Home News PM Jan Dhan Yojana : ‘ಜನ್ ಧನ್’ ಯೋಜನೆ ಬಗ್ಗೆ ತಿಳಿಯೋ ಆಸಕ್ತಿ ಇದೆಯೇ?...

PM Jan Dhan Yojana : ‘ಜನ್ ಧನ್’ ಯೋಜನೆ ಬಗ್ಗೆ ತಿಳಿಯೋ ಆಸಕ್ತಿ ಇದೆಯೇ? ಹಾಗಾದರೆ ಕಂಪ್ಲೀಟ್ ವಿವರ ಇಲ್ಲಿದೆ!!!

Hindu neighbor gifts plot of land

Hindu neighbour gifts land to Muslim journalist

ಪ್ರಧಾನ ಮಂತ್ರಿ ಜನ-ಧನ ಯೋಜನೆ (ಪಿಎಂಜೆಡಿವೈ) ಕೇಂದ್ರ ಸರ್ಕಾರದ ಹಣಕಾಸು ಯೋಜನೆಯಾಗಿದೆ. 2014ರಲ್ಲಿ ಪ್ರಧಾನ ಮಂತ್ರಿ ನರೇದ್ರ ಮೋದಿ ಈ ಯೋಜನೆಯನ್ನು ಆರಂಭ ಮಾಡಿದ್ದು ಇದು ಪ್ರಮುಖವಾಗಿ ಮಹಿಳೆಯರಿಗೆ ಧನ ಸಹಾಯ ಮಾಡುವ ನಿಟ್ಟಿನಲ್ಲಿ ಯೊಜನೆ ರೂಪಿಸಲಾಗಿದೆ.

ಎಲ್ಲಾ ಜನರು ಬ್ಯಾಂಕ್ ಖಾತೆಯನ್ನು ಹೊಂದಿರಬೇಕೆಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಪಿಎಂಜೆಡಿವೈ ಮೂಲಕ ಜನರು ಬ್ಯಾಂಕಿಂಗ್, ಉಳಿತಾಯ, ಠೇವಣಿ ಖಾತೆ, ಹಣ ರವಾನೆ, ಪಿಂಚಣಿ, ಕ್ರೆಡಿಟ್ ವಿಮೆ ಮಾಡಲಾಗುತ್ತದೆ.

ನಾವು ಯಾವುದೇ ಬ್ಯಾಂಕ್‌ನಲ್ಲಿ ಪ್ರಧಾನ ಮಂತ್ರಿ ಜನ-ಧನ ಯೋಜನೆ ಖಾತೆಯನ್ನು ತೆರೆಯಬಹುದಾಗಿದ್ದು, ಖಾತೆಗೆ ಯಾವುದೇ ಕನಿಷ್ಠ ಮಿತಿ ಇಲ್ಲ. ಶೂನ್ಯ ಬ್ಯಾಲೆನ್ಸ್ ಹಾಗೂ ಶೂನ್ಯ ಶುಲ್ಕಕ್ಕೆ ಖಾತೆ ತೆರೆಯಬಹುದು. ಕೆವೈಸಿ (ನೋ ಯುವರ್ ಕಸ್ಟಮರ್) ಕೂಡ ಸರಳವಾಗಿದೆ.

ಹಾಗೆಯೇ ಈ ಖಾತೆಗೂ ಕೂಡಾ ಸಾಮಾನ್ಯ ಉಳಿತಾಯ ಖಾತೆಯಂತೆ ಬಡ್ಡಿದರವನ್ನು ಜಮೆ ಮಾಡಲಾಗುತ್ತದೆ. ವಾರ್ಷಿಕವಾಗಿ ಶೇಕಡ 3ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ ಈ ಖಾತೆಗೆ ಚೆಕ್ ಬುಕ್ ಅನ್ನು ನೀಡಲಾಗುವುದಿಲ್ಲ.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಖಾತೆದಾರರು ಹಲವಾರು ಹಣಕಾಸಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಭಾರತದಾದ್ಯಂತ ಹಣವನ್ನು ಸುಲಭವಾಗಿ ವರ್ಗಾವಣೆ ಮಾಡುವ ಅವಕಾಶ ನೀಡಿ, ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವವರಿಗೆ ಈ ಖಾತೆಗೆ ನೇರವಾಗಿ ಹಣ ಜಮೆ ಕೂಡ ಆಗಲಿದೆ.

