ತೆರೆ ಮೇಲೆ ಬರ್ತಿದೆ Love Jihad | ದೆಹಲಿಯ ಶ್ರದ್ಧಾ ಭೀಕರ ಹತ್ಯೆ ಸ್ಟೋರಿ ಸಿನಿಮಾ ಘೋಷಿಸಿದ ನಿರ್ದೇಶಕ ಮನೀಶ್ ಸಿಂಗ್

ದೆಹಲಿಯಲ್ಲಿ ನಡೆದಿರುವ ಶ್ರದ್ಧಾ ವಾಕರ್ ಹತ್ಯೆ ವಿಷಯದ ಮೇಲೆ ಲವ್ ಜಿಹಾದ್ ಸಂಬಂಧಿತ ಸಿನೆಮಾ ಶೀಘ್ರದಲ್ಲೇ ಬರಲಿದೆ. ಬಾಲಿವುಡ್ ನಿರ್ದೇಶಕ ಮನೀಶ್ ಸಿಂಗ್ ಹೊಸ ಸಿನೆಮಾ ಘೋಷಿಸಿದ್ದಾರೆ.

ಜಿಹಾದಿ ಹಂತಕ ಅಫ್ತಾಬ್ ಅಮೀನ್ ಪೂನಾವಾಲ, ಶ್ರದ್ಧಾ ವಾಕರ್‌ನನ್ನು ಹತ್ಯೆ ಮಾಡಿ 35 ಪೀಸ್‌ಗಳಾಗಿ ಕತ್ತರಿಸಿ ಹಂತಹಂತವಾಗಿ ಆಕೆಯ ದೇಹವನ್ನು ಕಾಡುಗಳಲ್ಲಿ ಎಸೆದು ಬಂದಿದ್ದ.

ಈಗ ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಮನೀಶ್ ಸಿಂಗ್ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ಚಲನಚಿತ್ರ ತಯಾರಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಚಿತ್ರಕಥೆ ಕೆಲಸವನ್ನೂ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರವು ಸಂಪೂರ್ಣವಾಗಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಆಧರಿಸಿದೆ. ಅದರ ಜೊತೆಗೆ ಚಿತ್ರದಲ್ಲಿ `ಲವ್ ಜಿಹಾದ್’ ( Love Jihad) ಕುರಿತು ಹೇಳಲಾಗುವುದು. ಮದುವೆಯಾಗೋದಾಗಿ ನಟಿಸಿ ಹೆಣ್ಣುಮಕ್ಕಳ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿರುವ ಜಿಹಾದಿಗಳ ಕುರಿತು ಈ ಚಿತ್ರ ಬಯಲು ಮಾಡಲಿದೆ ಎಂದು ಹೇಳಿದ್ದಾರೆ.

ಅಮೆರಿಕದ `ಡೆಕ್ಸ್ಟರ್‌’ (Dexter) ವೆಬ್‌ಸೀರಿಸ್‌ನಿಂದ ಪ್ರೇರಿತನಾಗಿ ಶ್ರದ್ದಾಳನ್ನು ಸುಮಾರು ಮೂರು ವರ್ಷಗಳ ಕಾಲ ಬಳಸಿಕೊಂಡು ನಂತರ ಆಕೆ ಮದುವೆಯಾಗಲು ಒತ್ತಾಯ ಮಾಡಿದಳು ಎನ್ನುವ ಕಾರಣಕ್ಕಾಗಿ ಹತ್ಯೆ ಮಾಡಿದ್ದ. ಹತ್ಯೆ ಮಾಡಿದ ನಂತರ ಆಕೆಯ ಮೃತ ದೇಹವನ್ನು 35 ಚೂರುಗಳಾಗಿ ತುಂಡರಿಸಿ ಫ್ರಿಡ್ಜ್ ನಲ್ಲಿಟ್ಟು ವಿಕೃತಿ ಮೆರೆದಿದ್ದ.

ಇತ್ತೀಚೆಗೆ ಈ ಪ್ರಕರಣದ ಕುರಿತು ಟ್ವೀಟ್ ಮಾಡಿದ್ದ ಸಿನಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma), ಶ್ರದ್ಧಾಳನ್ನು ಹತ್ಯೆ ಮಾಡಿರುವ ಆರೋಪಿಗೆ ಅದಕ್ಕಿಂತ ಹೀನಾಯ ಸಾವು ಬರಲಿ, ಆಕೆ ಎದ್ದು ಬಂದು ಅವನನ್ನು ಶಿಕ್ಷಿಸುವಂತೆ ಆಗಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು. ಈಗ ನಿರ್ದೇಶಕರೊಬ್ಬರು ಈ ಘಟನೆ ಕುರಿತು ಸಿನಿಮಾವನ್ನೇ ಘೋಷಿಸಿದ್ದಾರೆ.

ವೃಂದಾವನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು, ಚಿತ್ರಕ್ಕೆ `ಹು ಕಿಲ್ಡ್ ಶ್ರದ್ಧಾ ವಾಕರ್?’ (Who Killed Shraddha Walkar) ಎಂದು ಹೆಸರಿಡಲಾಗಿದೆ.

Leave A Reply

Your email address will not be published.