Home Interesting ಕಾರಿಗೆ ಒರಗಿ ನಿಂತ ಬಾಲಕನ ಎದೆಗೆ ಒದ್ದ ಪ್ರಕರಣ | ಒದೆ ತಿಂದ ಬಾಲಕನಿಗೆ ಐಷರಾಮಿ...

ಕಾರಿಗೆ ಒರಗಿ ನಿಂತ ಬಾಲಕನ ಎದೆಗೆ ಒದ್ದ ಪ್ರಕರಣ | ಒದೆ ತಿಂದ ಬಾಲಕನಿಗೆ ಐಷರಾಮಿ ಕಾರಲ್ಲಿ ರೈಡ್ ಆಫರ್ ಮಾಡಿದ ಹೃದಯವಂತ!

Hindu neighbor gifts plot of land

Hindu neighbour gifts land to Muslim journalist

ರಾಜಸ್ಥಾನ ಮೂಲದ ಆರು ವರ್ಷದ ಗಣೇಶ್ ಎಂಬ ಬಾಲಕನನ್ನು ಕಾರಿನ ಮಾಲೀಕ ಶಿಹಶಾದ್ ಎಂಬಾತ ತನ್ನ ಕಾರಿಗೆ ಒರಗಿ ನಿಂತಿದ್ದ ಎಂಬ ಸಣ್ಣ ಕಾರಣಕ್ಕೆ ಬಾಲಕನಿಗೆ ಒದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳ ಹಿಂದೆ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ, ಅದೇ ಬಾಲಕನಿಗೆ ಕೇರಳದ ಬ್ಯುಸಿನೆಸ್‌ಮ್ಯಾನ್ ಒಬ್ಬರು ತನ್ನ ಕಿಯಾ ಕಾರ್ನಿವಲ್ ಕಾರ್‌ನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದಾರೆ.

ಕಳೆದ ವಾರ ಕೇರಳದ ತಲಶೇರಿಯಲ್ಲಿ ರಾತ್ರಿ ೮ ಗಂಟೆಯ ಹೊತ್ತಿಗೆ ಶಿಹಶಾದ್ ತನ್ನ ಟಾಟಾ ಟಿಯಾಗೋ ನೋ ಪಾರ್ಕಿಂಗ್ ಝೂನ್ ನಲ್ಲಿ ನಿಲ್ಲಿಸಿದ್ದ. ಅದೇ ಸಮಯಕ್ಕೆ ಅಲ್ಲಿ ಬಲೂನ್‌ಗಳನ್ನು ಮಾರುತ್ತಿದ್ದ ಗಣೇಶ್ ಎಂಬ ಬಾಲಕ ಅರಿವಿಲ್ಲದೆ ಶಿಹಶಾದ್‌ನ ಕಾರಿಗೆ ಒರಗಿದ. ಇದನ್ನು ಕಂಡ ಶಿಹಶಾದ್‌ನೇರವಾಗಿ ಆ ಬಾಲಕನ ಬಳಿ ಬಂದು ಏನನ್ನೂ ಹೇಳದೆ ಇದ್ದಕ್ಕಿಂದ್ದಂತೆ ಬಾಲಕನ ಎದೆಯ ಮೇಲೆ ಒದ್ದಿದ್ದಾನೆ.

ಕೂಡಲೇ ಸ್ಥಳದಲ್ಲಿದ್ದ ಜನರು ಕಾರಿನ ಬಳಿ ಧಾವಿಸಿ, ಆತನ ನಡೆಯನ್ನು ಪ್ರಶ್ನಿಸತೊಡಗಿದ್ದಾರೆ. ಅದಾದ ನಂತರ ಕೆಲವೇ ಹೊತ್ತಲ್ಲಿ ಶಿಹಶಾದ್ ಜಾಗ ಖಾಲಿ ಮಾಡಿದ್ದಾನೆ. ಅಲ್ಲೇ ಇದ್ದ ಸಿಸಿ ಟಿವಿಯಲ್ಲಿ ಈ ಎಲ್ಲಾ ದೃಶ್ಯಗಳೂ ಸಹ ಸೆರೆಯಾಗಿದ್ದು ಘಟನೆ ನಡೆದ ಬಳಿಕ ವೈರಲ್ ಆಗಿದೆ.

