ಬಂದಾ ನೋಡಿ ಮತ್ತೊಮ್ಮೆ ಡ್ರೋನ್ ಪ್ರತಾಪ್| ಏನಿದು ಈತನ ಹೊಸ ಅವತಾರ, ನೆಟ್ಟಿಗರು ಮಾಡಿದ ಕಮೆಂಟ್ ಓದಿದರೆ ನಗು ಬರುವುದು ಖಂಡಿತ!!!

ನಾನೊಬ್ಬ ಯುವ ವಿಜ್ಞಾನಿ, ನಾನು ಡ್ರೋನ್​ ತಯಾರಿಸಿದ್ದೇನೆ ಎಂದು ಎಲ್ಲರನ್ನು ಯಾಮಾರಿಸಿ, ದೇಶ-ವಿದೇಶಿಗರು, ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ಮಾಧ್ಯಮದವರ ಕಣ್ಣಿಗೆ ಮಣ್ಣೆರಚಿ ಕೊನೆಗೆ ಪೊಲೀಸರ ವಿಚಾರಣೆಯನ್ನೂ ಕೂಡ ಎದುರಿಸಿ ಕಣ್ಮರೆಯಾಗಿದ್ದ ಮಹಾಶಯ ಡ್ರೋನ್​ ಪ್ರತಾಪ್​.

ಇದೀಗ , ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಎಲ್ಲರಿಗೂ ಕಾಗೆ ಹಾರಿಸಿ ಬಕ್ರ ಮಾಡಲು ತಯಾರಾಗಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಸುದ್ದಿಯಲ್ಲಿರುವ ಪ್ರತಾಪ್​, ಈ ಬಾರಿ ಹೊಸದಾಗಿ ಏನೋ ಪ್ರಾರಂಭಿಸುತ್ತಿರುವ ಕುರಿತು ಕುತೂಹಲ ಮೂಡಿಸಿದ್ದಾರೆ.

ಮಾತಿನ ಕಲೆ ಗೊತ್ತಿದ್ದರೆ ಯಾರನ್ನು ಹೇಗೆ. ಬೇಕಾದರೂ ಮೂರ್ಖರನ್ನಾಗಿಸಬಹುದು ಎಂಬ ಮಾತಿಗೆ ನಿದರ್ಶನವೆಂಬಂತೆ, ಎಲ್ಲರಿಗೆ ಹಾರಿಸಿದ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್, ಈ ಹಿಂದೆ ಬಡತನದ ಬಗ್ಗೆ ಕತೆ ಹೆಣೆದು ಸತ್ಯದ ತಲೆಯ ಮೇಲೆ ಹೊಡೆಯುವಂತೆ ಬಿಂಬಿಸಿದ್ದ.

ತನ್ನದು ಬಡ ಕುಟುಂಬವಾಗಿದ್ದು, ತಾನು ಬಹಳ ಕಷ್ಟಗಳನ್ನು ಅನುಭವಿಸಿದ್ದಾಗಿ ಪ್ರತಾಪ್ ಈ ಹಿಂದೆ ಹೇಳಿಕೊಂಡಿದ್ದಾನೆ. ಆದರೆ ವಾಸ್ತವದಲ್ಲಿ, ಪ್ರತಾಪ್ ತಂದೆ, ತಾಯಿ ರೇಷ್ಮೆ ಬೆಳೆಗಾರರಾಗಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಪ್ರತಾಪ್ ಮಳವಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು, ಜೆಎಸ್​ಎಸ್ ಕಾಲೇಜಿನಲ್ಲಿ ಬಿಎಸ್​ಸಿ ವಿದ್ಯಾಭ್ಯಾಸ ಮಾಡುತ್ತಿದ್ದವನಿಗೆ ಹಣ ಮಾಡುವ ಉಪಾಯ ಹುಡುಕಿದ್ದಾರೆ.

ಸರಿಯಾಗಿ ತರಗತಿಗೆ ಬಾರದ ಈತ ಏನೋ ಸಂಶೋಧನೆ ಮಾಡುತ್ತಿದ್ದಾನೆಂದು ಭಾವಿಸಿ ಉಪನ್ಯಾಸಕರ ಜತೆಗೆ ಮಠದವರು ಕೂಡ ಆರ್ಥಿಕ ನೆರವು ನೀಡಿದ್ದಾರೆ. ಜರ್ಮನಿಯಲ್ಲಿ ಡ್ರೋನ್ ಪ್ರದರ್ಶನ ಮಾಡಲಿಕ್ಕೆ ಜೆಎಸ್​ಎಸ್ ಮಠ 8 ಲಕ್ಷ ರೂ. ವಿದ್ಯಾಸಂಸ್ಥೆಯ ಎಲ್ಲ ಉಪನ್ಯಾಸಕರು ಕೂಡ ಆರ್ಥಿಕ ನೆರವು ನೀಡಿದ್ದರು.

ಅದ್ಭುತವಾದ ಡ್ರೋನ್ ಕಂಡುಹಿಡಿದಿರುವುದಾಗಿ ಹೇಳಿದ್ದ ಪ್ರತಾಪ್, ತನ್ನ ಡ್ರೋನ್ ಅನ್ನು ಯಾರಿಗೂ ತೋರಿಸಿರಲಿಲ್ಲ. ನೆರವು ನೀಡಿದ ಮಠದ ಶ್ರೀಗಳು ಸುತ್ತೂರು ಜಾತ್ರೆಯಲ್ಲಿ ಪ್ರದರ್ಶನಕ್ಕೆ ಇಡುವಂತೆ ಹೇಳಿದಾಗ ಅದರ ಪೇಟೆಂಟ್ ಮಿಸ್ ಆಗಿಬಿಡುತ್ತದೆ ಎಂದು ನೆಪ ಹೇಳಿ ಆ ವಿಚಾರದಿಂದ ನುಣುಚಿ ಕೊಳ್ಳುವ ಪ್ರಯತ್ನ ನಡೆಸಿದ್ದ. ತನ್ನ ಡ್ರೋನ್ ಬಗ್ಗೆ ಯಾವುದೇ ವಿಡಿಯೋ, ಫೋಟೋಗಳನ್ನು ಕೂಡ ಸಂಸ್ಥೆಗಾಗಲಿ, ಮಾಧ್ಯಮಗಳಿಗಾಗಲಿ ಈತನಕ ತೋರಿಸಿಲ್ಲ.

