Stock Market : ಇಂದು ಸಂಜೆ 6.15 ರಿಂದ 7.15 ರವರೆಗೆ ವಹಿವಾಟಿನ ಮುಹೂರ್ತ – ಏನಿದು?
ನಾಳಿನ ಭವಿಷ್ಯದ ದೃಷ್ಟಿಯಿಂದ ನಿಯಮಿತ ಹೂಡಿಕೆ ಮಾಡುವುದು ಜಾಣ್ಮೆಯ ನಡೆಯಾಗಿದ್ದು, ಮುಂದು ಎದುರಾಗುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಕಾರಿಯಾಗಿದೆ.
ಮುಂದಿನ ವಾರ ಪ್ರಕಟವಾಗಲಿರುವ ಎರಡನೇ ತ್ರೈಮಾಸಿಕ ಫಲಿತಾಂಶಗಳು ಮತ್ತು ಹೊಸ ಮುನ್ಸೂಚನೆಗಳಿಗಾಗಿ ಷೇರು ಮಾರುಕಟ್ಟೆಯ ಹೂಡಿಕೆದಾರರು ಕುತೂಹಲದಿಂದ ಕಾದು ನೋಡುತ್ತಿದ್ದಾರೆ.
ಷೇರು ಮಾರುಕಟ್ಟೆ ಒಂದು ರೀತಿಯ ಹಾವು ಏಣಿ ಆಟದಂತೆ ಸ್ಥಿರವಾಗಿರದೆ ಕಂಪೆನಿಯ ಷೇರುಗಳು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುತ್ತದೆ. ಹಾಗಾಗಿ ಹೂಡಿಕೆದಾರರು ಷೇರಿನ ಬಗ್ಗೆ ಸಂಪೂರ್ಣ ಪರಾಮರ್ಶೆ ನಡೆಸಿ ಹೂಡಿಕೆ ಮಾಡಿದರೆ ಉತ್ತಮ.
ದೀಪಾವಳಿಯ ಹಬ್ಬದ ಅಂಗವಾಗಿ ಸೋಮವಾರ ಭಾರತೀಯ ಷೇರು ವಿನಿಮಯ ಕೇಂದ್ರಗಳನ್ನು ಮುಚ್ಚಲಾಗಿದ್ದು, ಮಂಗಳವಾರ ಸಾಮಾನ್ಯ ವಹಿವಾಟು ಪುನರಾರಂಭವಾಗಲಿದೆ. ಆದರೂ ಕೂಡ ಭಾರತೀಯ ಷೇರು ವಿನಿಮಯ ಕೇಂದ್ರಗಳು ಮುಹೂರ್ತ ವ್ಯಾಪಾರ ಎಂದು ಕರೆಯಲ್ಪಡುವ ವಹಿವಾಟಿಗಾಗಿ ಇಂದು ಒಂದು ಗಂಟೆ ಕಾಲ ಕೆಲಸ ನಡೆಸಲಿವೆ. ಇಂದು ಸಂಜೆ 6.15 ರಿಂದ 7.15 ರವರೆಗೆ ಮುಹೂರ್ತ ವಹಿವಾಟು ನಡೆಯಲಿದೆ.
ಈ 1 ಗಂಟೆಯ ವಹಿವಾಟಿನಲ್ಲಿ ಹೂಡಿಕೆದಾರರು ತಮಗೆ ಶುಭ ತರುವ ಹಾಗೂ ಉತ್ತಮ ಆದಾಯ ನೀಡಲಿರುವ ಸ್ಟಾಕ್‌ಗಳಿಗೆ ಆರ್ಡರ್ ಮಾಡುತ್ತಾರೆ.
ಸೆಪ್ಟೆಂಬರ್‌ನಲ್ಲಿ ಹೂಡಿಕೆದಾರರು ಭಾರತದಲ್ಲಿ ರೂ 7,624 ಕೋಟಿ ಮೌಲ್ಯದ ಈಕ್ವಿಟಿಗಳನ್ನು ಮಾರಾಟ ಮಾಡಿರುವ ಕುರಿತು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್‌ನ ಡೇಟಾ ಕಲೆ ಹಾಕಿದೆ.
ಇಲ್ಲಿಯವರೆಗೆ 2022 ರಲ್ಲಿ, ಸಂಚಿತ ಆಧಾರದ ಮೇಲೆ ರೂ 174,781 ಕೋಟಿ ರೂಪಾಯಿ ಮೌಲ್ಯದ ಶೇರು ಮಾರಾಟ ಮಾಡಿದ್ದಾರೆ.
ಆದರೆ , ಈ ನಡುವೆ ವಿದೇಶಿ ಬಂಡವಾಳ ಹೂಡಿಕೆದಾರರು ಅಕ್ಟೋಬರ್‌ನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳಿಂದ ರೂ 5,992 ಕೋಟಿ ಮೌಲ್ಯದ ಹಣವನ್ನು ಹಿಂತೆಗೆದುಕೊಂಡಿದ್ದಾರೆ.