫ್ ಚಾಪ್ಟರ್ 2 (KGF Chapter 2) ಯಶ್ ಅಭಿನಯದ ಚಿತ್ರ ಎರಡು ಹಂತದಲ್ಲಿ ಕೂಡಾ ದಾಖಲೆ ಸೃಷ್ಟಿಸಿದೆ.

ಇದೀಗ ಹಿಟ್ ಸಿನಿಮಾ ಲಿಸ್ಟ್ ನಲ್ಲಿರುವ ಕಾಂತಾರ ಹಾಗೂ ಕೆಜಿಎಫ್‌ ಹೆಸರನ್ನು ಬಳಸಿಕೊಂಡು ಎನ್ ಕ್ಯಾಶ್ ಮಾಡಿಕೊಳ್ಳಲು ಹೋಟೆಲ್‌ ಉದ್ಯಮಿಯೊಬ್ಬರು ಮುಂದಾಗಿದ್ದಾರೆ. ಹೌದು, ಕಾಂತಾರ ಹಾಗೂ ಕೆಜಿಎಫ್ ಹೆಸರಲ್ಲಿ ಮಂಗಳೂರು (Mangaluru) ಹಾಗೂ ಬೆಂಗಳೂರಿನಲ್ಲಿ (Bengaluru) ಹೋಟೆಲ್ (Hotel) ನಿರ್ಮಾಣವಾಗಿದ್ದು, ಆಹಾರ ಪ್ರಿಯರು ಹಾಗೂ ಸಿನಿ ಪ್ರಿಯರ ಮನ ಸೆಳೆಯುತ್ತ ಹೊಸ ಪ್ರಯತ್ನಕ್ಕೆ ಕೈ ಹಾಕಲಾಗಿದೆ .ಕಾಂತಾರದ ಹವಾ ಸೃಷ್ಟಿಸಿರುವುದರ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಇದನ್ನೇ ಎನ್‌ ಕ್ಯಾಶ್ ಮಾಡಿಕೊಳ್ಳಲು ಹೋಟೆಲ್ ಉದ್ಯಮಿಯೊಬ್ಬರು ಮುಂದಾಗಿದ್ದು, ಮಂಗಳೂರಿನಲ್ಲಿ ಕಾಂತಾರ ಹೆಸರಿನಲ್ಲಿ ಹೋಟೆಲ್ ಒಂದು ಈಗಾಗಲೇ ನಿರ್ಮಾಣವಾಗಿದ್ದು, ಅತೀ ಶೀಘ್ರದಲ್ಲೇ ಕಾಂತಾರ ಹೋಟೆಲ್ ಪ್ರಾರಂಭ ಮಾಡುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇದರ ಜೊತೆಗೆ ಕಾಂತಾರ ಹೆಸರಿನಲ್ಲಿ ಶುರುವಾಗಲಿರುವ ಹೋಟೆಲ್ನ ಪೋಸ್ಟರ್ ಈಗಾಗಲೇ, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಮತ್ತೊಂದೆಡೆ, ಕೆಜಿಎಫ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಹೋಟೆಲ್‌ ಒಂದು ನಿರ್ಮಾಣವಾಗಿದ್ದು, ಸಹಕಾರ ನಗರದ ಕೊಡಿಗೆಹಳ್ಳಿ ಗೇಟ್ ಬಳಿ ಹೋಟೆಲ್ ಶುರುವಾಗಿದ್ದು, ಆ ಹೊಟೇಲ್ ಗೆ ಕೆಜಿಎಫ್‌ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಕೆಜಿಎಫ್ ನಲ್ಲಿ ಊಟ ಸವಿದವರು ಅರೆ ವ್ಹಾವ್ ..ಎಂದು ಬಾಯಿ ಚಪ್ಪರಿಸಿ ನಳ ಪಾಕದ ಸವಿಯೂಟ ಮಾಡಿದ್ದು, ಆ ಸಿನಿಮಾವನ್ನು ನೆನಪಿಸುವಂತಹ ಸ್ಥಳಗಳಲ್ಲಿ ಕೂತು ಆಹಾರ ಸವಿಯುತ್ತಾ ಖುಷಿ ಪಟ್ಟಿದ್ದಾರೆ.

50 ದಿನ ಪೂರೈಸಿದೆ ಕಾಂತಾರ ಸಿನಿಮಾವನ್ನ ಅನೇಕ ಸೂಪರ್ ಸ್ಟಾರ್​​ಗಳು ವೀಕ್ಷಿಸಿದ್ದು, ಸಿನಿಮಾ ನೋಡಿದ ಕೆಲ ಸ್ಟಾರ್​ ನಟರು ರಿಷಬ್ ಶೆಟ್ಟಿಗೆ ಕಾಲ್ ಮಾಡಿ ಕೂಡ ಶುಭ ಹಾರೈಸಿದ್ದಾರೆ. ಅದರಲ್ಲಿ ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಬಳಿಕ, ದಕ್ಷಿಣ ಭಾರತದ ಮತ್ತೊಬ್ಬ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ಕನ್ನಡದ ಕಾಂತಾರ ಸಿನಿಮಾವನ್ನ ತಮ್ಮದೇ ಶೈಲಿಯಲ್ಲಿ ಮೆಚ್ಚಿ ಕೊಂಡಾಡಿದ್ದು, ಅಲ್ಲದೆ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿ ವಿಶ್ ಮಾಡಿದ್ದಾರೆ.

ಬಾಲಿವುಡ್ ನಟ ಮತ್ತು ಸೆಲೆಬ್ರಿಟಿ ಸುನೀಲ್ ಶೆಟ್ಟಿ, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾ ಕಾಂತಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರದ ಕೊನೆಯ 25 ನಿಮಿಷ ರೋಮಾಂಚನಗೊಳಿಸಿದ್ದು ಅಲ್ಲದೆ, ಕಣ್ಣಲ್ಲಿ ನೀರು ಬಂತು ಎಂದಿದ್ದಾರೆ. ನಾನು ಕೂಡ ಕರಾವಳಿ ಜಿಲ್ಲೆಯ ಭಾಗದವನಾಗಿದ್ದು, ಪ್ರತೀ ವರ್ಷ ಇದೇ ರೀತಿಯ ಕೋಲ ಹಾಗೂ ದೈವದ ಪೂಜೆಗೆ ತಪ್ಪದೇ ಹೋಗುವ ತಮ್ಮ ಅನುಭವವನ್ನೂ ಕೂಡ ನಟ ಹಂಚಿಕೊಂಡಿದ್ದಾರೆ.