Home News ಐಪಿಎಸ್ ಅಧಿಕಾರಿಯ ಸೂಪರ್ ಐಡಿಯಾ | ತನ್ನ ವೇಷ ಮರೆಮಾಚಿ ಪೊಲೀಸರನ್ನು ಟೆಸ್ಟ್ ಮಾಡಿದ ಪೊಲೀಸ್...

ಐಪಿಎಸ್ ಅಧಿಕಾರಿಯ ಸೂಪರ್ ಐಡಿಯಾ | ತನ್ನ ವೇಷ ಮರೆಮಾಚಿ ಪೊಲೀಸರನ್ನು ಟೆಸ್ಟ್ ಮಾಡಿದ ಪೊಲೀಸ್ ಅಧಿಕಾರಿಣಿ !

Hindu neighbor gifts plot of land

Hindu neighbour gifts land to Muslim journalist

ಪೊಲೀಸ್ ಕರ್ತವ್ಯ ಅನ್ನೋದು ಬಹಳ ಮುಖ್ಯ ಸಮಾಜದ ಶಾಂತಿ ಸಮಾನತೆ ಕಾಪಾಡುವಲ್ಲಿ ಪೊಲೀಸರ ಪಾಲು ಬಹು ದೊಡ್ಡದಾಗಿದೆ. ಆದರೆ ಇಲ್ಲೊಬ್ಬ ಪೊಲೀಸ್ ಹಿರಿಯ ಅಧಿಕಾರಿ ಚೂರು ತಲೆ ಓಡಿಸಿದ್ದಾರೆ.
ಅಂದರೆ ಸಾಮಾನ್ಯ ನಾಗರಿಕ ವೇಷ ಧರಿಸಿ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಅಧಿಕಾರಿಯು ಸ್ಥಳೀಯ ಪೊಲೀಸರ ಕಾರ್ಯ ವೈಖರಿಯನ್ನು ಪರೀಕ್ಷಿಸಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಔರೈಯಾ ಜಿಲ್ಲೆಯ ಐಪಿಎಸ್ ಅಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರಾಗಿರುವ ಚಾರು ನಿಗಮ್ ಅವರು ಗುರುವಾರದಂದು ದುಪಟ್ಟಾವನ್ನು ತಲೆಯ ಮೇಲೆ ಸುತ್ತಿಕೊಂಡು, ಸನ್ ಗ್ಲಾಸ್ ಹಾಗೂ ಮಾಸ್ಕ್ ಧರಿಸಿ ಮುಖವನ್ನು ಸಂಪೂರ್ಣವಾಗಿ ಮಾರೆಮಾಚಿಕೊಂಡು ಬಂದಿದ್ದರು.

ಅವರು ಸುಲಿಗೆಗೆ ಒಳಗಾದ ಸಂತ್ರಸ್ತೆ ರೀತಿ ನಟಿಸಿದ ಚಾರು ನಿಗಮ್ ಅವರು, 112ಗೆ ಕರೆ ಮಾಡಿ ನನ್ನ ಹೆಸರು ಸರಿತಾ ಚೌಹಾಣ್ ಎಂದು ಪರಿಚಯಿಸಿ , ದರೋಡೆಕೋರರರು ನನ್ನನ್ನು ಹಿಂಬಾಲಿಸಿಕೊಂಡು ಬಂದು ದರೋಡೆ ಮಾಡಿದ್ದಾರೆ. ಎಲ್ಲಿದ್ದರೂ ಐದು ನಿಮಿಷದಲ್ಲಿ ಬಂದು ಸಹಾಯ ಮಾಡುವಂತೆ ಮನವಿ ಮಾಡಿದರು. ಕೂಡಲೇ ಕರೆಗೆ ಸ್ಪಂದಿಸಿ ಮೂವರು ಪೊಲೀಸರು ಸಹಾಯ ಮಾಡಲು ಸ್ಥಳಕ್ಕೆ ಧಾವಿಸಿದರು. ಮತ್ತು ಘಟನೆ ಸಂಬಂಧ ಮಹಿಳೆಯನ್ನು ವಿಚಾರಣೆ ನಡೆಸಿದರು.

ಆದರೆ ಆ ಮಹಿಳೆ ತಮ್ಮ ಬಾಸ್ ಎಂಬುವುದು ಪೊಲೀಸರಿಗೆ ತಿಳಿದಿರಲಿಲ್ಲ ಸುಮಾರು ಒಂದು ಗಂಟೆಗಳ ಕಾಲ ವಾಹನಗಳನ್ನು ತಪಾಸಣೆಗೆ ಒಳಪಡಿಸಿದ ನಂತರ ಸಂತ್ರಸ್ತ ಮಹಿಳೆ ತಮ್ಮ ಹಿರಿಯ ಅಧಿಕಾರಿ ಎಂಬ ಸತ್ಯ ತಿಳಿದು ಸ್ಥಳೀಯ ಪೊಲೀಸರ ತಂಡ ಶಾಕ್ ಆಗಿದ್ದಾರೆ.

ಸ್ಥಳೀಯ ಪೊಲೀಸರ ಕಾರ್ಯ ವೈಖರಿಯನ್ನು ಪರಿಶೀಲನೆ ನಡೆಸಲು ಬಂದಿದ್ದ ಚಾರು ನಿಗಮ್ ಅವರು, ಪೊಲೀಸರ ಚಲನವಲನ, ಸಮಯಪ್ರಜ್ಞೆಯನ್ನು ನೋಡಿ ಸಮಾಧಾನರಾಗಿದ್ದಾರೆ. ಈ ವೀಡಿಯೋವನ್ನು ಔರೈಯಾ ಪೊಲೀಸರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ನಿರ್ಜನ ರಸ್ತೆಯಲ್ಲಿ ಚಾರು ನಿಗಮ್ ಫೋನ್‍ನಲ್ಲಿ ಮಾತನಾಡುತ್ತಿರುವ ಫೋಟೋ ಹಾಗೂ ವೀಡಿಯೋವನ್ನು ಕಾಣಬಹುದಾಗಿದೆ.

ಪರೀಕ್ಷೆ ನಡೆಸಲು ಸರಿಯಾದ ಸ್ಥಳವನ್ನು ಹುಡುಕುತ್ತಿರುವ ಅಧಿಕಾರಿ ಬೈಕ್‍ನಲ್ಲಿ ಸವಾರಿ ಮಾಡುತ್ತಿರುವ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ವೀಡಿಯೋಗೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.