ತಲಾಖ್ ನೀಡಿದ ಮಹಿಳೆಯೋರ್ವಳ ಮೇಲೆ ಗಂಡ, ಗಂಡನ ತಮ್ಮ ಹಾಗೂ ಧರ್ಮಗುರುಗಳಿಂದ ಅತ್ಯಾಚಾರ!

ಮಹಿಳೆಯೊಬ್ಬರಿಗೆ ತ್ರಿವಳಿ ತಲಾಖ್ ನೀಡಿದ ಬಳಿಕ ಪತಿ, ಮೈದುನ ಮತ್ತು ಧರ್ಮಗುರು ಸೇರಿ ಹಲವಾರು ಬಾರಿ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 

ಐದು ವರ್ಷಗಳ ಹಿಂದೆ ಮಹಿಳೆಯು ಸಲ್ಮಾನ್ ಎಂಬಾತನನ್ನು ಮದುವೆಯಾಗಿದ್ದರು. ಕೆಲವು ತಿಂಗಳ ಹಿಂದೆ ಸಲ್ಮಾನ್ ತನ್ನ ಪತ್ನಿಗೆ, ಧರ್ಮಗುರು ಗುಡ್ಡು ಹಾಜಿಯ ಸಲಹೆಯ ಮೇರೆಗೆ ತ್ರಿವಳಿ ತಲಾಖ್ ನೀಡಿದ್ದಾನೆ. ನಂತರ ಪತ್ನಿಗೆ ತನ್ನ ಕಿರಿಯ ಸಹೋದರನನ್ನು ಮದುವೆಯಾಗಿ ಬಳಿಕ ಆತನಿಗೂ ವಿಚ್ಛೇದನ ನೀಡಿದರೆ ಮಾತ್ರ ನಿನ್ನನ್ನು ನನ್ನ ಹೆಂಡತಿಯಾಗಿ ಸ್ವೀಕರಿಸುವುದಾಗಿ ಹೇಳಿದ್ದಾನೆ.

ಆತನ ಮಾತನ್ನು ನಂಬಿದ ಮಹಿಳೆಯು ಆತ ಹೇಳಿದಂತೆ ಪತಿಯಿಂದ ವಿಚ್ಚೇಧನ ಪಡೆದು ಬಳಿಕ ಆತನ ಸಹೋದರ ಇಸ್ಲಾಂನನ್ನು ಮದುವೆಯಾಗಿದ್ದಾಳೆ. ಬಳಿಕ ಆತನ ಸಹೋದರ ಇಸ್ಲಾಂ ಆಕೆಗೆ ತಲಾಖ್ ನೀಡಲು ನಿರಾಕರಿಸಿದ. ಅಲ್ಲದೇ ತನ್ನ ಅಣ್ಣ ಸಲ್ಮಾನ್ ನೊಂದಿಗೆ ಸೇರಿ ತನ್ನ ಅತ್ತಿಗೆಯ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ.

ಮನೆಯಲ್ಲಿ ಆಕೆ ಇರುವಾಗ ಸಲ್ಮಾನ್ ಮತ್ತು ಇಸ್ಲಾಂ ಇಬ್ಬರೂ ನಿರಂತರವಾಗಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇವರಿಬ್ಬರೂ ಮಾತ್ರವಲ್ಲದೆ ಸ್ಥಳೀಯ ಧರ್ಮಗುರು ಗುಡ್ಡು ಹಾಜಿ ಎಂಬವವರೂ ಸೇರಿ ಹಲವಾರು ಸಂದರ್ಭಗಳಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಮೂವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದೂ, ದೂರಿನ ಆಧಾರದ ಮೇಲೆ ಗುಡ್ಡು ಹಾಜಿ, ಸಲ್ಮಾನ್, ಇಸ್ಲಾಂ ಮತ್ತು ಅವರ ಕುಟುಂಬದ ಮೂವರ ಮೇಲೆ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಗ್ಯಾಂಗ್ ರೇಪ್, ಐಪಿಸಿ ಸೆಕ್ಷನ್ 377 ಡಿ ಯಲ್ಲಿ ಅಸ್ವಾಭಾವಿಕ ಲೈಂಗಿಕ ಮತ್ತು ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆ-2019 ಸೆಕ್ಷನ್‌ಗಳ ಅಡಿಯಲ್ಲಿ ಒಟ್ಟು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ತನಿಖೆ ನಡೆಸಿದ್ದಾರೆ.

Leave A Reply

Your email address will not be published.