Avatar 2 Trailer : ಹೊಸ ಲೋಕದ ವಿಸ್ಮಯ | ವಿಸ್ಮಯ ದೃಶ್ಯಕಾವ್ಯ- ಅವತಾರ್ ನ ಹೊಸ ಅವತಾರ್ ಸಿನಿಮಾ!!!
ಚಿತ್ರರಂಗವು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಯಶಸ್ವಿ ಕಾಣಲು ಪ್ರಯತ್ನಿಸುತ್ತಲೇ ಇದೆ. ಜನರು ಕೂಡ ವಿಭಿನ್ನ ಸಿನಿಮಾಗಳಿಗೆ ಮಾರು ಹೋಗದೆ ಇರಲ್ಲ. ಹಾಗೆಯೇ
ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ ‘ಅವತಾರ್- 2’ ಸಿನಿಮಾವು ತಯಾರಾಗಿದೆ.
2014ರಲ್ಲೇ ‘ಅವತಾರ್- 2’ ಬರಬೇಕಾಗಿತ್ತು ಆದರೆ ಕೊರೊನಾ ಹಾವಳಿಯಿಂದ ಮತ್ತಷ್ಟು ತಡವಾಗಿ ಸದ್ಯ ಮುಂದಿನ ತಿಂಗಳು ರಿಲೀಸ್‌ಗೆ ರೆಡಿಯಾಗಿದೆ. ಮೊದಲ ನೋಟದಲ್ಲೇ ಟ್ರೈಲರ್ ಸಿನಿರಸಿಕರ ಮನಗೆದ್ದಿದೆ. ಜೇಮ್ಸ್ ಕ್ಯಾಮರೂನ್ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಅದಲ್ಲದೆ ಐದಲ್ಲ ಹತ್ತಲ್ಲ ಬರೋಬ್ಬರಿ ಪ್ರಪಂಚದ 160 ಭಾಷೆಗಳಲ್ಲಿ ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಡಿಸೆಂಬರ್ 16ಕ್ಕೆ ಸಿನಿಮಾ ಏಕಕಾಲಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ. 2000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಪ್ರೀಕ್ವೆಲ್ 8000 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅದಕ್ಕಿಂತಳು ಹಲವು ಪಟ್ಟು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸೀಕ್ವೆಲ್ ಎಷ್ಟು ಕೋಟಿ ರೂ. ಗಳಿಸುತ್ತೋ ಕಾದು ನೋಡಬೇಕು.
ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಅದ್ಭುತ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡ ಸಿನಿರಸಿಕರ ಮನಗೆದ್ದಿದೆ. ಎರಡೂವರೆ ನಿಮಿಷದ ಟ್ರೈಲರ್ ನೋಡುಗರನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗಿ ಸುತ್ತಾಡಿಸುತ್ತದೆ. ಮೊದಲ ಭಾಗದ ಕಥೆ ಪಂಡೋರಾ ಗ್ರಹದಲ್ಲಿ ನಡೆದಿತ್ತು. ಈ ಬಾರಿ ನಿರ್ದೇಶಕರು ಸಮುದ್ರದ ಆಳಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.
‘ಅವತಾರ್’ ಚಿತ್ರದಲ್ಲಿ ಜೇಕ್ ಸುಲ್ಲಿ ಕಥೆಯನ್ನು ಹೇಳಿದ್ದ ನಿರ್ದೇಶಕರು ಎರಡನೇ ಭಾಗದಲ್ಲಿ ಆತನ ಮಗಳನ್ನು ಪರಿಚಯಿಸಿದ್ದಾರೆ. ಹಲವು ವರ್ಷಗಳಿಂದ ಹಾಲಿವುಡ್ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. 2009ರಲ್ಲಿ ಪ್ರೀಕ್ವೆಲ್ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಎಲ್ಲಾ ಬಾಕ್ಸಾಫೀಸ್ ದಾಖಲೆಗಳನ್ನು ಮುರಿದು ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ‘ಟೈಟಾನಿಕ್’ ಸಿನಿಮಾ ಹೆಸರಿನಲ್ಲಿದ್ದ ಬಾಕ್ಸಾಫೀಸ್ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ಬರೆದಿತ್ತು. ಅವಾರ್ಡ್‌ಗಳ ವಿಚಾರದಲ್ಲೇ ಆಗಲಿ, ಕಲೆಕ್ಷನ್ ವಿಚಾರದಲ್ಲೇ ಆಗಲಿ ಅಳಿಸಲಾಗದಂತಹ ದಾಖಲೆಗಳನ್ನು ಬರೆದಿತ್ತು.
