ಎಲ್ಲೆಂದರಲ್ಲಿ ಮೊಬೈಲ್ ಚಾರ್ಜ್ ಗೆ ಹಾಕೋ ಮುನ್ನ ಇರಲಿ ಜಾಗ್ರತೆ!!! | ಪೊಲೀಸರಿಂದ ಬಂದಿದೆ ಎಚ್ಚರಿಕೆಯ ಕರೆ!
ಮೊಬೈಲ್ ಎಂಬುದು ಇಂದಿನ ಯುವಜನತೆಯ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಪ್ರತಿಯೊಬ್ಬರ ಕೈಯಲ್ಲೂ ಇಂದು ಮೊಬೈಲ್ ಕಾಣಿಸಿಕೊಳ್ಳುತ್ತಿದೆ. ಮೊಬೈಲ್ ಬಳಕೆ ಎಷ್ಟು ಮಾಡುತ್ತೇವೋ ಅದರ ಬಗ್ಗೆ ಎಚ್ಚರಿಕೆಯಿಂದ ಇರೋದು ಅಷ್ಟೇ ಮುಖ್ಯ.
ಹೌದು. ಮೊಬೈಲ್ ಉಪಯೋಗ ಮಾಡುತ್ತಾ ಚಾರ್ಜ್ ಖಾಲಿಯಾದಾಗ ಎಲ್ಲೆಂದರಲ್ಲಿ ಚಾರ್ಜ್ ಹಾಕುತ್ತೇವೆ. ಇಲ್ಲಿ ನೋಡಿ ನಾವು ಮಾಡೋ ತಪ್ಪು. ನೀವು ಸಾರ್ವಜನಿಕ ಸ್ಥಳದಲ್ಲಿ ಫೋನ್ ಅನ್ನು ಚಾರ್ಜ್ ಮಾಡಿದರೆ ನೀವು ಜಾಗರೂಕರಾಗಿರಬೇಕು.
ಅನೇಕ ಬಾರಿ ನಾವು ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಅಥವಾ ಇತರ ಸ್ಥಳಗಳಲ್ಲಿ ಲಭ್ಯವಿರುವ ಸಾಕೆಟ್ನಲ್ಲಿ ಚಾರ್ಜರ್ ಅನ್ನು ಹಾಕುವ ಮೂಲಕ ಫೋನ್ ಅನ್ನು ಚಾರ್ಜ್ ಮಾಡಲು ಪ್ರಾರಂಭಿಸುತ್ತೇವೆ. ಆದರೆ ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು.ಸಾರ್ವಜನಿಕ ಸ್ಥಳದಲ್ಲಿ ಫೋನ್ ಚಾರ್ಜ್ ಬಗ್ಗೆ ಒರಿಸ್ಸಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಹೈದರಾಬಾದಿನ ಸೈಬರ್ ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದಾರೆ. 5ಜಿ ಸಿಮ್ ಅಪ್ಗ್ರೇಡ್ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ಸೈಬರ್ ಸೆಲ್ನಿಂದ ಹೇಳಲಾಗಿದೆ. ಸಾರ್ವಜನಿಕ ಸ್ಥಳಗಳಾದ ಮೊಬೈಲ್ ಚಾರ್ಜಿಂಗ್ ಸ್ಟೇಷನ್, ಯುಎಸ್ಬಿ ಪವರ್ ಸ್ಟೇಷನ್ ಮತ್ತು ಇತರ ಸ್ಥಳಗಳಲ್ಲಿ ನೀವು ಮೊಬೈಲ್ ಚಾರ್ಜ್ ಮಾಡಬಾರದು ಎಂದು ತಿಳಿಸಲಾಗಿದೆ. ಸೈಬರ್ ವಂಚಕರು ನಿಮ್ಮ ಫೋನ್ನಲ್ಲಿ ಮಾಲ್ವೇರ್ ಅನ್ನು ಸ್ಥಾಪಿಸುವ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮೊಬೈಲ್ನಿಂದ ಕದಿಯಬಹುದು ಎಂದು ಒರಿಸ್ಸಾ ಟ್ವೀಟ್ ಮಾಡಿದೆ.