ಪಿಎಂಜೆಡಿವೈ ಅಡಿಯಲ್ಲಿ ಬ್ಯಾಂಕ್‌ನಲ್ಲಿ ತೆರೆಯಲಾಗುವ ಖಾತೆಯಲ್ಲಿ ಡೆಪಾಸಿಟ್ ಮಾಡಲಾಗುವ ಹಣದ ಮೇಲೆ ಬಡ್ಡಿದರ ಲಭ್ಯವಾಗಲಿದೆ. ಯಾವುದೇ ಕನಿಷ್ಠ ಬ್ಯಾಲೆನ್ಸ್ ಮಿತಿ ಇಲ್ಲ. ಜಿರೋ ಅಮೌಂಟ್ ಅಕೌಂಟ್ ಇದಾಗಿದೆ.

ಈ ಮೊದಲು 5 ಸಾವಿರ ಇದ್ದ ಓವರ್‌ಡ್ರಾಫ್ಟ್ ಮಿತಿಯನ್ನು 10,000 ರೂ.ಗಳಿಗೆ ಏರಿಕೆ ಮಾಡಲಾಗಿದ್ದು, ರೂ. 2,000 ವರೆಗಿನ ಓವರ್‌ಡ್ರಾಫ್ಟ್ ಯಾವುದೇ ಷರತ್ತುಗಳಿಲ್ಲದೆ ಲಭ್ಯವಿದೆ.

ಜನ್‍ಧನ್ ಖಾತೆ ಮೂಲಕ ವಿಮೆ ಹಾಗೂ ಪಿಂಚಣಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಸುಲಭವಾಗಿ ಹಣ ಹೂಡಿಕೆ ಮಾಡಬಹುದಾಗಿದೆ. ಜನ್‍ಧನ್ ಖಾತೆಯಿದ್ದರೆ ಪಿಎಂ ಕಿಸಾನ್ ಹಾಗೂ ಶ್ರಮಯೋಗಿ ಮಾನಧನ್ ಮುಂತಾದ ಯೋಜನೆಗಳ ಅಡಿಯಲ್ಲಿ ಪಿಂಚಣಿಗಾಗಿ ಖಾತೆ ತೆರೆಯಬಹುದಾಗಿದೆ.

ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು ಜನ್ ಧನ್ ಖಾತೆಯು ಕನಿಷ್ಠ 6 ತಿಂಗಳ ಹಳೆಯದಾಗಿರಬೇಕಾಗಿದ್ದು, ಇಲ್ಲದಿದ್ದರೆ ರೂ. 2,000 ವರೆಗೆ ಮಾತ್ರ ಓವರ್‌ಡ್ರಾಫ್ಟ್ ಪಡೆಯಬಹುದಾಗಿದೆ.

ಓವರ್‌ಡ್ರಾಫ್ಟ್‌ಗೆ ಗರಿಷ್ಠ ವಯಸ್ಸಿನ ಮಿತಿಯನ್ನು 60 ರಿಂದ 65 ವರ್ಷಗಳಿಗೆ ಹೆಚ್ಚಿಸಲಾಗಿದೆ.

ಜನ್‍ಧನ್ ಖಾತೆ ತೆರೆದವರಿಗೆ ರುಪೇ ಡೆಬೆಟ್ ಕಾರ್ಡ್ ನೀಡಲಾಗುತ್ತದೆ. ಇದರ ಮೂಲಕ ಎಟಿಎಂ ಕೇಂದ್ರಗಳಲ್ಲಿ ತಮ್ಮ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಆನ್‍ಲೈನ್ ಅಥವಾ ಶಾಪ್‍ಗಳಲ್ಲಿ ವಸ್ತುಗಳನ್ನು ಖರೀದಿಸಿದ ಬಳಿಕ ರುಪೇ ಕಾರ್ಡ್ ಬಳಸಿ ಪೇಮೆಂಟ್ ಮಾಡಬಹುದಾಗಿದೆ.

ಈ ಖಾತೆಗಳು ನೇರ ನಗದು ವರ್ಗಾವಣೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಮೈಕ್ರೋ ಯೂನಿಟ್ಸ್ ಡೆವಲಪ್‌ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ ಬ್ಯಾಂಕ್ ಯೋಜನೆಗೆ ಅರ್ಹವಾಗಿವೆ.