12 ವರ್ಷಗಳ ಹಿಂದಿನ ತಂತ್ರಜ್ಞಾನ ಬಳಸಿ ಜೇಮ್ಸ್ ಕ್ಯಾಮರೂನ್ ‘ಅವತಾರ್’ ಸಿನಿಮಾ ಕಟ್ಟಿಕೊಟ್ಟಿದ್ದರು. ಇವತ್ತಿನ ತಂತ್ರಜ್ಞಾನ ಬಳಸಿ ಅದಕ್ಕಿಂತ ಹಲವು ಪಟ್ಟು ಅದ್ಭುತವಾಗಿ ಈ ಚಿತ್ರವನ್ನು ರೂಪಿಸಿದ್ದಾರೆ . ಇನ್ನು ಸಿಲ್ವರ್ ಸ್ಕ್ರೀನ್ ಮೇಲೆ 3D ಕನ್ನಡಕದಲ್ಲಿ ಈ ಮಾಯಾಜಾಲ ನೋಡಿ ಪ್ರೇಕ್ಷಕರು ಕಳೆದುಹೋಗುವುದು ಗ್ಯಾರೆಂಟಿ. ಅಷ್ಟರಮಟ್ಟಿಗೆ ಅದ್ಭುತ ವಿಷ್ಯುವಲ್ಸ್ ನೋಡಬಹುದು. ಇನ್ನು ಗ್ರಾಫಿಕ್ಸ್ ಬಗ್ಗೆ ಮಾತನಾಡುವುದೇ ಬೇಡ. ಈ ಬಾರಿ ಸಮುದ್ರ ಆಳದಲ್ಲಿ ಬಹುತೇಕ ಕತೆ ನಡೆಯುವುದರಿಂದ ಮತ್ತಷ್ಟು ಮಜವಾಗಿದೆ.
ಮೊದಲ ಭಾಗದಲ್ಲಿ ವಿಭಿನ್ನ ಪ್ರಪಂಚವನ್ನು ವಿಚಿತ್ರ ಜೀವಿಗಳನ್ನು ತೋರಿಸಿದ್ದ ಜೇಮ್ಸ್ ಕ್ಯಾಮರೂನ್, ಅದಕ್ಕಿಂತ ಭಿನ್ನವಾದ ಜೀವಿಗಳನ್ನು ಇಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಡೈನೋಸಾರ್ ಮಾದರಿಯ ಜೀವಿಗಳು ಇಲ್ಲಿವೆ. ಇನ್ನು ಸಮುದ್ರ ತಳದ ಜೀವಿಗಳನ್ನು ಅಷ್ಟಾಗಿ ಈ ಟ್ರೈಲರ್‌ನಲ್ಲಿ ತೋರಿಸಿಲ್ಲ. ಮುಂದಿನ ಟ್ರೈಲರ್‌ನಲ್ಲಿ ಅದರ ಪರಿಚಯ ಮಾಡಿಸುವ ಸಾಧ್ಯತೆಯಿದೆ. ಜೇಕ್ ಹಾಗೂ ನೈತಿರಿಗೆ ಮಕ್ಕಳಾಗಿದೆ. ಎಲ್ಲವೂ ಚೆನ್ನಾಗಿದೆ ಎನ್ನುಕೊಳ್ಳುವ ಸಮಯದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಅದರಿಂದ ಅವರು ಹೇಗೆ ಹೊರ ಬರುತ್ತಾರೆ ಎನ್ನುವುದೇ ಮುಂದಿನ ಕಥೆ.
ದಿ ವೇ ಆಫ್ ವಾಟರ್’ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಆಕ್ಷನ್ ಅಡ್ವೆಂಚರ್ ಜೊತೆಗೆ ಈ ಬಾರಿ ಎಮೋಷನಲ್ ಕಂಟೆಂಟ್ ಜೊತೆ ಈ ಸಿನಿಮಾ ಮೂಡಿ ಬರ್ತಿದೆ. ಈ ಎಪಿಕ್ ಸೈನ್ಸ್ ಫಿಕ್ಷನ್ ಸಿನಿಮಾ ನೋಡುಗರನ್ನು ಹೊಸ ಲೋಕಕ್ಕೆ ಕಡೆದುಕೊಂಡು ಹೋಗುವುದರಲ್ಲಿ ಎರಡು ಮಾತಿಲ್ಲ. ಸಾಮ್ ವರ್ಥಿಂಗ್‌ಟನ್, ಜೋ ಸಲ್ಡಾನಾ, ಮಿಚಲ್ ರೋಡ್ರಿಗಜ್, ಸ್ಟೀಪನ್ ಲಾಂಗ್, ಸಿಗೋರನಿ ವೇವರ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.