Cheque Deposit : ಚೆಕ್ ಅನ್ನು ಡೆಪಾಸಿಟ್/ ನಗದು ಮಾಡುವುದು ಹೇಗೆ?
ಚೆಕ್ ಅನ್ನು ಡೆಪಾಸಿಟ್ ಅಥವಾ ನಗದು ಮಾಡಲು ಹಲವು ಬೇರೆ ಬೇರೆ ರೀತಿಯ ವಿಧಾನಗಳಿವೆ. ನಿಮ್ಮಲ್ಲಿ ಉಳಿತಾಯ ಖಾತೆ ಇದ್ದರೆ ನೀವು ಹಣವನ್ನು ಎಟಿಎಂ, ಬ್ಯಾಂಕ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ವಿತ್ಡ್ರಾ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ನಿಮ್ಮ ಖಾತೆಯನ್ನು ಬೇರೆ ಬೇರೆ ರೀತಿಯಲ್ಲಿ ಪರಿಶೀಲನೆ ಮಾಡಬಹುದು. ಹಾಗೂ ಚೆಕ್ ಅನ್ನು ನೇರವಾಗಿ ಡೆಪಾಸಿಟ್ ಮಾಡಬಹುದು.
1844ರ ಪೀಲ್ಸ್ ಕಾಯ್ದೆಯ ನಂತರ ಪ್ರಸಿದ್ಧಿ ಪಡೆದ ಚೆಕ್, ಇಂದು ಜನರು ಹೆಚ್ಚಿನ ಮೊತ್ತವನ್ನು ಪಾವತಿ ಮಾಡಲು ಇದನ್ನು ಬಳಸುತ್ತಾರೆ. ಈಗ ಎಲ್ಲಾ ಕಾರ್ಯಗಳು ಆನ್ಲೈನ್ ಮೂಲಕವೇ ಆಗಿದ್ದು, ಚೆಕ್ ಅನ್ನು ಮಾತ್ರ ನೀವು ಬ್ಯಾಂಕ್ ಮೂಲಕವೇ ನಗದು ಅಥವಾ ಡೆಪಾಸಿಟ್ ಮಾಡಲಾಗುತ್ತದೆ. ಹಾಗಾದರೆ ಚೆಕ್ ಅನ್ನು ಡೆಪಾಸಿಟ್/ ನಗದು ಮಾಡುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.
ಚೆಕ್ ಅನ್ನು ಡೆಪಾಸಿಟ್/ ನಗದು ಮಾಡುವುದು ಹೇಗೆ?
- ನಿಮ್ಮ ಬಳಿ ಇರುವ ಚೆಕ್ ಯಾವ ಬ್ಯಾಂಕ್ನದ್ದು ಆಗಿದೆಯೋ ಆ ಬ್ಯಾಂಕ್ನಲ್ಲಿ ನೀವು ಖಾತೆಯನ್ನು ಹೊಂದಿಲ್ಲದಿದ್ದರೆ , ನೀವು ಬ್ಯಾಂಕಿಂಗ್ ಗ್ರಾಹಕರಾಗಿದ್ದರೆ, ನಿಮ್ಮ ಬ್ಯಾಂಕ್ ಅಥವಾ ಎಟಿಎಂಗಳಿಗೆ ಭೇಟಿ ನೀಡಬೇಕು. ಅಥವಾ ನೀವು ಮೊಬೈಲ್ ನಲ್ಲಿ ವರ್ಗಾವಣೆ ಮಾಡಬಹುದು.
- ನೀವು ಚೆಕ್ ಅನ್ನು ಡೆಪಾಸಿಟ್ ಅಥವಾ ನಗದು ಮಾಡುವ ಮೊದಲು ಚೆಕ್ನ ಹಿಂಭಾಗದಲ್ಲಿ ನಿಮ್ಮ ಸಹಿಯನ್ನು ಮಾಡಬೇಕು.
