Home latest ಟ್ಯೂಷನ್ ವಿದ್ಯಾರ್ಥಿಗೆ ಮದ್ಯ ನೀಡಿ ನಿತ್ಯ ಲೈಂಗಿಕ ದೌರ್ಜನ್ಯ, ಶಿಕ್ಷಕಿಯ ಬಂಧನ !

ಟ್ಯೂಷನ್ ವಿದ್ಯಾರ್ಥಿಗೆ ಮದ್ಯ ನೀಡಿ ನಿತ್ಯ ಲೈಂಗಿಕ ದೌರ್ಜನ್ಯ, ಶಿಕ್ಷಕಿಯ ಬಂಧನ !

Hindu neighbor gifts plot of land

Hindu neighbour gifts land to Muslim journalist

ಮದ್ಯ ನೀಡಿ 16 ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಪೊಲೀಸರು ಈ ಶಿಕ್ಷಕಿಯನ್ನು ಸೋಮವಾರ (ನ.7) ಬಂಧಿಸಿದ್ದಾರೆ.

ಈ ಘಟನೆ ತ್ರಿಸ್ಸೂರ್‌ನಲ್ಲಿ ನಡೆದಿದೆ. ಸಂತ್ರಸ್ತ ಬಾಲಕ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದನ್ನು ನೋಡಿ ಆಪ್ತ ಸಮಾಲೋಚನೆ ನಡೆಸಿದಾಗ ತನ್ನ ಮೇಲೆ ಶಿಕ್ಷಕಿ ನಿತ್ಯವು ನಡೆಸುತ್ತಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯು ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಈ ಲೈಂಗಿಕ ದೌರ್ಜನ್ಯದಿಂದ ಬಾಲಕನ ವರ್ತನೆಯಲ್ಲಿ ಬದಲಾವಣೆಯಾಗಿದೆ. ಇದನ್ನು ಆ ಶಾಲೆಯ ಶಾಲಾ ಶಿಕ್ಷಕಿ ಮೊದಲು ಗಮನಿಸಿ, ಆತನನ್ನು ವಿಚಾರಿಸಿದ್ದಾರೆ. ಆದರೆ, ಆತ ಯಾವುದನ್ನು ಬಹಿರಂಗಪಡಿಸದಿದ್ದಾಗ, ಆತನಿಗೆ ಆಪ್ತ ಸಮಾಲೋಚನೆ ಕೊಡಿಸಲಾಯಿತು. ಈ ವೇಳೆ ಆತ ಟ್ಯೂಷನ್ ಶಿಕ್ಷಕಿಯ ಕರಾಳ ಮುಖವನ್ನು ತೆರೆದಿಟ್ಟಿದ್ದಾನೆ. ನಿತ್ಯವೂ ಆಲ್ಕೋಹಾಲ್ ನೀಡಿ, ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾನೆ. ತಕ್ಷಣ ಶಾಲಾ ಶಿಕ್ಷಕಿ ಈ ವಿಚಾರವನ್ನು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮನ್ನುತ್ತಿ ಪೊಲೀಸ್ ಠಾಣೆಗೆ ತಿಳಿಸಿದರು.

ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಬಾಲಕನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಪರೀಕ್ಷಾ ವರದಿಯಲ್ಲಿ ದೌರ್ಜನ್ಯ ನಡೆದಿರುವುದು ದೃಢಪಟ್ಟ ಬಳಿಕ ಟ್ಯೂಷನ್ ಶಿಕ್ಷಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕನ ಹೇಳಿಕೆಯನ್ನು ಸಹ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಸಹ ತಪ್ಪು ಒಪ್ಪಿಕೊಂಡಿದ್ದಾಳೆ.

ಪತಿಯಿಂದ ಪ್ರತ್ಯೇಕವಾಗಿರುವ ಈ ಆರೋಪಿ ಮಹಿಳೆ, ಕೋವಿಡ್ ಸಂದರ್ಭದಲ್ಲಿ ಟ್ಯೂಷನ್ ಆರಂಭಿಸಿದ್ದಳು. ಈ ವೇಳೆ ಬಾಲಕನನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾಳೆ. ಇದಕ್ಕೂ ಮುನ್ನ ಆಕೆಯ ಫಿಟ್‌ನೆಸ್ ಕೇಂದ್ರದಲ್ಲಿ ತರಬೇತುದಾರಳಾಗಿ ಕೆಲಸ ಮಾಡಿದ್ದಳು. ಇದೀಗ ಆಕೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.