ಟೊಯೋಟಾ bZ3 ಎಲೆಕ್ಟ್ರಿಕ್ ಕಾರು ಬಿಡುಗಡೆ | ಸಿಂಗಲ್ ಚಾರ್ಜ್ 600 ಕಿ.ಮೀ. ಮೈಲೇಜ್!!!
ಜಪಾನಿನ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೋಟಾ ತನ್ನ ಹೊಸ ಬಿಝಡ್ 3 (bZ3 EV) ಎಲೆಕ್ಟ್ರಿಕ್ ಕಾರೊಂದನ್ನು ಬಿಡುಗಡೆಗೊಳಿಸಿದೆ. ಇನ್ನೂ ಮೊದಲನೆಯ ಎಲೆಕ್ಟ್ರಿಕ್ ಕಾರು bZ4X ಆಗಿದೆ. ಮತ್ತು ಟೊಯೋಟಾ bZ3 ಜಪಾನಿನ ಕಾರು ತಯಾರಕರ bZ ಶ್ರೇಣಿಯ ಎರಡನೇ ಎಲೆಕ್ಟ್ರಿಕ್ ಕಾರು ಆಗಿದೆ. ಇನ್ನೂ ಈ ಹೊಸ bZ3 EV ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಪ್ರಸ್ತುತ ಚೀನೀ ಮಾರುಕಟ್ಟೆಗೆ ಸೀಮಿತವಾಗಿರುವ ಈ ಹೊಸ ಟೊಯೋಟಾ bZ3 ಕಾರನ್ನು ಚೀನೀ ಸಂಸ್ಥೆಗಳಾದ BYD (ಇವಿ ಕಾರು ತಯಾರಕ ಕಂಪನಿ) ಮತ್ತು FAW (ಫಸ್ಟ್ ಆಟೋಮೊಬೈಲ್ ವರ್ಕ್ಸ್) ಒಟ್ಟಾಗಿ ಸೇರಿ ಅಭಿವೃದ್ಧಿಪಡಿಸಿದೆ. ಈ ನವೀನ ಕಾರನ್ನು ಸ್ಟೈಲಿಷ್ ಡಿಸೈನ್ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. BYD ಮತ್ತು FAW ಎಂಜಿನಿಯರ್ಗಳು ಸೇರಿದಂತೆ ಈ ಹೊಸ ಕಾರಿನ ನಿರ್ಮಾಣಕ್ಕಾಗಿ ಸುಮಾರು 100 ಕ್ಕೂ ಹೆಚ್ಚು ವಿನ್ಯಾಸ, ಉತ್ಪಾದನೆ, ಎಂಜಿನಿಯರಿಂಗ್ ಮತ್ತು ಗುಣಮಟ್ಟ ನಿಯಂತ್ರಣ ವಿಭಾಗದ ಎಂಜಿನಿಯರ್ಗಳು bZ3 ಕಾರಿನ ಅಭಿವೃದ್ಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಟೊಯೋಟಾ bZ3 ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರಿನ ಮಾರುಕಟ್ಟೆಯಲ್ಲಿ FAW ಟೊಯೋಟಾ ಮಾರಾಟ ಮಾಡಲಿದೆ. ಹಾಗಾಗಿ ಇದು ಟೊಯೊಟಾ ಮತ್ತು ಚೀನೀ ಸಂಸ್ಥೆಯಾದ ಫಸ್ಟ್ ಆಟೋಮೊಬೈಲ್ ವರ್ಕ್ಸ್ ನಡುವಿನ ಒಟ್ಟಾದ ಕಾರ್ಯವಾಗಿದೆ. ಈ ಹೊಸ ಕಾರಿಗಾಗಿ ಬ್ಲೇಡ್ LFP ಬ್ಯಾಟರಿ ಪ್ಯಾಕ್ ಅನ್ನು BYD ಒದಗಿಸುತ್ತದೆ. ಇದು ಚೀನಾದ ಲೈಟ್-ಡ್ಯೂಟಿ ವಾಹನದ ಟೆಸ್ಟ್ ಸೈಕಲ್ (CLTC) ಪ್ರಕಾರ ಒಂದೇ ಚಾರ್ಜ್ನಲ್ಲಿ 600 ಕಿಲೋಮೀಟರ್ಗಿಂತಲೂ ಹೆಚ್ಚಿನ ಮೈಲೇಜ್ ನೀಡುತ್ತದೆ.
