ಸೊಸೆ ಟಾರ್ಚರ್ ಕೊಡ್ತಾಳೆ ಅಂತ ಡಿಸಿ ಮುಂದೆ ಕಣ್ಣೀರಿಟ್ಟ ಮಹಿಳೆ!

Share the Article

ಅತ್ತೆ -ಸೊಸೆ ಜಗಳ ಎಲ್ಲಾ ಕಡೆ ಇದ್ದಿದ್ದೆ. ಕೆಲವರಿಗೆ ಅತ್ತೆಯಿಂದ ಟಾರ್ಚರ್ ಆದರೆ ಇನ್ನೂ ಕೆಲವರಿಗೆ ಸೊಸೆಯಿಂದ ಹೀಗೆ ಒಂದಲ್ಲ ಒಂದು ರೀತಿ ಅತ್ತೆ-ಸೊಸೆಗೆ ಆಗಿ ಬರೋದೇ ಇಲ್ಲ. ಹಾಗೇ ಇಲ್ಲೊಬ್ಬರು ಅತ್ತೆ, ಸೊಸೆಯ ಟಾರ್ಚರ್ ಗೆ ಬೇಸತ್ತು ಡಿಸಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನೂ ಈ ಘಟನೆ ಕಲಬುರುಗಿಯಲ್ಲಿ ನಡೆದಿದೆ.

ಜೇವರ್ಗಿ ತಾಲೂಕಿನ ಗಂವಾರದಲ್ಲಿ ಈ ಘಟನೆ ನಡೆದಿದ್ದು, ಕಣ್ಣು ಕಾಣದ ನನ್ನನ್ನು ಸೊಸೆ ಮನೆಯಿಂದ ಹೊರಹಾಕಿದ್ದಾಳೆ. ಆಕೆ ತುಂಬಾ ಟಾರ್ಚರ್ ಕೊಡ್ತಿದ್ದಾಳೆ ಏನ್ ಮಾಡೋಕು ಸಾಹೇಬ್ರೆ ಎಂದು ಕಾಳಮ್ಮ(ಅತ್ತೆ) ಡಿಸಿ ಯಶವಂತ್ ಗುರುಕಾರ್ ಎದುರು ಕಣ್ಣೀರಿಟ್ಟಿದ್ದಾರೆ.

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ವೇಳೆ ಡಿಸಿ ಜನರ ಸಮಸ್ಯೆ ಆಲಿಸುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ಕಾಳಮ್ಮ ತಮ್ಮ ಸಮಸ್ಯೆ ಬಗೆಹರಿಸಿ ಅಂತ ಕೈ ಮುಗಿದಿದ್ದಾರೆ. ವೃದ್ಧಳ ಮನವಿಗೆ ಸ್ಪಂದಿಸಿದ ಡಿಸಿ ಈ ಮಹಿಳೆಗೆ ಕಣ್ಣಿನ ಆಪರೇಷನ್ ಗೆ ವ್ಯವಸ್ಥೆ ಮಾಡಿ ಅಂತ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Leave A Reply