ಬೆಂಕಿಯೊಂದಿಗೆ ಚೆಲ್ಲಾಟ | ಸ್ಟಂಟ್ ಮಾಡಲು ಹೋಗಿ ಯುವಕನಿಗೇ ತಾಗಿತು ಫೈರ್!!!ವೀಡಿಯೋ ವೈರಲ್
ಗಾಳಿ,ನೀರು,ಬೆಂಕಿಯ ಜೊತೆ ಆಟ ಬೇಡ ಎಂಬ ಮಾತಿದೆ. ಆದರೆ ತಮ್ಮ ಹುಚ್ಚು ಆಟಗಳನ್ನು ನಿಲ್ಲಿಸುವುದೇ ಇಲ್ಲ . ನಂತರ ಏನಾದರೊಂದು ಅನಾಹುತಕ್ಕೆ ದಾರಿ ಆಗುವುದು ನಾವು ಈಗಾಗಲೇ ನೋಡಿರಬಹುದು. ಹೌದು ಪೂಜಾ ಪೆಂಡಾಲ್ ಅಥವಾ ಜಾತ್ರೆಯ ಮೇಳದಲ್ಲಿ ನಡೆಸಲಾದ ಸಾಹಸ ದೃಶ್ಯ ಪ್ರದರ್ಶನದ ವೇಳೆ ಈ ಎಡವಟ್ಟು ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಕಿ ಜೊತೆಗೆ ಆಟವಾಡುವುದನ್ನು ನೋಡುವುದು ಬಹಳ ಸುಲಭ. ಆದರೆ ಬೆಂಕಿ ಜೊತೆ ಸರಸವಾಡುವುದಕ್ಕಿಂತ ಅತ್ಯಂತ ಅಪಾಯಕಾರಿ ಮತ್ತೊಂದಿಲ್ಲ. ಬೆಂಕಿ ಜೊತೆ ಆಟವಾಡುವಾಗ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ, ಅಪಾಯ ಖಂಡಿತ. ಇದಕ್ಕೆ ಸಾಕ್ಷಿ ಎಂಬಂತೆ ವ್ಯಕ್ತಿಯೊಬ್ಬ ಬೆಂಕಿಯಲ್ಲಿ ಸ್ಟಂಟ್ ಮಾಡುತ್ತಿದ್ದ ವೇಳೆ ಆತನ ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು, ರವಿ ಪಾಟಿದಾರ್ ಎಂಬವರು ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 12 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಬೆಂಕಿಯ ಪಂಜನ್ನು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಪೆಟ್ರೋಲ್ ಅಥವಾ ಡಿಸೇಲ್ ಬಾಯಿಯಲ್ಲಿ ತುಂಬಿಸಿಕೊಂಡು ಬೆಂಕಿಯಿದ್ದ ಪಂಜಿನತ್ತ ಉಗುಳಿದ್ದಾನೆ.
ಈ ವೇಳೆ ಪೆಟ್ರೋಲ್‌ಗೆ ಬೆಂಕಿ ತಗುಲಿ ಆತನ ಬಾಯಿ ಮತ್ತು ಗಡ್ಡಕ್ಕೆ ಬೆಂಕಿ ಹೊತ್ತೊಕೊಳ್ಳುತ್ತದೆ. ಶೀಘ್ರದಲ್ಲೇ ಆತನ ಮುಖಕ್ಕೂ ಕೂಡ ಬೆಂಕಿ ಹರಡಿಕೊಳ್ಳುತ್ತದೆ. ಈ ವೇಳೆ ವ್ಯಕ್ತಿಗಳಿಬ್ಬರು ಕೂಡಲೇ ಆತನ ಮುಖಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಕೈಗಳಿಂದ ಹಾರಿಸುತ್ತಾರೆ.
ಹಾಗೆಯೇ ಕೆಲ ದಿನಗಳ ಹಿಂದೆ ಪೈರ್ ಹೇರ್ ಕಟ್ಟಿಂಗ್ ವೇಳೆ ಇದೇ ರೀತಿ ಎಡವಟ್ಟು ನಡೆದು 18 ವರ್ಷದ ಯುವಕನ ತಲೆಗೆ ಬೆಂಕಿ ಹತ್ತಿಕೊಂಡಿತ್ತು. ಗುಜರಾತ್‌ನ ವಲ್ಸದ್ ಜಿಲ್ಲೆಯ ವಾಪಿಯಲ್ಲಿ ಈ ಅನಾಹುತ ನಡೆದಿತ್ತು. ಈ ಫೈರ್ ಹೇರ್ ಕಟ್ಟಿಂಗ್ ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಯುವಕರಲ್ಲಿ ಈ ಹೇರ್‌ಕಟ್ ಬಗ್ಗೆ ಕ್ರೇಜ್ ಇದೆ. ಹೀಗೆ ಈ ರೀತಿ ಹೇರ್ ಕಟ್ ಮಾಡಿಸಲು ಸಲೂನ್‌ಗೆ ಹೋದ 18 ವರ್ಷದ ಯುವಕನ ತಲೆಗೆ ಬೆಂಕಿ ಹತ್ತಿಕೊಂಡು ಆತ ಗಂಭೀರ ಗಾಯಗೊಂಡಿದ್ದ. ಆತನ ಕುತ್ತಿಗೆ ಎದೆಯ ಭಾಗಕ್ಕೆ ಬೆಂಕಿ ಹತ್ತಿಕೊಂಡಿತ್ತು. ಈ ವಿಡಿಯೋ ಸಹ ವೈರಲ್ ಆಗಿರುವ ವಿಷಯ ಈಗಾಗಲೇ ನಿಮಗೆ ತಿಳಿದರಬಹುದು. ಆ ಘಟನೆ ಮಾಸುವ ಮುನ್ನವೇ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ.
ಸ್ಟಂಟ್ ಮಾಡುತ್ತಿದ್ದ ವಿಡಿಯೋವನ್ನು ನೋಡಿದ ಅನೇಕರು ಕಾಮೆಂಟ್ ಮಾಡಿದ್ದಾರೆ. ಅನೇಕರು ಹೀಗೆ ಬೆಂಕಿಯೊಂದಿಗೆ ಸಾಹಸ ಮಾಡಿದ ವ್ಯಕ್ತಿ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಜೀವಕ್ಕೆ ಹಾನಿ ಮಾಡಬಾರದು ಬೆಂಕಿ ಜೊತೆ ಸಾಹಸ ಏಕೆ ಎಂದು ಟೀಕೆ ಮಾಡಿದ್ದಾರೆ. ಬೆಂಕಿ ಜೊತೆ ಆಟವಾಡಬೇಡಿ ಸುಟ್ಟು ಹೋಗುತ್ತೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಬಹಳ ಕಷ್ಟಕರವಾದ ಸಾಹಸ ಎಲ್ಲರೂ ಇದನ್ನು ಮಾಡಲು ಹೋಗಬಾರದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇಂತಹ ಹುಚ್ಚು ತನದ ಆಟಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶವನ್ನು ಕಾಮೆಂಟ್ ಮೂಲಕ ವ್ಯಕ್ತ ಪಡಿಸಿದ್ದಾರೆ.