ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತೀಯರಲ್ಲ, ಅವರು ಪಾಕಿಸ್ತಾನಿ !!?
ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ, ಭಾರತೀಯ ಸಂಜಾತ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿರುವ ಬಗ್ಗೆ ಭಾರತೀಯರು ಬಹಳ ಹೆಮ್ಮೆಪಟ್ಟಿದ್ದಾರೆ. ಈ ಹಿಂದೆ ಭಾರತವನ್ನು ಆಳ್ವಿಕೆ ಮಾಡಿದ್ದ ಬ್ರಿಟಿಷ್ ನೆಲಕ್ಕೆ ನಮ್ಮ ಭಾರತದ ರಿಷಿ ಸುನಕ್ ಪ್ರಧಾನಿಯಾಗಿರುವುದು ಸಂತೋಷದ ವಿಚಾರವೇ ಹೌದು. ಆದರೆ ಇಂದು ಭಾರತದ ಪ್ರಜೆಯಾದ ರಿಷಿ ಸುನಕ್ ಪಾಕಿಸ್ತಾನದವರೆಂದು ಹೇಳಿಕೆ ಕೇಳಿ ಬಂದಿದೆ. ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ರಿಷಿ ಸುನಕ್ ಬ್ರಿಟನ್ ನ ಮೊದಲ ಹಿಂದೂ, ಭಾರತೀಯ ಮೂಲ ಹೊಂದಿರುವ ಪ್ರಧಾನಿಯಾಗಿ ನಿಯುಕ್ತಿಗೊಂಡಿದ್ದು, ಇದರಿಂದ ಭಾರತದ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲ, ರಿಷಿ ಸುನಕ್ ಭಾರತೀಯ ಅಲ್ಲ, ಅವರು ಪಾಕಿಸ್ತಾನಿ ಎನ್ನುವ ಸುದ್ದಿ ಈಗ ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ.
ರಿಷಿ ಸುನಕ್ ಅವರು ಭಾರತದ ಪ್ರಜೆಯಾಗಿದ್ದರೂ, ಅವರ ಪೂರ್ವಜರು (ಅಜ್ಜ-ಅಜ್ಜಿ) ಬ್ರಿಟೀಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿದ್ದವರಾಗಿದ್ದರು. ಆದರೆ ಅವರು ವಾಸಿಸುತ್ತಿದ್ದ ಪ್ರಾಂತ್ಯ ಅಂದಿನ ಅವಿಭಜಿತ ಭಾರತದ, ಈಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವಾಗಿತ್ತು. ಈ ಆಯಾಮದಿಂದ ಬ್ರಿಟನ್‌ನ ನೂತನ ನಾಯಕ ವಿಚಿತ್ರ ರೀತಿಯಲ್ಲಿ ಒಬ್ಬ ಭಾರತೀಯನೂ ಹೌದು ಪಾಕಿಸ್ತಾನಿಯೂ, ಹೌದು ಎಂಬಂತಾಗಿದೆ.
ಆದರೆ ಇಂದಿನವರೆಗೂ ರಿಷಿ ಸುನಕ್ ಅವರ ಪೂರ್ವಜರ ಬಗೆಗಿನ ಮಾಹಿತಿಗಳು ಸ್ಪಷ್ಟವಾಗಿ ಲಭ್ಯವಿಲ್ಲದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಈ ವಿಚಾರವಾಗಿ ಭಾರೀ ಚರ್ಚೆ ನಡೆಯುತ್ತಿದೆ.
ಸುನಕ್ ಗಳು ಈಗ ಪಾಕಿಸ್ತಾನದಲ್ಲಿರುವ ಗುರ್ಜನ್ವಾಲಾ ಪಂಜಾಬಿ ಖತ್ರಿ ಕುಟುಂಬದವರಾಗಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ಕ್ವೀನ್ ಲಯನೆಸ್ 86 “ರಿಷಿ ಅವರ ಅಜ್ಜ ರಾಮದಾಸ್ ಸುನಕ್ ಅವರು ನೈರೋಬಿಯಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಲು ಗುರ್ಜನ್ವಾಲವನ್ನು 1935 ರಲ್ಲಿ ತೊರೆದರು, ರಾಮ್ ದಾಸ್ ಅವರ ಪತ್ನಿ ಸುಹಾಗ್ ರಾಣಿ ಸುನಕ್ ಅವರು ಕೀನ್ಯಾಗೆ ತೆರಳುವುದಕ್ಕೂ ಮುನ್ನ ಗುರ್ಜನ್ವಾಲಾದಿಂದ ದೆಹಲಿಗೆ 1935 ರಲ್ಲಿ ತೆರಳಿದರು ಎಂದು ತಿಳಿಸಿದ್ದಾರೆ.
ಆದರೆ ಇದುವರೆಗೂ ಪಾಕಿಸ್ತಾನದಲ್ಲಿ ರಿಷಿ ಸುನಕ್ ಬಗ್ಗೆ ಯಾವುದೇ ರೀತಿಯ ಅಧಿಕೃತ ಹೇಳಿಕೆಗಳೂ ಬಂದಿಲ್ಲವಾದರೂ ಕೆಲವರು ಸರ್ಕಾರ ರಿಷಿ ಸುನಕ್ ಗೂ ಪಾಕ್ ಗೂ ಇರುವ ಸಂಬಂಧವನ್ನು ಹೇಳಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಎಲ್ಲರೂ ಭಾರತದ ಪ್ರಜೆ ಸುನಕ್ ಬ್ರಿಟನ್ ಪ್ರಧಾನಿ ಎಂದು ಸಂತೋಷ ಪಡುವ ಹೊತ್ತಿನಲ್ಲೇ ಅವರ ಪೂರ್ವಜರಿಗೆ ಪಾಕಿಸ್ತಾನದ ಸಂಬಂಧವಿದೆ ಎಂಬುದು ತಿಳಿದು, ಗೊಂದಲಮಯ ವಾತಾವರಣ ಸೃಷ್ಟಿಯಾಗಿರುವುದು ನಿಜವೇ. ಈ ವಿಚಾರವಾಗಿ ನೆಟ್ಟಿಗರು ಪ್ರಶ್ನೆಗಳ ಮಳೆಯನ್ನೇ ಸುರಿಯುತ್ತಿದ್ದು, ಸತ್ಯಕ್ಕಾಗಿ ಕಾಯಬೇಕಿದೆ.