Home News ತಿರಸ್ಕಾರ – ಸತ್ಕಾರ : ಪ್ರಧಾನಿಗೆ ಆಂಧ್ರದಲ್ಲಿ ಸ್ವಾಗತ , ತೆಲಂಗಾಣದಲ್ಲಿ ತಿರಸ್ಕಾರ!

ತಿರಸ್ಕಾರ – ಸತ್ಕಾರ : ಪ್ರಧಾನಿಗೆ ಆಂಧ್ರದಲ್ಲಿ ಸ್ವಾಗತ , ತೆಲಂಗಾಣದಲ್ಲಿ ತಿರಸ್ಕಾರ!

Hindu neighbor gifts plot of land

Hindu neighbour gifts land to Muslim journalist

ಪ್ರಪಂಚವೇ ಮೆಚ್ಚಿದ ಧೀರ, ಉತ್ತಮ ನಾಯಕ, ಸಜ್ಜನ ಮನುಷ್ಯ, ಸಾಧನೆಗಳ ಶಿಖರಕ್ಕೆ ಮುನ್ನುಡಿಯ ಉದಾಹರಣೆಯೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ. ನಮ್ಮ ದೇಶ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯುತ್ತಿರಲು ಮುಖ್ಯ ಕಾರಣ ಅದು ನಮ್ಮ ನಮ್ಮ ಮೋದಿಯ ನೀತಿ ನಿಯಮಗಳಿಂದ ಮಾತ್ರ ಸಾಧ್ಯ.

ಹಾಗೆಯೇ ನರೇಂದ್ರ ಮೋದಿ ಅವರನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ವಿಶಾಖಪಟ್ಟಣದ ಆಂಧ್ರ ವಿಶ್ವವಿದ್ಯಾಲಯ ಮೈದಾನಕ್ಕೆ ಬರಮಾಡಿಕೊಂಡರು . ಆಂಧ್ರ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ವೈಎಸ್‌ಆರ್‌ಪಿ ಆಯೋಜಿಸಲಾಗಿತ್ತು. ವೈಎಸ್‌ಆರ್‌ಪಿ ಸಂಸದೀಯ ಪಕ್ಷದ ನಾಯಕ ವಿಜಯಸಾಯಿ ರೆಡ್ಡಿ ಅವರೇ ಉಸ್ತುವಾರಿ ನೋಡಿಕೊಂಡಿದ್ದರು.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ದಯಾಪರ, ಉದಾರಿ ಮುಂತಾದ ಪದಗಳಿಂದ ಬಣ್ಣಿಸಿದರು. ರಾಜ್ಯಕ್ಕೆ ಇನ್ನಷ್ಟು ಯೋಜನೆಗಳು ಮತ್ತು ಹೆಚ್ಚುವರಿ ಅನುದಾನ ಒದಗಿಸುವಂತೆ ಕೋರಿದರು. ಮೋದಿ ಅವರನ್ನು ದೆಹಲಿಯಲ್ಲಿ ಆಗಾಗ ಭೇಟಿಯಾಗುತ್ತಿರುವ ಜಗನ್ ಅವರು, ಮೋದಿ ಜೊತೆಗಿನ ತಮ್ಮ ಸಂಬಂಧ ರಾಜಕೀಯವನ್ನು ಮೀರಿದ್ದು ಎಂದಿದ್ದಾರೆ .

ಇದರ ಬೆನ್ನಿನಲ್ಲೇ ಹೈದರಾಬಾದ್‌ನಲ್ಲಿ ಎಂದಿನಂತೆ ತಿರಸ್ಕಾರವೇ ಮೋದಿ ಅವರನ್ನು ಎದುರುಗೊಂಡಿತ್ತು. ಪ್ರಧಾನಿಯನ್ನು ಬರಮಾಡಿಕೊಳ್ಳಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರು ಹೋಗಲಿಲ್ಲ. ಬದಲಿಗೆ, ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಅವರನ್ನು ಕಳುಹಿಸಿದ್ದರು. ಪ್ರಧಾನಿಯನ್ನು ಬರಮಾಡಿಕೊಳ್ಳಲು ಕೆಸಿಆರ್ ಹೋಗದೇ ಇರುವುದು ಈ ವರ್ಷದಲ್ಲಿ ಇದು ನಾಲ್ಕನೇ ಬಾರಿ.

