Price Hike : ದುಬಾರಿಯಾಯ್ತು ಟಿವಿಎಸ್ ದ್ವಿಚಕ್ರ ವಾಹನದ ಬೆಲೆ!
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಹೊಸ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಶೇ.0.50 ರಿಂದ ಶೇ.2 ರಷ್ಟು ಹೆಚ್ಚಳ ಮಾಡಿದ್ದು, ಹೊಸ ದರವು ಅ. 25 ರಿಂದಲೇ ಅನ್ವಯವಾಗಿದೆ.
ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಹಬ್ಬದ ಸಂಭ್ರಮದಲ್ಲಿ ಹೊಸ ವಾಹನಗಳ ಖರೀದಿ ಯೋಜನೆಯಲ್ಲಿದ್ದ ಗ್ರಾಹಕರಿಗೆ ಬೆಲೆ ಹೆಚ್ಚಳ ಬಿಸಿ ತಟ್ಟಲಿದೆ.
ಹೊಸ ವಾಹನಗಳ ದರ ಹೆಚ್ಚಳವಾಗುತ್ತಿದ್ದು, ಇದು ಈ ವರ್ಷದ ನಾಲ್ಕನೇ ಬೆಲೆ ಹೆಚ್ಚಳವಾಗಿದೆ . ಹೊಸ ವಾಹನಗಳ ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮದಿಂದ ಬೆಲೆ ಏರಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಪಡೆದುಕೊಳ್ಳುವ ಸುವರ್ಣ ಅವಕಾಶ ಕಲ್ಪಿಸಿತ್ತು ಆದರೆ, ಇದೀಗ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ.
ಹೊಸ ದರಪಟ್ಟಿಯಲ್ಲಿ ಕಂಪನಿಯು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 162ರಿಂದ ರೂ. 4,850 ದರ ಹೆಚ್ಚಿಸಲಾಗಿದ್ದು, ಈಗಾಗಲೇ ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಹಳೆಯ ದರದಲ್ಲಿಯೇ ವಿತರಣೆಯಾಗಲಿದೆ.
ಹೊಸ ದರಪಟ್ಟಿಯಲ್ಲಿ ಅಪಾಚೆ ಆರ್ ಟಿಆರ್ 160 4ವಿ ಬೆಲೆಯಲ್ಲಿ ಕಡಿಮೆ ಏರಿಕೆಯಾದರೆ ಸ್ಕೂಟಿ ಪೆಪ್ ಪ್ಲಸ್ ಸರಣಿ ಸ್ಕೂಟರ್ ಗಳ ಬೆಲೆಯಲ್ಲಿ ಹೆಚ್ಚಿನ ಬೆಲೆ ಏರಿಕೆಯಾಗಿದೆ.
ದರಹೆಚ್ಚಳದ ಬಳಿಕ, ರೆಡಿಯಾನ್ ಬೈಕ್ ಬೆಲೆಯು ರೂ. 64,050 ಬೆಲೆ ಹೆಚ್ಚಳವಾಗಿದ್ದರೆ ಸ್ಮಾರ್ಟ್ ಎಕ್ಸ್ ಕನೆಕ್ಟ್ ಬೈಕ್ ಬೆಲೆಯು ಆರಂಭಿಕವಾಗಿ 85,973 ಬೆಲೆ ಹೊಂದಿದೆ.
ಇನ್ನುಳಿದಂತೆ, ಅಪಾಚೆ ಆರ್ ಟಿಆರ್ 160 4ವಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1,21,790 ಬೆಲೆ ಹೊಂದಿದ್ದರೆ ಸ್ಟಾರ್ ಸಿಟಿ ಬೈಕ್ ಬೆಲೆ ರೂ. 74,990 ಕ್ಕೆ ತಲುಪಿದೆ.
ಪ್ರಮುಖ ಸ್ಕೂಟರ್ ಮಾದರಿಗಳಾದ ಜೂಪಿಟರ್ ಸರಣಿ ಸ್ಕೂಟರ್ ಗಳು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 69,990 ರಿಂದ ಟಾಪ್ ಎಂಡ್ ಮಾದರಿಯು ರೂ. 89,625 ಬೆಲೆ ಹೊಂದಿದ್ದು, ಪ್ರೀಮಿಯಂ ಸ್ಕೂಟರ್ ಮಾದರಿಯಾದ ಎನ್ ಟಾರ್ಕ್ 125 ಮಾದರಿಯು ಆರಂಭಿಕವಾಗಿ ರೂ. 79,956 ರಿಂದ ಟಾಪ್ ಎಂಡ್ ಮಾದರಿಯು ರೂ. 99,961 ಬೆಲೆಯನ್ನು ಹೊಂದಿದೆ.
ಹೊಸಪಟ್ಟಿಯಲ್ಲಿ ಅಪಾಚೆ ಆರ್ ಟಿಆರ್ 160 2ವಿ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,17,790 ರಿಂದ ಆರಂಭವಾಗಲಿದ್ದರೆ ಸ್ಕೂಟಿ ಪೆಪ್ ಪ್ಲಸ್ ಬೆಲೆಯು ರೂ. 63,284ಕ್ಕೆ ಮತ್ತು ಜೆಸ್ಟ್ ಸರಣಿ ಸ್ಕೂಟರ್ ಗಳ ಬೆಲೆಯು ಆರಂಭಿಕವಾಗಿ ರೂ. 71,636 ರಿಂದ ಆರಂಭವಾಗಲಿದೆ.
ಹಬ್ಬದ ಸಂಭ್ರಮದಲ್ಲಿದ್ದ ಜನತೆಗೆ ಅದರಲ್ಲೂ ವಾಹನ ಕೊಳ್ಳುವ ಯೋಜನೆಯಲ್ಲಿದ್ದ ಗ್ರಾಹಕರಿಗೆ ಬೆಲೆ ಏರಿಕೆಯಿಂದ ನಿರಾಸೆ ಮೂಡಿಸಿದೆ.