Kantara : ನವೆಂಬರ್ 4 ರಂದು ಒಟಿಟಿಯಲ್ಲಿ ಕಾಂತಾರ? ನಿರ್ಮಾಪಕರು ನೀಡಿದರು ಸ್ಪಷ್ಟನೆ!!!
ಸಿನಿಮಾ ವಿಚಾರದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಕಾಂತಾರ ಸಿನಿಮಾ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ನಟ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾವು ವಿಶ್ವಮಟ್ಟದಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿ ಕೆಜಿಎಫ್ 2 ದಾಖಲೆಯನ್ನು ಕೂಡ ಪುಡಿ ಮಾಡಿದೆ. ಇದೀಗ ನವೆಂಬರ್ 4ಕ್ಕೆ ಓಟಿಟಿಗೆ ‘ಕಾಂತಾರ’ ಬರುತ್ತದೆ ಎಂಬ ವಿಚಾರ ಸಂಚಲನ ಮೂಡಿಸಿದೆ.
ಕರಾವಳಿಯ ಪ್ರತಿಭೆ ರಿಷಭ್ ಶೆಟ್ಟಿ ಕಾಂತಾರ ಸಿನಿಮಾದ ಮೂಲಕ ಜನಪ್ರಿಯರಾಗಿದ್ದು, ಈ ಸಿನಿಮಾ ತನ್ನ ನಿರೀಕ್ಷೆಗೂ ಮೀರಿದ ಅಭಿಮಾನಿಗಳನ್ನು ಹೊಂದಿದ್ದು, ಎಲ್ಲೆಡೆಯೂ ತನ್ನದೇ ಟ್ರೆಂಡ್ ಸೃಷ್ಟಿ ಮಾಡಿದ ಬೆನ್ನಲ್ಲೆ ರೋಚಕ ವಿಚಾರವೊಂದು ಹೊರ ಬಂದಿದೆ.
ಕರ್ನಾಟಕದಲ್ಲಿ ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ಬಾಲಿವುಡ್ , ಟಾಲಿ ವುಡ್ ಹಾಗೂ ಪರ ಭಾಷೆಯ ಸೆಲೆಬ್ರಿಟಿಗಳು ಸಹ ಕಾಂತಾರ ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಫುಲ್ ಫಿದಾ ಆಗಿಬಿಟ್ಟಿದ್ದು, ರಿಷಬ್ ಶೆಟ್ಟಿ , ಅವರ ಅಮೋಘ ಅಭಿನಯಕ್ಕೆ ಕೆಲವರು ದೇವರನ್ನೇ ಕಂಡಂತೆ ಕೈ ಮುಗಿಯುತ್ತಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿದ್ದರೆ, ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕರಾವಳಿಯ ಸಂಸ್ಕೃತಿ ಆಚಾರ ವಿಚಾರ ಆಚರಣೆಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಲಾಗಿದೆ.
ಇನ್ನು ‘ಕಾಂತಾರ’ ಸಿನಿಮಾ 200 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ಪುನೀತ್ ರಾಜ್‌ಕುಮಾರ್ ‘ಗಂಧದಗುಡಿ’ ಸಿನಿಮಾ ಬಂದಿದ್ದರೂ ಪ್ರೇಕ್ಷಕರು ಕಾಂತಾರ ಸಿನಿಮಾ ನೋಡಲು ಮುಗಿ ಬೀಳುತ್ತಿರುವುದು ಸಿನಿಮಾದ ಹವಾವನ್ನು ಪ್ರದರ್ಶಿಸುತ್ತದೆ.
ಸಾಮಾನ್ಯವಾಗಿ ಯಾವುದೇ ಸಿನಿಮಾ ಆದರೂ ಥಿಯೇಟರ್‌ನಲ್ಲಿ ಬಿಡುಗಡೆಯಾದ 7 ವಾರಗಳ ನಂತರ ಓಟಿಟಿ ರಿಲೀಸ್‌ಗೆ ಒಪ್ಪಂದ ನಡೆಯುವ ಪ್ರಕ್ರಿಯೆ ನಡೆಯುತ್ತದೆ.
ಈಗಾಗಲೇ ‘ಕಾಂತಾರ’ ಡಿಜಿಟಲ್ ರೈಟ್ಸ್ ಅಮೇಜಾನ್ ಪ್ರೈಂಗೆ ಮಾರಾಟವಾಗಿದೆ ಎನ್ನುವ ಗಾಳಿ ಸುದ್ದಿ ಗಳು ಹರಿದಾಡುತ್ತಿದ್ದು, ಯಾವಾಗ ಸಿನಿಮಾ ಸ್ಮಾಲ್ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತದೆ ಎನ್ನುವ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಸಿನಿಮಾ ಥಿಯೇಟರ್‌ನಲ್ಲೇ ಒಳ್ಳೆ ಪ್ರದರ್ಶನ ಕಂಡರೆ ಸಹಜವಾಗಿಯೇ ಓಟಿಟಿಗೆ ಬರುವುದು ತಡವಾಗುತ್ತದೆ. ‘ಕಾಂತಾರ’ ಚಿತ್ರದ ವಿಚಾರದಲ್ಲೂ ಅದೇ ಆಗುತ್ತಿದೆ ಎನ್ನಲಾಗುತ್ತಿದೆ.
