Home latest Pension : ಪಿಂಚಣಿದಾರರಿಗೆ ಮುಖ್ಯವಾದ ಮಾಹಿತಿ | ಜಿವನ್ ಪ್ರಮಾಣ ಪತ್ರಕ್ಕೆ ಬೇಕಾದ ಅರ್ಹತೆ, ದಾಖಲೆ...

Pension : ಪಿಂಚಣಿದಾರರಿಗೆ ಮುಖ್ಯವಾದ ಮಾಹಿತಿ | ಜಿವನ್ ಪ್ರಮಾಣ ಪತ್ರಕ್ಕೆ ಬೇಕಾದ ಅರ್ಹತೆ, ದಾಖಲೆ ಇನ್ನೂ ಹೆಚ್ಚಿನ ವಿವರ ಇಲ್ಲಿದೆ!!!

Hindu neighbor gifts plot of land

Hindu neighbour gifts land to Muslim journalist

ಈಗಾಗಲೇ ಪಿಂಚಣಿದಾರರಿಗೆ ಸರ್ಕಾರವು ಅರ್ಜಿ ಸಲ್ಲಿಸಲು ನಿರ್ದೇಶನ ಹೊರಡಿಸಿದೆ. ಅಲ್ಲದೆ ಸರ್ಕಾರವು ಪಿಂಚಣಿದಾರರು ಜೀವಂತ ಪ್ರಮಾಣ ಪತ್ರವನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ತಿಳಿಸಿದೆ. ಮುಖ್ಯವಾಗಿ ಪಿಂಚಣಿದಾರರು ಪಿಂಚಣಿ ಪಡೆಯಲು ಜೀವನ ಪ್ರಮಾಣ ಪತ್ರವನ್ನ ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕು ಎಂದು ಆದೇಶಿಸಿದೆ.

ಪ್ರಮಾಣ್ ಐಡಿ/ಜೀವನ್ ಪ್ರಮಾನ್ ಜೀವಮಾನಕ್ಕೆ ಮಾನ್ಯವಾಗಿಲ್ಲ. ಇದು ಮಾನ್ಯವಾಗಿರುವ ಅವಧಿಯು ಪಿಂಚಣಿ ವಿತರಣಾ ಪ್ರಾಧಿಕಾರವು ನಿರ್ದಿಷ್ಟಪಡಿಸಿದ ನಿಯಮಗಳ ಅನುಸಾರದ ಪ್ರಕಾರ ಇರುತ್ತದೆ. ಮತ್ತು ಮಾನ್ಯತೆಯ ಅವಧಿಯ ನಂತರ, ಹೊಸ ಜೀವನ ಪ್ರಮಾಣಪತ್ರವನ್ನ ಪಡೆಯಬೇಕು.

ಪಿಂಚಣಿದಾರರು ಪ್ರತಿ ನವೆಂಬರ್ ನಲ್ಲಿ ಡಿಜಿಟಲ್ ಜೀವನ ಪ್ರಮಾಣಪತ್ರವನ್ನ ಸಲ್ಲಿಸಬೇಕು. ಮಾಸಿಕ ಪಿಂಚಣಿ ಪಡೆಯಲು ಬ್ಯಾಂಕ್, ಪೋಸ್ಟ್ ಆಫೀಸ್ ಅಥವಾ ಪಿಂಚಣಿ ವಿತರಣಾ ಅಧಿಕಾರಿಗಳಿಗೆ (PDA)ಲೈಫ್ ಸರ್ಟಿಫಿಕೇಟ್ ಹಸ್ತಾಂತರಿಸಬೇಕು.

ಪ್ರಸ್ತುತ ಪಿಂಚಣಿದಾರರು ಕಚೇರಿಗಳಿಗೆ ಹೋಗದೇ ಆನ್ಲೈನ್‍ನಲ್ಲಿ ಈ ದಾಖಲೆಯನ್ನ ಸಲ್ಲಿಸಬಹುದು. ಪಿಂಚಣಿದಾರರು ಸಾಫ್ಟ್ವೇರ್ ಅಪ್ಲಿಕೇಶನ್, ಸುರಕ್ಷಿತ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯನ್ನ ಬಳಸಿಕೊಂಡು ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು. ರಚಿಸಲಾದ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನ (DLC) ಆನ್ಲೈನ್‍ನಲ್ಲಿ ಸಂಗ್ರಹಿಸಲಾಗಿದೆ. ಅಗತ್ಯವಿದ್ದಾಗ ಪಿಡಿಎಯನ್ನ ಪಿಂಚಣಿದಾರರು ಬಳಸಬಹುದು.

ಜೀವನ ಪ್ರಮಾಣಪತ್ರ ಪಡೆಯಲು ಬೇಕಾಗುವ ದಾಖಲೆಗಳು :
• ಪಿಂಚಣಿದಾರರ ಆಧಾರ್ ಸಂಖ್ಯೆ
• ಹೆಸರುಮೊಬೈಲ್ ಸಂಖ್ಯೆ
• ಪಿಪಿಒ ಸಂಖ್ಯೆ
• ಪಿಂಚಣಿ ಖಾತೆ ಸಂಖ್ಯೆ
• ಬ್ಯಾಂಕ್ ವಿವರಗಳು
• ಪಿಂಚಣಿ ಮಂಜೂರಾತಿ ಪ್ರಾಧಿಕಾರದ ಹೆಸರು
ಪಿಂಚಣಿ ವಿತರಣಾ ಪ್ರಾಧಿಕಾರದ ಅಗತ್ಯವಿದೆ.
• ಪಿಂಚಣಿದಾರರು ಬಯೋಮೆಟ್ರಿಕ್ಸ್ ಐರಿಸ್ ಅಥವಾ ಫಿಂಗರ್‌ಪ್ರಿಂಟ್’ಗಳನ್ನ ಒದಗಿಸಬೇಕು.

