ಪೋಸ್ಟ್ ಆಫೀಸ್ ನಲ್ಲಿದೆ ‘ಗ್ರಾಮ ಸುರಕ್ಷಾ ಯೋಜನೆ’ | ಪ್ರತಿ ತಿಂಗಳು 1,500 ಠೇವಣಿ ಮಾಡುವ ಮೂಲಕ ಪಡೆಯಿರಿ 35ಲಕ್ಷ ರೂ.|
ಉಳಿತಾಯ ಎಂಬುದು ಈ ದುಬಾರಿ ದುನಿಯಾದಲ್ಲಿ ಕಷ್ಟ ಸಾಧ್ಯ. ಆದರೂ ಹಾಗೋ ಹೀಗೋ ಉಳಿತಾಯ ಮಾಡಿದರೆ ಭವಿಷ್ಯ ಉತ್ತಮವಾಗಿರುತ್ತದೆ ಎಂಬ ಮಾತಿದೆ. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಪಡೆಯುವಂತಹ ಹಲವು ಯೋಜನೆಗಳು ಪೋಸ್ಟ್ ಆಫೀಸ್‌ನಲ್ಲಿವೆ.
ಹಾಗಿದ್ರೆ, ಇನ್ಯಾಕೆ ತಡ ಬನ್ನಿ ಪೋಸ್ಟ್ ಆಫೀಸ್ ನಲ್ಲಿರೋ ಉತ್ತಮ ಯೋಜನೆ ಬಗ್ಗೆ ತಿಳಿದುಕೊಳ್ಳೋಣ. ಹೌದು. ನೀವು ಪ್ರತಿ ತಿಂಗಳು 1500 ರೂಪಾಯಿಗಳನ್ನು ಠೇವಣಿ ಮಾಡಿ, ಕೊನೆಯದಾಗಿ 31 ರಿಂದ 35 ಲಕ್ಷ ರೂಪಾಯಿಗಳ ರಿಟರ್ನ್ ಪಡೆಯಬಹುದಾಗಿದೆ. ಅಂಚೆ ಕಛೇರಿಯ ಈ ಯೋಜನೆಯೇ ‘ಗ್ರಾಮ ಸುರಕ್ಷಾ ಯೋಜನೆ’.
ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ಈ ಯೋಜನೆಯಲ್ಲಿ ನೀವು ಪಡೆಯಬಹುದು. 19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಡಿಯಲ್ಲಿ ಕನಿಷ್ಠ ವಿಮಾ ಮೊತ್ತವು 10,000 ರಿಂದ 10 ಲಕ್ಷ ರೂಪಾಯಿ. ಒಬ್ಬ ವ್ಯಕ್ತಿ 19 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 10 ಲಕ್ಷ ರೂಪಾಯಿಗಳ ಪಾಲಿಸಿಯನ್ನು ಖರೀದಿಸಿದರೆ, ಅವನ ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ 1515 ರೂಪಾಯಿ ಆಗುತ್ತದೆ. 58 ವರ್ಷಕ್ಕೆ 1463 ರೂಪಾಯಿ ಮತ್ತು 60 ವರ್ಷಕ್ಕೆ 1411 ರೂಪಾಯಿ ಆಗಿರುತ್ತದೆ. ಈ ಮೊತ್ತ ಪಾವತಿಸಿದ್ರೆ 55 ವರ್ಷಗಳಿಗೆ 31.60 ಲಕ್ಷ ರೂಪಾಯಿ ಸಿಗುತ್ತದೆ. 58 ವರ್ಷಗಳಿಗೆ 33.40 ಲಕ್ಷ ಮತ್ತು 60 ವರ್ಷಗಳಿಗೆ 34.60 ಲಕ್ಷ ರೂಪಾಯಿ ಮೆಚ್ಯುರಿಟಿ ಲಾಭವನ್ನು ಪಡೆಯಬಹುದು.
ಯೋಜನೆಯ ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಮಾಡಬಹುದು. ಪ್ರೀಮಿಯಂ ಪಾವತಿಸಲು 30 ದಿನಗಳ ಸಮಯವಿರುತ್ತದೆ. ಈ ಯೋಜನೆಯಲ್ಲಿ ನೀವು ಸಾಲವನ್ನು ಸಹ ತೆಗೆದುಕೊಳ್ಳಬಹುದು. ಈ ಸ್ಕೀಮ್ ತೆಗೆದುಕೊಂಡ 3 ವರ್ಷಗಳ ನಂತರವೂ ನೀವು ಅದನ್ನು ಸರೆಂಡರ್ ಮಾಡಬಹುದು. ಆದರೆ ಬೆನಿಫಿಟ್ಸ್ ಸಿಗುವುದಿಲ್ಲ.