ಸಿನಿಮಾ ರಿಲೀಸ್ ಆದ 7 ವಾರಕ್ಕೆ ಓಟಿಟಿಗೆ ಸ್ಟ್ರೀಮಿಂಗ್‌ಗೆ ಒಪ್ಪಂದ ಆಗಿದ್ದರೂ ಕೆಲವೊಮ್ಮೆ ಡೇಟ್ ಪೋಸ್ಟ್‌ಪೋನ್ ಆಗಿಯೂ ಚಿತ್ರ ಪ್ರದರ್ಶನವಾಗಲು ತಡವಾಗುತ್ತದೆ.
ಅಕ್ಟೋಬರ್ 14ಕ್ಕೆ ಹಿಂದಿಗೆ ಡಬ್ ಆಗಿ ‘ಕಾಂತಾರ’ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನದಿಂದಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವಾರ ಅಕ್ಷಯ್ ಕುಮಾರ್ ನಟನೆಯ ‘ರಾಮ್‌ಸೇತು’ ಹಾಗೂ ಅಜಯ್ ದೇವಗನ್ ನಟನೆಯ ‘ಥ್ಯಾಂಕ್‌ಗಾಡ್’ ಸಿನಿಮಾಗಳು ತೆರೆಗೆ ಬಂದಿವೆ.
ಆದರೂ ಕೂಡ ‘ಕಾಂತಾರ’ ಹಿಂದಿ ವರ್ಷನ್ ಹವಾ ಜೋರಾಗಿದೆ. ಈವರೆಗೆ ಹಿಂದಿ ವರ್ಷನ್ ಭಾರತದಲ್ಲಿ 31.70 ಕೋಟಿ ರೂ. ಕಲೆಕ್ಷನ್ ಮಾಡಿದೆ.
ನವೆಂಬರ್ 4ಕ್ಕೆ ಓಟಿಟಿಗೆ ‘ಕಾಂತಾರ’ ಬರುತ್ತದೆ ಎಂಬ ವಿಚಾರ ಸಂಚಲನ ಮೂಡಿಸಿದೆ.ವಿಶ್ವದಾದ್ಯಂತ ‘ಕಾಂತಾರ’ ಸಿನಿಮಾದ ಅಬ್ಬರ ಜೋರಾಗಿದ್ದು, ಕಾಂತಾರ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಜನ ಮುಗಿ ಬೀಳುತ್ತಿದ್ದಾರೆ.
ಹಾಗಾಗಿ ಸದ್ಯಕ್ಕೆ ಸಿನಿಮಾ ಓಟಿಟಿಗೆ ಬರೋದು ಅನುಮಾನ ಎನ್ನಲಾಗುತ್ತಿದೆ. ಸಿನಿಮಾ ತೆರೆಕಂಡು ಸುಮಾರು ಒಂದು ತಿಂಗಳ ಸನಿಹವಾಗಿದ್ದರೂ ಕೂಡ ಸಿನಿಮಾದ ಹವಾ ಹಾಗೇ ಮುಂದುವರಿದಿದ್ದು, ಕರಾವಳಿಯ ಪ್ರತಿಭೆಯ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ನವೆಂಬರ್ 4ಕ್ಕೆ ಸಿನಿಮಾ ಅಮೇಜಾನ್ ಪ್ರೈಂ ಬರಲಿದೆ ಎನ್ನುವ ಸುದ್ದಿ ಓಡಾಡುತ್ತಿದ್ದು, ಕೆಲವರು ಇದು ನಿಜವೆಂದು ಭಾವಿಸಿದ್ದಾರೆ. ಈ ಬಗ್ಗೆ ಜನರಲ್ಲಿ ಕುತೂಹಲದ ಜೊತೆಗೆ ಅಚ್ಚರಿ ಮನೆ ಮಾಡಿವೆ.
ಈಗ ಹರಿದಾಡುತ್ತಿರುವ ವಿಚಾರದ ಕುರಿತಾಗಿ ಸ್ಪಷ್ಟನೆ ನೀಡಿರುವ ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದು,”ಕಾಂತಾರ ಸಿನಿಮಾ ನವೆಂಬರ್ 4ಕ್ಕೆ ಓಟಿಟಿಗೆ ಬರುತ್ತೆ ಎನ್ನುವುದು ಸುಳ್ಳು. ಯಾರು ಇದನ್ನು ನಂಬಬೇಡಿ” ಎಂದು ಮಾಹಿತಿ ನೀಡಿದ್ದಾರೆ.
ಕನ್ನಡ ಸಿನಿಮಾಗಳು ತಮಿಳುನಾಡಿನಲ್ಲಿ ರಿಲೀಸ್ ಆಗುವುದೇ ಕಷ್ಟ ಎನ್ನುವ ಪರಿಸ್ಥಿತಿ ಇತ್ತು. ಆದರೆ ‘ಕಾಂತಾರ’ ಸಿನಿಮಾ ದಿನದಿಂದ ದಿನಕ್ಕೆ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿದೆ. 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತಮಿಳು ವರ್ಷನ್ ಸಿನಿಮಾ ಪ್ರದರ್ಶನ ಕಾಣುತ್ತಿದೆ.