Home ದಕ್ಷಿಣ ಕನ್ನಡ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಭಕ್ತರಿಗೆ ಪ್ರತ್ಯೇಕ ಅನ್ನಪ್ರಸಾದ ವ್ಯವಸ್ಥೆಗೆ ಚಾಲನೆ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಭಕ್ತರಿಗೆ ಪ್ರತ್ಯೇಕ ಅನ್ನಪ್ರಸಾದ ವ್ಯವಸ್ಥೆಗೆ ಚಾಲನೆ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಮಾಲಾಧಾರಿ ಅಯ್ಯಪ್ಪ ವೃತಧಾರಿಗಳಿಗೆ ಪ್ರತ್ಯೇಕ ಅನ್ನಪ್ರಸಾದ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಶೇಖರ ನಾರಾವಿಯವರು ಅನ್ನಪ್ರಸಾದ ಬಡಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪುತ್ತೂರು ಅಯ್ಯಪ್ಪ ಭಕ್ತ ಸಮಿತಿಯ ಲೋಕೇಶ ಹೆಗ್ಡೆಯವರು ಸ್ವಾಗತಿಸಿ, ಶ್ರೀ ಮಹಾಲಿಂಗೇಶ್ವರ ದೇವರ ಈ ಅನ್ನಪ್ರಸಾದವು ಮಕರವಿಳಕ್ ತನಕ ಅಂದರೆ ಜನವರಿ 14 ರತನಕ ಇರುತ್ತದೆ ಎಂದು ಹೇಳಿ ಇದರ ಸದುಪಯೋಗವನ್ನು ಎಲ್ಲಾ ಮಾಲಾಧಾರಿ ಅಯ್ಯಪ್ಪ ಸ್ವಾಮಿಗಳು ಪಡೆದು ಕೊಳ್ಳಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಮಾಧವ ಸ್ವಾಮಿಯವರು ಉಪಸ್ಥಿತರಿದ್ದು, ಅನ್ನಪ್ರಸಾದದ ವ್ಯವಸ್ಥೆ ಮಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮತ್ತು ಸದಸ್ಯರಿಗೆ ವಂದಿಸಿದರು.