SBI Credit Card : ನೀವು ಎಸ್ ಬಿಐ ಕಾರ್ಡ್ ಬಳಸಿ ಎಟಿಎಂ ನಿಂದ ಹಣ ವಿತ್ ಡ್ರಾ ಮಾಡ್ತಿದ್ದೀರಾ ? ಹಾಗಾದರೆ ಇದನ್ನೊಮ್ಮೆ ಓದಿ!
ಕಾಲ ಬದಲಾದಂತೆ ಜನರ ಅವಶ್ಯಕತೆಗೆ ಅನುಗುಣವಾಗಿ ಅವಶ್ಯಕತೆಗಳನ್ನು ಪೂರೈಸಲು ವ್ಯವಸ್ಥೆಗಳು ನೆರವಾಗುತ್ತಿವೆ. ಹಿಂದಿನಂತೆ ಬ್ಯಾಂಕುಗಳಿಗೆ ಅಲೆಯುವ ತಾಪತ್ರಯ ಈಗಿಲ್ಲ. ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿಯೆ ಈ ಡಿಜಿಟಲ್ ಯುಗದಲ್ಲಿ ವ್ಯವಹಾರವನ್ನು ನಿರ್ವಹಿಸಲು ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ.
ಇಂದು ಹೆಚ್ಚಿನವರ ಬಳಿ ಕ್ರೆಡಿಟ್ ಕಾರ್ಡ್ ಇದ್ದು, ಮನೆಯ ದಿನಸಿಯಿಂದ ಹಿಡಿದು ನಿತ್ಯ ಉಪಯೋಗಿ ಸಾಧನದವರೆಗೂ ಆನ್ ಲೈನ್ ಪಾವತಿಗೆ ಮಾಡ ಬಹುದಾಗಿದೆ. ಇದರ ಜೊತೆಗೆ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಕೂಡ ಕ್ರೆಡಿಟ್ ಕಾರ್ಡ್ ಬಳಸಬಹುದು. ಹಾಗಾದರೆ, ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ಗರಿಷ್ಠ ಎಷ್ಟು ಮೊತ್ತದ ಹಣ ವಿತ್ ಡ್ರಾ ಮಾಡಬಹುದು? ಅದಕ್ಕೆಷ್ಟು ಶುಲ್ಕ ವಿಧಿಸಲಾಗುತ್ತದೆ? ಎಂಬ ಅನುಮಾನಗಳಿದ್ದರೆ ಉತ್ತರ ಇಲ್ಲಿದೆ ನೋಡಿ
ಇಂದು ನಗದುರಹಿತ ವಹಿವಾಟು ನಡೆಸುವವರೆ ಹೆಚ್ಚು, ಹಿಂದಿನಂತೆ ಪರ್ಸ್ ನಲ್ಲಿ ನಗದು ಹಿಡಿದುಕೊಂಡು ತಿರುಗಿ ಹಣ ಕಳೆದುಕೊಳ್ಳುವ ಭಯ ಈಗಿಲ್ಲ. ಕಾಲ ಈಗ ಬದಲಾಗಿದೆ. ಪರ್ಸ್ ನಲ್ಲಿ ನಗದಿನ ಜಾಗವನ್ನು ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡ್ಗಳು ಭರ್ತಿ ಮಾಡಿಕೊಂಡು ಬಿಟ್ಟಿವೆ. ಕ್ರೆಡಿಟ್ ಕಾರ್ಡ್ ಬಳಕೆಯಿಂದ ಪ್ರಯೋಜನವಿದೆಯಾದರೂ ಎಚ್ಚರ ತಪ್ಪಿದರೆ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಕೂಡ ಹೆಚ್ಚಿದೆ.
ಇಂದು ಆನ್ ಲೈನ್ ವ್ಯವಹಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಬಹುತೇಕರು ನಿತ್ಯದ ವ್ಯವಹಾರಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವುದು ವಾಡಿಕೆ. ಇಂದು ಬಹುತೇಕ ಎಲ್ಲ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಗಳನ್ನು ನೀಡುತ್ತವೆ. ಎಸ್ ಬಿಐ ಕೂಡ ಇದಕ್ಕೆ ಹೊರತಾಗಿಲ್ಲ. ಇನ್ನು ನೀವು ಕೂಡ ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಕೆಲವೊಂದು ವಿಚಾರಗಳನ್ನು ಅರಿತಿದ್ದರೆ ಉತ್ತಮ. ಮುಖ್ಯವಾಗಿ ಕ್ರೆಡಿಟ್ ಕಾರ್ಡ್ ಶುಲ್ಕ, ಪಾವತಿ ಅಥವಾ ವಿತ್ ಡ್ರಾ ಮಿತಿ, ಬಡ್ಡಿ ಸೇರಿದಂತೆ ಕೆಲವೊಂದು ಮಾಹಿತಿಗಳನ್ನು ಹೊಂದಿರೋದು ಅಗತ್ಯ. ಅಲ್ಲದೆ, ಆನ್ ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್ ಪಿನ್ ಜನರೇಟ್ ಮಾಡೋದು ಹೇಗೆ ಎಂಬ ಮಾಹಿತಿ ತಿಳಿಯುವುದು ಕೂಡ ಅವಶ್ಯಕ.
ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಎಟಿಎಂ ಮಷಿನ್ ಗೆ ಹಾಕಬೇಕು. ಆ ಬಳಿಕ ಪಿನ್ ಹಾಗೂ ನಿಮಗೆ ಬೇಕಾದ ಹಣದ ಮೊತ್ತ ನಮೂದಿಸಬೇಕು. ಈ ಪ್ರಕ್ರಿಯೆಯ ಬಳಿಕ ಹಣ ಹಾಗೂ ರಶೀದಿ ಪಡೆಯಬಹುದು.
ಆನ್ ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್ ಪಿನ್ ಜನರೇಟ್ ಹೇಗೆ?
ಎಸ್ ಬಿಐ ವೆಬ್ ಸೈಟ್ sbicard.com ಭೇಟಿ ನೀಡಬೇಕು. ಎಡ ಭಾಗದ ಮೆನುವಿನಲ್ಲಿ My Account ಆಯ್ಕೆ ಮಾಡಿಕೊಂಡು ನೀವು ಪಿನ್ ಜನರೇಟ್ ಮಾಡಲು ಬಯಸುವ ಕ್ರೆಡಿಟ್ ಕಾರ್ಡ್ಆಯ್ಕೆ ಮಾಡಬೇಕು .ಎಸ್ ಎಂಎಸ್ ಮೂಲಕ ಒಟಿಪಿ ನಿಮ್ಮ ಮೊಬೈಲ್ ಗೆ ಬರುತ್ತದೆ. ಒಟಿಪಿ ನಮೂದಿಸಿ ನೀವು ಬಳಕೆ ಮಾಡಲು ಪಿನ್ ನಮೂದಿಸಬೇಕು ಬಳಿಕ Submit ಮೇಲೆ ಕ್ಲಿಕ್ ಮಾಡಿಕೊಂಡರೆ ನಿಮ್ಮ ಪಿನ್ ಜನರೇಟ್ ಆಗುತ್ತದೆ.
ನೀವು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂ ಮೂಲಕ ನಗದು ವಿತ್ ಡ್ರಾ ಮಾಡಿದರೆ, ಆ ಮೊತ್ತದ ಮೇಲೆ ಶುಲ್ಕವನ್ನು ಬ್ಯಾಂಕ್ ವಿಧಿಸುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿ ಸ್ಥಳೀಯವಾಗಿ ವಿತ್ ಡ್ರಾ ಮಾಡಿದರೆ, ಶೇ.2.5 ಅಥವಾ 500ರೂ.ಇವೆರಡರಲ್ಲಿ ಯಾವುದು ದೊಡ್ಡ ಮೊತ್ತವೋ ಅದನ್ನು ದಂಡವಾಗಿ ವಿಧಿಸಲಾಗುತ್ತದೆ. ಇನ್ನು ಅಂತಾರಾಷ್ಟ್ರೀಯ ವಹಿವಾಟಿಗೂ ಕೂಡ ಇಷ್ಟೇ ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಈ ವಿತ್ ಡ್ರಾಗಳ ಮೇಲೆ ಮಾಸಿಕ ಶೇ.3.5 ಹಾಗೂ ವಾರ್ಷಿಕ ಶೇ.42ರಷ್ಟು ಸೇವಾ ಶುಲ್ಕ ವಿಧಿಸಲಾಗುತ್ತದೆ.
ಇದು ನೀವು ಎಟಿಎಂನಿಂದ ನಗದು ವಿತ್ ಡ್ರಾ ಮಾಡಿದ ದಿನಾಂಕದಿಂದ ಸಂಪೂರ್ಣ ಮೊತ್ತದ ಸೆಟ್ಲಮೆಂಟ್ ಅಥವಾ ಮರುಪಾವತಿ ದಿನಾಂಕದ ತನಕ ಅನ್ವಯವಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ನಗದು ವಿತ್ ಡ್ರಾ ಮಾಡುವ ಮಿತಿ ಕ್ರೆಡಿಟ್ ಕಾರ್ಡ್ ಮಿತಿಯನ್ನು ಅವಲಂಬಿತವಾಗಿರುತ್ತದೆ. ಅಂದರೆ ಕ್ರೆಡಿಟ್ ಕಾರ್ಡ್ ಮಿತಿಯ ಶೇ.20-ಶೇ.80ರ ನಡುವೆ ನಗದು ವಿತ್ ಡ್ರಾ ಮಿತಿಯಿರುತ್ತದೆ. ಎಸ್ ಬಿಐ ಸಾಮಾನ್ಯವಾಗಿ ಶೇ.80ರಷ್ಟು ನಗದು ವಿತ್ ಡ್ರಾ ಮಿತಿ ನೀಡುತ್ತದೆ.
ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ 2ಲಕ್ಷ ರೂ. ಆಗಿದ್ದರೆ, ನೀವು ಅದರ ಶೇ.80ರಷ್ಟನ್ನು ಅಂದರೆ, 1,60,000 ರೂ. ವಿತ್ ಡ್ರಾ ಮಾಡಬಹುದಾಗಿದೆ. ಇಂದಿನ ಯುಗದಲ್ಲಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ತಿಳಿದಿದ್ದರೆ ಸುಲಭವಾಗಿ ಕುಳಿತಲ್ಲೇ ಹಣ ರವಾನೆ, ಹಣ ಪಡೆಯಬಹುದಾಗಿದೆ.