ಈ ಬಾರಿ, ಟೇಬಲ್​ ಮೇಲೊಂದು ಲ್ಯಾಪ್​ಲಾಪ್​ ಇಟ್ಟು, ಅದಕ್ಕೆ ಡಾಟಾ ಕೇಬಲ್​ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡು, ಟೇಬಲ್​ ಮೇಲೆ ಇನ್ನಿತರ ಎಲೆಕ್ಟ್ರಾನಿಕ್​ ಉಪಕರಣಗಳು ಕೂಡ ಇವೆ. ಇದರ ಜೊತೆಗೆ ಟೇಬಲ್​ನ ಒಂದು ಬದಿಯಲ್ಲಿ ಡ್ರೋನ್​ ಕ್ಯಾಮೆರಾದ ಅರ್ಧ ಚಿತ್ರ ಕೂಡ ಕಾಣಿಸುತ್ತದೆ.

https://www.instagram.com/p/CkYgIA5oqnQ/?utm_source=ig_web_copy_link

ಇದಿಷ್ಟೇ ಸಾಲದಂಬಂತೆ ಎರಡು ಕೈಗಳಿಗೆ ಹಳದಿ ಬಣ್ಣದ ರಕ್ಷಾ ಕವಚ ಹಾಗೂ ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಸಾಲ್ಡರಿಂಗ್ ಮೆಶಿನ್​ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ಈ ಯುವ ವಿಜ್ಞಾನಿ ಎಂದು ಹೇಳಿಕೊಂಡು ಎಲ್ಲರಿಗೆ ಕಲರ್ ಕಲರ್ ಕಾಗೆ ಹಾರಿಸಿದ ಮಹಾಶಯ ಡ್ರೋನ್​ ಪ್ರತಾಪ್​ ಈ ಬಾರಿ ಯಾವ ಹೊಸ ಪ್ರಯೋಗ ನಡೆಸಲು ಮುಂದಾಗಿದ್ದಾರೆ ಎಂಬ ವಿಚಾರ ಇನ್ನೂ ಬೆಳಕಿಗೆ ಬಂದಿಲ್ಲ. ಆದರೆ, ‘ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ’ ಎಂಬ ಅಡಿಬರಹವನ್ನು ಡ್ರೋನ್​ ಪ್ರತಾಪ್​ ಇನ್ಸ್ತಾಗ್ರಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಪ್ರತಾಪ್​ ಅವರ ಹೊಸ ವರಸೆಯ ಫೋಟೋ ವೈರಲ್​ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಪ್ರತಾಪ್​ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಭಿನ್ನ ಕಮೆಂಟ್ ಮಾಡುತ್ತಾ ಅವರ ಕಾಲೆಳೆಯುತ್ತಿದ್ದಾರೆ.

ಅಣ್ಣಾ ನನ್ನ ಇಯರ್​ ಫೋನ್​ನಲ್ಲಿ ಒಂದು ಬದಿ ಕೇಳುತ್ತಿಲ್ಲ, ರಿಪೇರಿ ಮಾಡಿ ಕೊಡಿ, ಸಾಲ್ಡರಿಂಗ್​ ಮಾಡೋಕೆ ಈ ರೀತಿಯ ಬಿಲ್ಡಪ್​ ಬೇಕಾ? ಈ ಬಾರಿ ಯಾವ ರಾಕೆಟ್​ ಹಾರಿಸ್ತೀರಾ ಅಣ್ಣಾ ಎಂದು ನೆಟ್ಟಿಗರೊಬ್ಬರು ಕೇಳಿದರೆ, ಇನ್ನೊಬ್ಬ ಅಣ್ಣಾ ಮಿಕ್ಸಿ ರಿಪೇರಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಕಾಗೆ ಪ್ರತಾಪ ಎಂದು ಮಗದೊಬ್ಬ ನೆಟ್ಟಿಗ ವ್ಯಂಗ್ಯವಾಡಿದ್ದರೆ, ಅಣ್ಣಾ ಅವರು ಯೂಟ್ಯೂಬ್​ ನೋಡ್ಕೊಂಡು ಡ್ರೋನ್​ ಮಾಡ್ತಿದ್ದಾರೆ. ಇದರ ಜೊತೆಗೆ ಅವ್ನು ಸಿಗ್ನಲ್​ ಕೊಟ್ಟಿದ್ದಾನೆ ಅಂದ್ರೆ ಏನೋ ದೊಡ್ಡದಾಗಿ ನಡೆಯುತ್ತದೆ ಎಂದು ಕೆಜಿಎಫ್​ ಶೈಲಿಯಲ್ಲಿ ಕಾಮೆಂಟ್​ ಮಾಡಿ ಕಿಚಾಯಿಸಿದ್ದಾರೆ.

ಹೀಗೆ ನಾನಾ ಬಗೆಯ ಕಾಮೆಂಟ್ ಗಳು ಡ್ರೋನ್ ಪ್ರತಾಪ್ ಅವರಿಗೆ ಬರುತ್ತಿದ್ದು, ಮುಂದೇನು ಹೊಸ ಪ್ಲಾನ್ ಮಾಡಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.