ಇದಲ್ಲದೆ ‘ಬೈ ಬೈ ಮೋದಿ’ ಎಂಬ ಪ್ಲೆಕ್ಸ್‌ಗಳೂ ಹೈದರಾಬಾದ್‌ನ ಬೀದಿಗಳಲ್ಲಿ ಕಾಣಿಸಿವೆ. ‘ನನಗೆ 50 ದಿನಗಳನ್ನು ಕೊಡಿ. ನಾನು ಹೇಳಿದ್ದು ತಪ್ಪಾದರೆ ನನ್ನನ್ನು ಜೀವಂತ ಸುಟ್ಟುಬಿಡಿ’ ಎಂದು 2016ರ ನವೆಂಬರ್‌ನಲ್ಲಿ ಮೋದಿ ಹೇಳಿದ್ದನ್ನು ನೆನಪಿಸುವ ಪ್ಲೆಕ್ಸ್‌ಗಳೂ ಇದ್ದವು. ‘ಈಗ 2,195 ದಿನಗಳಾಗಿವೆ. ಹಾಗಿದ್ದರೂ ಯಾವ ಸುಧಾರಣೆಯೂ ಆಗಿಲ್ಲ ಮೋದಿಯವರೇ’ ಎಂದು ಒಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ. ಮೋದಿ, ಅಮಾನ್ಯ ಮಾಡಲಾದ 11,000 ಮುಖಬೆಲೆಯ ನೋಟು, ಪೆಟ್ರೋಲ್ ಕ್ಯಾನ್ ಮತ್ತು ಉರಿಯುತ್ತಿರುವ ಬೆಂಕಿ ಕಡ್ಡಿಯ ಚಿತ್ರವೂ ಈ ಬ್ಯಾನರ್‌ನಲ್ಲಿ ಇದೆ. ‘ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ತೆಲಂಗಾಣಕ್ಕೆ ಬಂದ ಪ್ರಧಾನಿಯನ್ನು ಈ ರೀತಿ ಹೀಯಾಳಿಸಿದ್ದರ ಹಿಂದೆ ಕೆಸಿಆರ್ ಅವರ ಕೈವಾಡ ಇದೆ’ ಎಂದು ತೆಲಂಗಾಣ ಬಿಜೆಪಿ ಆರೋಪಿಸಿದೆ.

ಈ ಕುರಿತು ಮೋದಿಜಿ ಅವರು ಬೇಗಂಪೇಟೆಯಲ್ಲಿ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ‘ಸಾರ್ವಜನಿಕರಿಗೆ ಕೊಡಲು ಏನೂ ಇಲ್ಲದವರು ನನ್ನನ್ನು ಮೂದಲಿಸುತ್ತಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಇಲ್ಲಿ ಬೇಗದಲ್ಲಿಯೇ ಕಮಲ ಅರಳಲಿದೆ’ ಎಂದು ತಿರುಗೇಟಿನ ಉತ್ತರ ನೀಡಿದ್ದಾರೆ.

ಪ್ರಸ್ತುತ ತೆಲುಗು ಭಾಷಿಕ ಎರಡು ರಾಜ್ಯಗಳಲ್ಲಿ ದೊರೆತ ಭಿನ್ನ ಪ್ರತಿಕ್ರಿಯೆಗಳು ರಾಜಕೀಯ ಸಮೀಕರಣವನ್ನು ಬಿಂಬಿಸುತ್ತಿವೆ. ಈ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಮೋದಿ ಯಾವ ರೀತಿ ಸಂಬಂಧ ಹೊಂದಿದ್ದಾರೆ ಎಂಬ ಗೊಂದಲವು ಜನರಲ್ಲಿ ಮೂಡಿದೆ.