ಡಿಜಿಟಲ್ ಲೈಫ್ ಸರ್ಟಿಫಿಕೇಟ್:
ಪಿಂಚಣಿ ಮಂಜೂರಾತಿ ಪ್ರಾಧಿಕಾರದ ಪಿಂಚಣಿದಾರರು ಜೀವನ ಪ್ರಮಾಣದಲ್ಲಿ ಪ್ರವೇಶ ಪಡೆದವರು ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನ ಪಡೆಯಬಹುದು. ಆದಾಗ್ಯೂ, ಪಿಂಚಣಿದಾರನು ಕೆಲಸಕ್ಕೆ ಮರುಸೇರ್ಪಡೆಗೊಳ್ಳುವ ಅಥವಾ ಮರು ಮದುವೆಯಾದವನು ಜೀವನ ಪ್ರಮಾಣಕ್ಕೆ ಅರ್ಹನಾಗಿರುವುದಿಲ್ಲ. ಅವರು ತಮ್ಮ ಪಿಂಚಣಿ ವಿತರಣಾ ಪ್ರಾಧಿಕಾರಕ್ಕೆ ಸಾಮಾನ್ಯ ರೀತಿಯಲ್ಲಿ ಜೀವನ ಪ್ರಮಾಣಪತ್ರವನ್ನ ಸಲ್ಲಿಸಬೇಕು.

ಡಿಜಿಟಲ್ ಜೀವನ ಪ್ರಮಾಣಪತ್ರ ಪಡೆಯಲು ಸ್ವತಃ ಪಿಂಚಣಿದಾರ ಪಿಂಚಣಿ ವಿತರಣಾ ಅಧಿಕಾರಿಯ ಮುಂದೆ ಹಾಜರಾಗುವ ಅಗತ್ಯವಿಲ್ಲ. ಪಿಂಚಣಿ ವಿತರಿಸುವ ಏಜೆನ್ಸಿಗೆ ಅಥವಾ ಬ್ಯಾಂಕ್/ಪೋಸ್ಟ್ ಆಫೀಸ್ ಇತ್ಯಾದಿ ರೀತಿ ಭೌತಿಕವಾಗಿ ಸಲ್ಲಿಸುವ ಅಗತ್ಯವಿಲ್ಲ. ಇದು ಅವರಿಗೆ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದ್ದು, ವಿತರಣಾ ಏಜೆನ್ಸಿಯಿಂದ ಪಿಂಚಣಿ ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳ್ಳುತ್ತದೆ. ಪ್ರತಿ ಡಿಜಿಟಲ್ ಪ್ರಮಾಣ ಪತ್ರಕ್ಕೆ ಪ್ರಮಾಣ ಐಡಿ ಅನನ್ಯವಾಗಿದೆ.

ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನ ಸ್ವೀಕಾರ ಮಾಡಿದೆ ಎಂದು ಖಾತರಿ ಪಡಿಸಿಕೊಳ್ಳುವ ವಿಧಾನ:

ಮೊದಲು ಜೀವನ್ ಪ್ರಮಾಣ ಪೋರ್ಟಲ್‌ನಿಂದ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಜೀವನ ಪ್ರಮಾಣ ತಿರಸ್ಕರಿಸಿದರೆ ಮುಂದಿನ ಕ್ರಮಗಳು :

ಪಿಂಚಣಿ ವಿತರಣಾ ಏಜೆನ್ಸಿಯನ್ನ ಸಂಪರ್ಕಿಸಬೇಕು. ಡಿಜಿಟಲ್ ಲೈಫ್ ಸರ್ಟಿಫಿಕೇಟ್ ರಚಿಸುವಾಗ ಪಿಂಚಣಿದಾರರು ತಪ್ಪಾದ ವಿವರಗಳನ್ನ ನೀಡಿದ್ರೆ ಜೀವನ ಪ್ರಮಾಣ ತಿರಸ್ಕರಿಸುವ ಸಾಧ್ಯತೆಯಿದೆ. ಸರಿಯಾದ ಮಾಹಿತಿಯನ್ನ ಒದಗಿಸುವ ಮೂಲಕ ಜೀವನ ಪ್ರಮಾಣವನ್ನ ಮತ್ತೆ ರಚಿಸಬಹುದು. ಜೀವನ ಪ್ರಮಾಣ ಪಡೆಯಲು ಆಧಾರ್ ಸಂಖ್ಯೆ ಅಥವಾ ವಿಐಡಿ ಕಡ್ಡಾಯವಾಗಿದೆ.

ಈ ಮೇಲಿನ ಕ್ರಮಗಳನ್ನು ಅನುಸರಿಸಿ ಪಿಂಚಣಿದಾರರು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ನ್ನು ಪಡೆಯಬಹುದಾಗಿದೆ.