ವಿಡಿಯೋ ವೈರಲ್ ಆದ ಕೂಡಲೇ ಪೊಲೀಸರು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಆರೋಪಿ ಮಹಮ್ಮದ್ ಶಿಹಶಾದ್ ನ ಮೇಲೆ ಐಪಿಸಿ ಸೆಕ್ಷನ್ 308, 323 ಕೋಡ್‌ಗಳ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದೂ, ಆತನನ್ನು ಬಂಧಿಸಿ 15 ದಿವಸಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಶಿಹಶಾದ್‌ನ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಗೊಳಿಸಲು ಆದೇಶಿಸಿದ್ದಾರೆ.

ಘಟನೆಯ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನನ್ನು ಭೇಟಿಯಾಗಲು ಬಂದಿದ್ದ, ಕೇರಳದ ಅಚ್ಚಾಯನ್ಸ್ ಜ್ಯುವೆಲ್ಲರಿಯ ಮಾಲೀಕರಾದಂತಹ ಟೋನಿ ವರ್ಕಿಚ್ಚನ್ ಎಂಬ ಬ್ಯುಸಿನೆಸ್‌ಮ್ಯಾನ್ , ಬಾಲಕನ ಯೋಗ ಕ್ಷೇಮ ವಿಚಾರಿಸಿದ ನಂತರ ಬಾಲಕನ ಹೆತ್ತವರೊಂದಿಗೆ ಮಾತನಾಡಿ, 20000 ರೂ ನಗದು ನೀಡಿ ಹಸ್ತ ಸಹಾಯ ಮಾಡಿದ್ದಾರೆ.

ಬಾಲಕನಿಗೆ ಇನ್ನೂ ಸಹ ಆತ ತನಗೆ ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾನೆ ಎಂದೇ ತಿಳಿದಿಲ್ಲ. ಅಲ್ಲದೇ ಬಾಲಕ ಮತ್ತು ಹೆತ್ತವರು ಆ ಆಘಾತದಿಂದ ಹೊರ ಬಂದಿಲ್ಲ. ಇನ್ನು ಬಾಲಕ ಹಾಗೂ ಆತನ ಹೆತ್ತವರನ್ನು ಈ ಆಘಾತದಿಂದ ಹೊರತರಲು ಅವರು ಕೌನ್ಸಿಲಿಂಗ್ ವ್ಯವಸ್ಥೆಯನ್ನು ಟೋನಿ ವರ್ಕಿಚ್ಚನ್ ಕಲ್ಪಿಸಿದ್ದಾರೆ. ಇಷ್ಟು ಮಾತ್ರವಲ್ಲದೇ, ಬಾಲಕ ಆಸ್ಪತ್ರೆಯಿಂದ ಹೊರಬಂದ ಮೇಲೆ, ಆತನನ್ನು ತನ್ನ ಕಿಯಾ ಕಾರ್ನಿವಲ್ ಕಾರ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡುವುದಾಗಿಯೂ ಹೇಳಿದ್ದಾರೆ.

ಟೋನಿ ವರ್ಕಿಚ್ಚನ್‌ರ ನಡೆ ನಿಜಕ್ಕೂ ಪ್ರಶಂಸನೀಯವಾಗಿದೆ. ಶಿಹಶಾದ್ ಈತನಿಂದ ಕಲಿಯಬೇಕಾಗಿರುವುದು ಸಾಕಷ್ಟಿದೆ. ಭೇಧ-ಭಾವ ಮಾಡದೇ ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ನಡೆದಾಗ ಮಾತ್ರ ಒಬ್ಬ ವ್ಯಕ್ತಿ ಮನುಷ್ಯನಾಗಲು ಸಾಧ್ಯ. ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.