Home latest ಟೀಮ್​ 20 20 ವಿಡಿಯೋ ವೈರಲ್​ | ಏನಿದರ ರಹಸ್ಯ?

ಟೀಮ್​ 20 20 ವಿಡಿಯೋ ವೈರಲ್​ | ಏನಿದರ ರಹಸ್ಯ?

Hindu neighbor gifts plot of land

Hindu neighbour gifts land to Muslim journalist

ಈಗ ನಡೆಯುತ್ತಿರುವಂತಹ 20 20 ವಿಶ್ವಕಪ್ ಬಗ್ಗೆ ಮಾತಾಡಲು ಶುರು ಮಾಡಿದರೆ ಸಾಕು ಕ್ರಿಕೆಟ್ ಅಭಿಮಾನಿಗಳು ಮೊದಲು ಮಾತಾಡೊದೇ ಮೊನ್ನೆ ಗುರುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಜಿಂಬಾಬ್ವೆ ಎದುರು ಒಂದು ರನ್ ನಿಂದ ಸೋಲನುಭವಿಸಿದ್ದರ ಬಗ್ಗೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ.

ಈ ಪಂದ್ಯದ ಫಲಿತಾಂಶವನ್ನು ಇದುವರೆಗಿನ ಪಂದ್ಯಾವಳಿಯ ಅತಿದೊಡ್ಡ ಅಸಮಾಧಾನ ಎಂದು ವ್ಯಾಪಕವಾಗಿ ವರ್ಗೀಕರಿಸಲಾಗಿದೆ ಅಂತ ಹೇಳಬಹುದು. ಆದರೆ, ಪಂದ್ಯದ ಕೊನೆಯ ಎಸೆತದಲ್ಲಿ ಪಾಕಿಸ್ತಾನವು ಎರಡು ರನ್ ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದ್ದರೆ, ವಿಷಯಗಳು ತುಂಬಾನೇ ವಿಭಿನ್ನವಾಗಿ ಕೊನೆಗೊಳ್ಳುತ್ತಿದ್ದವು. ಆದರೆ ಅಲ್ಲಿ ಆಗಿದ್ದೆ ಬೇರೆ.

ಪಾಕಿಸ್ತಾನ ತಂಡದ ಆಟಗಾರ ಮೊಹಮ್ಮದ್ ವಾಸಿಮ್ ಜೂನಿಯರ್ ಅಂತಿಮ ಎಸೆತದಲ್ಲಿ ಎರಡು ರನ್ ಗಳನ್ನು ತೆಗೆದುಕೊಳ್ಳಲು ತಮ್ಮ ಎಲ್ಲಾ ರೀತಿಯ ಪ್ರಯತ್ನವನ್ನು ಹಾಕಿದರು. ಆದರೆ ಜಿಂಬಾಬ್ವೆ ಬೌಲರ್ ಬ್ರಾಡ್ ಇವಾನ್ಸ್ ಅದಕ್ಕೆ ಅವಕಾಶ ಮಾಡಿ ಕೊಡಲಿಲ್ಲ ಅಂತ ಹೇಳಬಹುದು.

ವೈರಲ್ ಆದ ಆ ಫೋಟೋದಲ್ಲಿ ಏನಿದೆ?

ಆದರೆ ಆ ಪಂದ್ಯ ಮುಗಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ಮಾತ್ರ ತುಂಬಾನೇ ವೈರಲ್ ಆಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆ ಫೋಟೋದಲ್ಲಿ ಪಂದ್ಯದ ಕೊನೆಯ ಎಸೆತದಲ್ಲಿ ವಾಸಿಮ್ ಜೂನಿಯರ್ ಅವರು ಬ್ರಾಡ್ ಇವಾನ್ಸ್ ಬೌಲ್ ಮಾಡಿದ ಪಂದ್ಯದ ಕೊನೆಯ ಎಸೆತದಲ್ಲಿ ಬೇಗನೆ ಕ್ರೀಸ್ ತೊರೆದರು, ಆಗ ಪಾಕಿಸ್ತಾನಕ್ಕೆ ಪಂದ್ಯವನ್ನು ಟೈ ಮಾಡಿಕೊಳ್ಳಲು ಒಂದು ಎಸೆತದಲ್ಲಿ ಎರಡು ರನ್ ಗಳು ಮಾತ್ರ ಬೇಕಾಗಿತ್ತು. ಆದರೆ ಬಾಬರ್ ಅಜಮ್ ಪಡೆ ಎರಡು ರನ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ ಮತ್ತು ಪಂದ್ಯವನ್ನು 1 ರನ್ ನಿಂದ ಸೋತಿತು.

ಪಾಕಿಸ್ತಾನ ತಂಡವು ಎರಡು ರನ್ ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಜಿಂಬಾಬ್ವೆಯು ಸ್ಟ್ರೈಕರ್ ಎಂದರೆ ಬ್ಯಾಟ್ಸ್ಮನ್ ಇರುವ ತುದಿಯಲ್ಲಿ ಚೆಂಡನ್ನು ಎಸೆಯಬೇಕಾಗಿತ್ತು. ವಾಸಿಮ್ ಜೂನಿಯರ್ ತನ್ನ ಕ್ರೀಸ್ ನಿಂದ ಬೇಗನೆ ಸ್ಟಾರ್ಟ್ ತೆಗೆದುಕೊಂಡದ್ದಕ್ಕೆ ಸಮಯಕ್ಕೆ ಸರಿಯಾಗಿ ತನ್ನ ಕ್ರೀಸ್ ಗೆ ಮರಳುವುದು ಅವರಿಗೆ ಸುಲಭವಾಗಿತ್ತು.