Home latest ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಉದ್ಯೋಗ | ವೇತನ ರೂ.17,000 ದಿಂದ 28,950 ರವರೆಗೆ | ಆಸಕ್ತರು ಅರ್ಜಿ...

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಉದ್ಯೋಗ | ವೇತನ ರೂ.17,000 ದಿಂದ 28,950 ರವರೆಗೆ | ಆಸಕ್ತರು ಅರ್ಜಿ ಸಲ್ಲಿಸಿ

Hindu neighbor gifts plot of land

Hindu neighbour gifts land to Muslim journalist

ಗದಗ ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಲೋಡರ್ಸ್‌ ಮತ್ತು ಕ್ಲೀನರ್ಸ್‌ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ನಿಗಧಿತ ಅರ್ಜಿ ನಮೂನೆ ಮೂಲಕ ಸಲ್ಲಿಸಬೇಕು.

ಹುದ್ದೆಗಳ ವಿವರ
ಲೋಡರ್ : 47
ಕ್ಲೀನರ್ : 11

ಅರ್ಹತೆಗಳು

  • ವಿದ್ಯಾರ್ಹತೆ ಅನ್ವಯಿಸುವುದಿಲ್ಲ.
  • ಕನ್ನಡ ಮಾತನಾಡಲು ಗೊತ್ತಿರಬೇಕು.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು 18 ವರ್ಷ ಪೂರ್ಣಗೊಂಡಿದ್ದು, ಗರಿಷ್ಠ ವಯೋಮಿತಿ 55 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ ಮಾಹಿತಿ
ಜೆನೆರಲ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.300.
ಎಸ್‌ಸಿ / ಎಸ್‌ಟಿ, ಮಹಿಳಾ ಅಭ್ಯರ್ಥಿಗಳಿಗೆ ರೂ.100.
ಅರ್ಜಿ ಶುಲ್ಕವನ್ನು ‘ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಗದಗ’ ಇವರ ಹೆಸರಿಗೆ ಡಿಡಿ ತೆಗೆಯುವ ಮೂಲಕ ಪಾವತಿಸಿ, ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.

ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಅರ್ಜಿಗಳನ್ನು ಹಾಗೂ ಇತರೆ ಹೆಚ್ಚಿನ ಮಾಹಿತಿಗಳನ್ನು ಗದಗ ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಠಡಿ ಸಂಖ್ಯೆ 123, 1ನೇ ಮಹಡಿ ಅಥವಾ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆಯಬಹುದು. ಅಥವಾ www.gadag.nic.in / www.gadagdudc.mrc.gov.in ಗೆ ಭೇಟಿ ನೀಡಿ ಪರಿಶೀಲಿಸಬಹುದು.

ಅರ್ಜಿಗಳನ್ನು ದಿನಾಂಕ 28-11-2022 ರ ಸಂಜೆ 05-30 ರೊಳಗಾಗಿ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶ, ಗದಗ, ಕೊಠಡಿ ಸಂಖ್ಯೆ 23, 1ನೇ ಮಹಡಿ ಇಲ್ಲಿ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