- ನೀವು ಆ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿಲ್ಲದಿದ್ದರೆ, ಅಲ್ಲಿನ ಸಿಬ್ಬಂದಿಗಳಿಗೆ ನಿಮ್ಮ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿಯನ್ನು ಗುರುತಿಗಾಗಿ ತೋರಿಸಬೇಕು. ಮತ್ತು ಚೆಕ್ ನೀಡಬೇಕು ಇದಾದ ನಂತರ ನೀವು ಹಣವನ್ನು ಪಡೆಯಬಹುದು.
- ನೀವು ಆ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿದ್ದರೆ, ಎಟಿಎಂನಲ್ಲಿ ಚೆಕ್ ಅನ್ನು ಮಿಷನ್ಗೆ ಸ್ಕ್ಯಾನ್ ಮಾಡಿಸುವ ಮೂಲಕ ವಿತ್ಡ್ರಾ ಮಾಡಿಕೊಳ್ಳಬಹುದು. ಮತ್ತು ಬ್ಯಾಂಕ್ನಲ್ಲಿಯೂ ಜಮೆ ಮಾಡಿಕೊಳ್ಳಬಹುದು. ಆಗಲೂ ನಿಮ್ಮ ಬಳಿ ಗುರುತಿನ ಪುರಾವೆಯನ್ನು ಕೇಳಲಾಗುತ್ತದೆ. ಚೆಕ್ ಪ್ರೋಸೆಸ್ ಆಗುವಾಗ ನೀವು ನಗದನ್ನು ಪಡೆಯಲಾಗುವುದಿಲ್ಲ.
ಒಬ್ಬ ವ್ಯಕ್ತಿಯಿಂದ ಅಥವಾ ಘಟಕದಿಂದ ನೀಡಿದ ಹಣವನ್ನು ಪಡೆಯಬೇಕಾದರೆ ಚೆಕ್ ಬಹಳ ಮುಖ್ಯವಾಗಿ ಬೇಕಾಗುತ್ತದೆ. ರಾಷ್ಟ್ರೀಯ ಬ್ಯಾಂಕುಗಳು ಮತ್ತು ಕ್ರೆಡಿಟ್ ಯೂನಿಯನ್ಗಳು ತನ್ನ ಗ್ರಾಹಕರಲ್ಲದ ಚೆಕ್ ಅನ್ನು ನಗದು ಮಾಡುವ ಅಧಿಕಾರವನ್ನು ಹೊಂದಿಲ್ಲ. ಕೆಲವು ಬ್ಯಾಂಕ್ಗಳಿಗೆ ಎರಡು ಬೇರೆ ಬೇರೆ ರೀತಿಯ ಐಡಿಗಳು ಬೇಕಾಗಬಹುದು.
- ಹಲವಾರು ದೊಡ್ಡ ದೊಡ್ಡ ಮಳಿಗೆಗಳು ಚೆಕ್ ಕ್ಯಾಶಿಂಗ್ ಸೇವೆಗಳನ್ನು ಪ್ರತಿ ಚೆಕ್ಗೆ ಕಡಿಮೆ ಶುಲ್ಕಕ್ಕೆ ನೀಡುತ್ತದೆ.
- ಡೆಬಿಟ್ ಕಾರ್ಡ್ನ ಮೂಲಕ ನಿಮ್ಮ ಖಾತೆಗೆ ಚೆಕ್ ಅನ್ನು ಠೇವಣಿ ಮಾಡಬಹುದು ಹಾಗೂ ನಂತರ ಹಣವನ್ನು ಹಿಂಪಡೆಯಬಹುದು. ಕಾರ್ಡ್ನ ಸ್ಮಾರ್ಟ್ಫೋನ್ ಅಪ್ಲಿಕೇಶನ್ ಮೂಲಕ ಠೇವಣಿ ಮಾಡಿದರೂ ಕೂಡ ಚೆಕ್ಅನ್ನು ಸಲ್ಲಿಸಲೇಬೇಕಾಗುತ್ತದೆ. ಅದರ ನಂತರ ಮಾತ್ರ ಎಟಿಎಂನಿಂದ ಹಣವನ್ನು ವಿತ್ಡ್ರಾ ಮಾಡಬಹುದಾಗಿದೆ.