ಶಿಕ್ಷಣದಿಂದ ವಂಚಿತಳಾದಕೆ ಇದೀಗ ಶ್ರೀಮಂತಳಾಗಿ ಎಲ್ಲರಿಗೂ ಮಾದರಿ!
ಜೀವನ ನಡೆಸಬೇಕೆಂದರೆ ಶಿಕ್ಷಣ ಮುಖ್ಯ ಎಂದು ಹೇಳುವವರು ಅದೆಷ್ಟೋ ಮಂದಿ. ಆದ್ರೆ, ಶಿಕ್ಷಣ ಇಲ್ಲದೆಯೂ ಬದುಕಲ್ಲಿ ಉತ್ತಮ ಸಾಧನೆ ಮಾಡಿದವರು ತುಂಬಾ ಜನ ಇದ್ದಾರೆ. ಹೌದು. ಯಾವುದೇ ಒಂದು ಛಲ ಇದ್ದರೆ ಯಾವುದೇ ಮಟ್ಟಕ್ಕೂ ಕೂಡ ತಲುಪುವುದಕ್ಕೂ ಸಾಧ್ಯ ಅನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ ಆಗಿದ್ದಾರೆ.
ಈಕೆ 16 ನೇ ವಯಸ್ಸಿನಲ್ಲಿ ಶಾಲೆಯಿಂದ ಹೊರಗುಳಿದಿದ್ದಾರೆ. ಆದ್ರೆ, ಈಗ ಮಾತ್ರ ಶ್ರೀಮಂತ ಮಹಿಳೆ. ತನ್ನ 18 ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ದುಡಿಮೆಯಿಂದ ಬೃಹತ್ ಮನೆ ನಿರ್ಮಿಸಿದ್ದಾರೆ. ಇವರು ತಮ್ಮ ಮಕ್ಕಳಿಗೆ ಉತ್ತಮ ಜೀವನಶೈಲಿಯನ್ನು ನೀಡಿರುವುದೂ ಅಲ್ಲದೇ, ನಾಲ್ಕು ಮನೆಗಳನ್ನು ಕಟ್ಟಿಸಿದ್ದಾಳೆ. ಅಲ್ಲದೆ, ಇತರರಿಗೆ ಉದ್ಯೋಗ ನೀಡುತ್ತಿದ್ದು ಎಲ್ಲರ ಹುಬ್ಬೇರಿಸಿದ್ದಾಳೆ. ಆಕೆಯೇ ರಾಚೆಲ್ ಒಲಿಂಗ್ಟನ್. ಸದ್ಯ ರಾಚೆಲ್ ಮತ್ತು ಆಕೆಯ ಕುಟುಂಬವು ಪ್ರಸ್ತುತ ವಾಸಿಸುತ್ತಿರುವ ಮನೆ ನಾಲ್ಕು ಬೆಡ್ರೂಂ ಆಗಿದ್ದು, ಇದಕ್ಕೆ ಸುಮಾರು £ 475,000 (ಸುಮಾರು 4.61 ಕೋಟಿ ರೂಪಾಯಿಗಳು) ವೆಚ್ಚ ಮಾಡಲಾಗಿದೆ.
ಅಷ್ಟಕ್ಕೂ ಇಷ್ಟೊಂದು ದೊಡ್ಡಮಟ್ಟದಲ್ಲಿ ಬೆಳೆಯಲು ಕಾರಣ ಏನೆಂದರೆ ರಾಚೆಲ್ ಕಷ್ಟಪಟ್ಟು ಅಲ್ಲಿಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಅದೇ ಹಣದಿಂದ ಎಸ್ಟೇಟ್ ಏಜೆನ್ಸಿ ಸ್ಥಾಪಿಸಿದಳು. ಹಗಲೂ ರಾತ್ರಿ ಇಲ್ಲಿ ದುಡಿದು ಅನೇಕ ಮಂದಿಗೆ ಉದ್ಯೋಗವನ್ನೂ ಕೊಟ್ಟಳು. ಅಲ್ಲಿಂದ ಆಕೆಯ ದಿಕ್ಕೇ ಬದಲಾಯಿತು. ಅದೇ ಕಾರಣಕ್ಕೆ ಹೇಳುವುದು ನಾವು ಎಲ್ಲಿ ಕಷ್ಟ ಪಟ್ಟು ದುಡಿಯುತ್ತೇವೆ ಅಲ್ಲಿ ನಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ.