Home Interesting ಇಲ್ಲೊಬ್ಬ ವಧು ಮದವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ | ಕಾರಣ ತಿಳಿದರೆ ನೀವೇ ದಂಗಾಗ್ತೀರಾ….

ಇಲ್ಲೊಬ್ಬ ವಧು ಮದವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ | ಕಾರಣ ತಿಳಿದರೆ ನೀವೇ ದಂಗಾಗ್ತೀರಾ….

Hindu neighbor gifts plot of land

Hindu neighbour gifts land to Muslim journalist

ಕೆಲವರಿಗೆ ತಮ್ಮ ಮದುವೆಯ ಪ್ರತೀ ಕ್ಷಣವನ್ನು ಕೂಡಾ ಸುಂದರವನ್ನಾಗಿಸಬೇಕೆಂಬ ಆಸೆ . ಇದಕ್ಕಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಕೆಲವೊಮ್ಮೆ ವಿಶಿಷ್ಟ ರೀತಿಯ ಆಗಮನದಿಂದ ಎಲ್ಲರ ಗಮನ ಸೆಳೆದರೆ, ಇನ್ನು ಕೆಲವೊಮ್ಮೆ ಮನೆ ಮಂದಿ ವಧು ವರರಿಗೆ ನೀಡುವ ಸರ್ಪೈಸ್ ನೀಡಿ ಬೆರಗಾಗಿಸುತ್ತಾರೆ. ಇನ್ನು ಕೆಲವು ಮದುವೆಯಲ್ಲಿ ನಡೆಯುವ ವಿಚಿತ್ರ ಘಟನೆಗಳು ಹುಬ್ಬೇರಿಸಿ ಬಿಡುತ್ತವೆ. ಆದರೆ ಇಲ್ಲೊಬ್ಬಳು ಕೊನೆ ಕ್ಷಣದಲ್ಲಿ ಮದುವೆಯನ್ನೇ ರಿಜೆಕ್ಟ್ ಮಾಡಿದ್ದಾಳೆ. ಅಷ್ಟಕ್ಕೂ ಮದುವೆ ಹುಡುಗಿ ಮದುವೆ ನಿಲ್ಲಿಸಲು ಕಾರಣ ಏನಂತೀರಾ?

ಸ್ವಲ್ಪ ವಿಚಿತ್ರ ಆದರೂ ಇದು ನಿಜವಾದ ಘಟನೆ ಹೌದು
ಮೂಲತ ಹಲ್‌ದ್ವಾನಿ ಮೂಲದ ವಧು ಮತ್ತು ಆಲೋರಾ ಮೂಲದ ವರನಿಗೂ ಕಳೆದ ಜೂನ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆದಿತ್ತು. ಹಾಗೆಯೇ ಇಬ್ಬರ ಮದುವೆ ನ.5ಕ್ಕೆ ನಡೆಯಬೇಕಿತ್ತು. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ವರನ ಕುಟುಂಬಕ್ಕೆ ಇದೀಗ ವಧುವಿನ ಕುಟುಂಬದವರು ಬ್ಯಾಡ್ ಸರ್ಪ್ರೈಸ್ ನೀಡಿದ್ದಾರೆ.

ಮದುವೆ ಹುಡುಗಿಯ ಲೆಹೆಂಗಾ ಸರಿಯಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಮದುವೆ ರದ್ದು ಮಾಡಿಕೊಂಡಿದ್ದಾರೆ. ಪರಸ್ಪರ ಆರೋಪ-ಪ್ರತ್ಯಾರೋಗಳಿಂದಾಗಿ ಕಳೆದ ಅ.30ರಂದೇ ಎರಡು ಕುಟುಂಬ ಮದುವೆ ರದ್ದು ಮಾಡಿಕೊಳ್ಳಲು ಬಯಸಿದ್ದರು. ಸಂಬಂಧಿಕರು ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿ, ವಿಫಲವಾದ ಬಳಿಕ ಎರಡು ಮನೆಯವರು ಕೊಟ್ಟಾಲಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಬಳಿಕ ಠಾಣೆಯಲ್ಲಿ ಎರಡು ಕುಟುಂಬದವರಿಗೆ ಬುದ್ದಿ ಮಾತಿನ ಜತೆಗೆ ಎಚ್ಚರಿಕೆ ನೀಡಿದ ಬಳಿಕ ಕೊನೆಗೂ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದರು.

ಎರಡು ಸಂಬಂಧಗಳಿಗೂ ಒಪ್ಪಂದ ಆದ ನಂತರ ಸಂಪ್ರದಾಯದಂತೆ ಇತ್ತೀಚೆಗೆ ವರನ ತಂದೆ ವಧುವಿಗೆ 10 ಸಾವಿರ ರೂ. ಮೌಲ್ಯದ ಲೆಹೆಂಗಾವನ್ನು ಕಳುಹಿಸಿಕೊಟ್ಟಿದ್ದರು. ಆದರೆ, ಲೆಹೆಂಗಾ ಇಷ್ಟವಾಗಲಿಲ್ಲ ಎಂಬ ವಿಚಾರಕ್ಕೆ ಎರಡು ಕುಟುಂಬಗಳು ನಡುವೆ ಮನಸ್ತಾಪ ಮತ್ತು ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿದೆ. ಕೊನೆಗೆ ವಧು ಮದುವೆಯನ್ನೇ ರದ್ದು ಮಾಡಿಕೊಂಡಿದ್ದಾಳೆ.

ಒಟ್ಟಿನಲ್ಲಿ ಮದುವೆಯ ಬಗೆಗಿನ ನೂರಾರು ಕನಸುಗಳನ್ನು ಹೊತ್ತುಕೊಂಡ ವಧು ವರರಿಗೆ ಮತ್ತು ಕುಟುಂಬದವರಿಗೆ ನಿರಾಶೆ ಆಗಿರೋದಂತೂ ಖಚಿತ.