ಬಂಟ್ವಾಳ : ಯುವಕನಿಗೆ ಚೂರಿ ಇರಿತ | ಮೂವರು ಆರೋಪಿಗಳ ಬಂಧನ

Share the Article

ಬಂಟ್ವಾಳ: ಯುವಕನೋರ್ವನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ನಂದಾವರ ನಿವಾಸಿ ಮಹಮ್ಮದ್ ಅರ್ಪಾಸ್ ಎಂಬಾತನಿಗೆ ಮೂವರು ಸೇರಿ ಚೂರಿ ಇರಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆಯಲ್ಲಿ ಗಾಯಗೊಂಡ ಅರ್ಪಾಸ್ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಾಳಿಪಡ್ಡು ನಿವಾಸಿಗಳಾದ ನವಾಜ್ ಹಾಗೂ ಆತನ ಸ್ನೇಹಿತರಾದ ಜಾಕೀರ್, ಸಫ್ರಾನ್ ಎಂಬುವರನ್ನು ಪೋಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Leave A Reply