Twitter Policy : ಟ್ವಿಟ್ಟರ್ ಬಳಕೆದಾರರಿಗೆ ಕಹಿ ಸುದ್ದಿ | ಬ್ಲೂಟಿಕ್ ಬೇಕಾ ಹಣ ಪಾವತಿಸಿ!!!

ಟ್ವಿಟರ್ ಖಾತೆಗೆ ಬ್ಲೂ ಟಿಕ್ ನೀಡುವುದಕ್ಕೆ ಭಾರಿ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಹಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಹೌದು ಇನ್ನುಮುಂದೆ ಟ್ವಿಟರ್​ ಬಳಕೆದಾರರೂ ಹಣ ಪಾವತಿಸಬೇಕಾಗುತ್ತದೆ ಎಂದು ಶಾಕಿಂಗ್ ಸುದ್ದಿ ವರದಿ ಆಗಿದೆ. ಈ ನಿಟ್ಟಿನಲ್ಲಿ ಯೋಜನಾ ಕೆಲಸಗಳು ನಡೆಯುತ್ತಿದ್ದು, ಮೊದಲ ವಾರದಲ್ಲಿಯೇ ಕಾರ್ಯರೂಪಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಸುಮಾರು 3.5 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿ ಟ್ವಿಟರ್ ಖರೀದಿಸಿದ್ದಾರೆ. ಮಸ್ಕ್ ಟ್ವಿಟರ್ ಖಾತೆಗೆ ಬ್ಲೂ ಟಿಕ್ ನೀಡುವುದಕ್ಕೆ ಭಾರಿ ಶುಲ್ಕ ವಿಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿ ಪ್ರಕಾರ ತಿಳಿಸಿದೆ.

ಅದಲ್ಲದೆ ಎಲಾನ್ ಮಸ್ಕ್ ಅವರ ಟ್ವಿಟರ್ ಅಭಿಯಾನದ ನಂತರ ಬಂದ ಡೇಟಾವನ್ನು ನೋಡಿದ ನಂತರ ಸಾಮಾಜಿಕ ಮಾಧ್ಯಮ ಕಂಪನಿಯು ಈ ಹಿಂದೆ ತನ್ನ ಬಳಕೆದಾರರಿಗೆ ಎಡಿಟ್ ಸೌಲಭ್ಯವನ್ನು ನೀಡಲು ಪ್ರಾರಂಭಿಸಿತ್ತು. ಮಸ್ಕ್‌ನ ಈ ಸಮೀಕ್ಷೆಯಲ್ಲಿ, 70 ಪ್ರತಿಶತ ಬಳಕೆದಾರರು ಎಡಿಟ್ ಬಟನ್ ನೀಡುವುದರ ಪರವಾಗಿ ಮತ ಚಲಾಯಿಸಿದ್ದ ವಿಚಾರ ಬಹಿರಂಗ ಪಡಿಸಿರುತ್ತಾರೆ.

ಬಿಲಿಯನೇರ್ ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಲು ಭಾರೀ ಬೆಲೆಯನ್ನು ನೀಡಿದ್ದಾರೆ ಮತ್ತು ಈಗ ಸಾಮಾಜಿಕ ಮಾಧ್ಯಮ ಸೈಟ್ ಬಳಸುವ ಬಳಕೆದಾರರೂ ಈ ಒಪ್ಪಂದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಕಮಾತ್ರ ನಿರ್ಧಾರ ಮಾಡಿರುತ್ತಾರೆ.

ವರದಿಗಳ ಪ್ರಕಾರ, ಎಲಾನ್ ಮಸ್ಕ್ ಇದೀಗ ಟ್ವಿಟರ್‌ನಲ್ಲಿ ಬಳಕೆದಾರರ ಖಾತೆಗೆ ಬ್ಲೂ ಟಿಕ್ ನೀಡಲು ಭಾರಿ ಶುಲ್ಕವನ್ನು ವಿಧಿಸಲು ಸಿದ್ಧತೆ ನಡೆಸಿದ್ದಾರೆ. ಅಂದರೆ, ಈಗ ಬಳಕೆದಾರರು ಈ ಸೌಲಭ್ಯಕ್ಕಾಗಿ ಭಾರೀ ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ.
ಅಮೆರಿಕದ ತಂತ್ರಜ್ಞಾನ ಸುದ್ದಿ ವೆಬ್‌ಸೈಟ್ ವರ್ಜ್ ಪ್ರಕಾರ, ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ನೀಲಿ ಚಂದಾದಾರಿಕೆಯನ್ನು ನೀಡಲು $ 19.99 (ಸುಮಾರು ರೂ 1,640) ಶುಲ್ಕ ವಿಧಿಸಲು ತಯಾರಿ ನಡೆಸುತ್ತಿದ್ದಾರ ಎಂದು ಮಾಹಿತಿ ಇದೆ.

ಬಳಕೆದಾರರು ಚಂದಾದಾರಿಕೆಗಾಗಿ 90 ದಿನಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಚಂದಾದಾರಿಕೆಯನ್ನು ಮಾಡದಿದ್ದರೆ, ಅವರ ಖಾತೆಯಿಂದ ನೀಲಿ ಗುರುತು ತೆಗೆದುಹಾಕಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಬದಲಾದ ನಿಯಮದ ಪ್ರಕಾರ, ಗ್ರೇಸ್ ಪ್ರಿಪೇಯ್ಡ್ ಅನ್ನು ಕೊನೆಗೊಳಿಸಲಾಗುತ್ತದೆ ಮತ್ತು ಬ್ಲೂ ಟಿಕ್ ಪಡೆಯಲು ಬಳಕೆದಾರರು ತಕ್ಷಣವೇ ಹಣ ಪಾವತಿಸಬೇಕಾಗುತ್ತದೆ. ಅಲ್ಲದೆ ಬ್ಲೂ ಟಿಕ್‌ಗಾಗಿ $4.99 ಪಾವತಿಸಬೇಕಾಗುತ್ತದೆ ಎಂದಿದ್ದಾರೆ.

ಟ್ವಿಟರ್ ಬ್ಲೂನಲ್ಲಿ ಎಡಿಟ್​ ಮಾಡುವ ಆಯ್ಕೆಯನ್ನೂ ನೀಡಲಾಗಿದೆ ಎಂಬುವುದು ಉಲ್ಲೇಖನೀಯ. ಈ ವೈಶಿಷ್ಟ್ಯವು ಈ ತಿಂಗಳ ಆರಂಭದಲ್ಲಿ US ಮತ್ತು ಇತರ ದೇಶಗಳಲ್ಲಿ ಲಭ್ಯವಾಗಿದೆ. ಈಗ ಇದನ್ನು ಆಯ್ದ ಭಾರತೀಯ ಬಳಕೆದಾರರಿಗೂ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.