BZ3 ಯ ಎಲೆಕ್ಟ್ರಿಕ್ ವ್ಯವಸ್ಥೆ ಇವಿ ಕಾರು ತಯಾರಕ ಕಂಪನಿ LFP ಬ್ಯಾಟರಿಯನ್ನು ಸಂಯೋಜಿಸುತ್ತದೆ. ಈ ಬ್ಯಾಟರಿಯು ಬೃಹತ್ ಮೈಲೇಜ್ ಸಾಧಿಸಲು ದೀರ್ಘಾವಧಿಯ Hybrid ಎಲೆಕ್ಟ್ರಿಕ್ ವಾಹನದ ಅಭಿವೃದ್ಧಿಯ ಮೂಲಕ ತನ್ನ ಸ್ವಂತ ವ್ಯಾಪಕವಾದ ಎಲೆಕ್ಟ್ರಿಕ್ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಮತ್ತು 10 ವರ್ಷಗಳ ನಂತರವೂ bZ3 ಬ್ಯಾಟರಿ ಪ್ಯಾಕ್ ತನ್ನ ಸಾಮರ್ಥ್ಯದ ಶೇ 90 ರಷ್ಟನ್ನು ಉಳಿಸಿಕೊಳ್ಳುತ್ತದೆ ಎಂದು ಟೊಯೋಟಾ ಹೇಳಿದೆ.
ಅಷ್ಟೇ ಅಲ್ಲದೆ BYD ಹೊಸ ಟೊಯೋಟಾ bZ3 ಗೆ ಶಕ್ತಿ ನೀಡುವ ‘TZ200-XS002’ ಮೋಟಾರ್ ಅನ್ನು ಸಹ ಒದಗಿಸುತ್ತದೆ. ಚೀನೀ ಸಚಿವಾಲಯವು ತನ್ನ ವೆಬ್ಸೈಟ್ನಲ್ಲಿ ಎಲೆಕ್ಟ್ರಿಕ್ ಮೋಟಾರ್ ಅನ್ನು bZ3 – 178 ಅಥವಾ 238hp ನಲ್ಲಿ ಎರಡು ಶಕ್ತಿಯ ಹಂತಗಳೊಂದಿಗೆ ನೀಡಲಾಗುವುದು ಎಂದು ತಿಳಿಸಿವೆ. ಈ ಎರಡೂ ರೂಪದಲ್ಲಿ bZ3 EV ನ ಅತಿ ಹೆಚ್ಚು ವೇಗವು 160km/h ಗೆ ಸೀಮಿತವಾಗಿರುತ್ತದೆ.
ಇನ್ನೂ ಈ ಕಾರು 4,725mm ಉದ್ದ, 1,835mm ಅಗಲ ಮತ್ತು 1,475mm ಎತ್ತರವನ್ನು ಹೊಂದಿದೆ. ಹಾಗೂ ಟೊಯೊಟಾ bZ3 ವ್ಹೀಲ್ಬೇಸ್ 2,880mm ಇದೆ. ಇದು e-TNGA EV ಪ್ಲಾಟ್ಫಾರ್ಮ್ ಅನ್ನೂ ಆಧರಿಸಿದೆ. ವಿನ್ಯಾಸದ ವಿಷಯಕ್ಕೆ ಬಂದರೆ, ಮುಂಭಾಗದಲ್ಲಿ ಶಾರ್ಕ್ ಡಿಸೈನ್ ನೊಂದಿಗೆ ಫ್ಲ್ಯಾಟ್ ಡೋರ್ ಹ್ಯಾಂಡಲ್, ಅಲ್ಯುನಿಯಂ ವ್ಹೀಲ್ಸ್ ಮತ್ತು ರಿಯರ್ ಬಂಪರ್ ಹೊಂದಿದೆ. ಕಾರಿನ ಒಳಭಾಗದಲ್ಲಿ ಫ್ಲೋಟರಿಂಗ್ ಇನ್ಪೋಟೈನ್ ಮೆಂಟ್ ಸಿಸ್ಟಂ ಸೇರಿದಂತೆ ಆರಾಮದಾಯಕ ಆಸನ ಸೌಲಭ್ಯವು ಕಣ್ಮನ ಸೆಳೆಯುತ್ತದೆ.
ಮುಂಬರುವ ಇನೋವಾ ಹೈಕ್ರಾಸ್ ಕಾರಿನ ಟೀಸರ್ ಅನ್ನು ಟೊಯೋಟಾ ಕಂಪನಿ ಮೊದಲ ಬಾರಿಗೆ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ. ಇನ್ನೂ ಈ ಹೊಸ ಟೊಯೋಟಾ ಇನೋವಾ ಹೈಕ್ರಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆಯಾಗಲಿದೆ. ಟೀಸರ್ ನೋಡುವಾಗ ಹೆಚ್ಚು ಅಗ್ರೇಸಿವ್ ಸ್ಟೈಲಿಂಗ್ ನೊಂದಿಗೆ ಈ ಹೈಕ್ರಾಸ್ ಎಂಯುವಿ ಹೆಚ್ಚು ಕ್ರಾಸ್ಒವರ್ನಂತೆ ಕಾಣುತ್ತದೆ. ಅದರ ಜೊತೆಗೆ ಟೊಯೋಟಾ ಇನೋವಾ ಹೈಕ್ರಾಸ್ ಸ್ಪೈ ಚಿತ್ರಗಳು ಬಹಿರಂಗವಾಗಿದೆ. ಇದರಲ್ಲಿ ಹೈಕ್ರಾಸ್ LED ಟೈಲ್ ಲ್ಯಾಂಪ್ಗಳು ಮತ್ತು 10-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.