Google Apps : ಈ ಆ್ಯಪ್ ಗಳು ನಿಮ್ಮ ಮೊಬೈಲ್ ನಲ್ಲಿದೆಯೇ? ಹಾಗೇ ಇಟ್ಟಿರೋ ನಿಮ್ಮ ಬ್ಯಾಟರಿ ಬ್ಲಾಸ್ಟ್ ಆಗೋದು ಖಂಡಿತ!!!

ಮೊಬೈಲ್ ಎಂಬ ಸಾಧನ ಇಂದು ಎಲ್ಲರ ಅವಿಭಾಜ್ಯ ಭಾಗವಾಗಿದೆ. ಹಾಗಾಗಿ, ಸ್ಮಾರ್ಟ್ ಫೋನ್ ಬಳಕೆ ಮಾಡದೇ ಇರುವವರೇ ವಿರಳ ಎಂದರೂ ತಪ್ಪಾಗಲಾರದು.

ಆದರೆ, ನಾವು ಬಳಸುವ ಸ್ಮಾರ್ಟ್ ಫೋನ್ ನಲ್ಲಿ ಆ್ಯಪ್ ಡೌನ್ಲೋಡ್ ಮಾಡುವ ಎಚ್ಚರ ವಹಿಸುವುದು ಅಗತ್ಯವಾಗಿದ್ದು, ಇಲ್ಲದೇ ಹೋದರೆ ಡೇಟಾ ಹ್ಯಾಕ್ ಆಗುವ ಸಾಧ್ಯತೆ ದಟ್ಟವಾಗಿದೆ.

ಸ್ಮಾರ್ಟ್‌ಫೋನ್‌ನ (Smartphone) ಮೇಲೆ ಆಗುತ್ತಿರುವ ವಂಚನೆಯನ್ನು ಗಮನದಲ್ಲಿಟ್ಟು ಕೊಂಡು ಗೂಗಲ್‌ ತನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ದಿನದಿಂದ ದಿನಕ್ಕೆ ಅಪ್ಡೇಟ್‌ (Update) ಮಾಡುತ್ತಿದೆ.

ಗೂಗಲ್‌ (Google) ಇದೀಗ ದಿನದಿಂದ ದಿನಕ್ಕೆ ತನ್ನ ಕಾರ್ಯವಿಧಾನ ಬದಲಾಯಿಸುತ್ತಿರುವ ಜೊತೆಗೆ ಗೂಗಲ್‌ ಪ್ಲೇ ಸ್ಟೋರಿಂದ ಕೆಲವು ಅಪ್ಲಿಕೇಶನ್‌ ಅನ್ನು ತೆಗೆದುಹಾಕಲು ತೀರ್ಮಾನಿಸಿದೆ.

ಕೆಲವು ಅಪ್ಲಿಕೇಶನ್‌ಗಳು (Applications) ತಮ್ಮ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಯ ಜೊತೆಗೆ (Battery), ಇನ್ನಿತರ ಡಾಟಾವನ್ನು (Data) ವಂಚಿಸುತ್ತಿದೆ.

ಹೊಸ ಕ್ಲಿಕರ್‌ ಆ್ಯಡ್‌ವೇರ್‌ ( Clicker Adware) ಅನೇಕ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಮೂಲಕ ಪ್ಲೇಸ್ಟೋರ್‌ಗೆ ಆಗಮಿಸಿದ್ದು, ಇದರಿಂದ ಸ್ಮಾರ್ಟ್‌ಫೋನ್‌ನ ಡಾಟಾವನ್ನು ಹ್ಯಾಕರ್ಸ್‌ಗಳಿಗೆ ಸುಲಭವಾಗಿ ಕದಿಯಲು ರಹದಾರಿ ದೊರೆದಂತೆ ಸೈಟ್‌ ಸಹಾಯಕವಾಗಿದೆ.

ಇದಲ್ಲದೆ ಕೆಲವೊಂದು ಅಪ್ಲಿಕೇಶನ್‌ಗಳು ಮೊಬೈಲ್‌ನ ಬ್ಯಾಟರಿಯನ್ನು ಖಾಲಿಮಾಡುತ್ತದೆ. ಇದಕ್ಕಾಗಿ ಗೂಗಲ್‌ ಪ್ಲೇಸ್ಟೋರ್‌ನಿಂದ ಈ ಆ್ಯಪ್‌ಗಳನ್ನು ತೆಗೆದುಹಾಕಿದೆ.

ಆಂಡ್ರಾಯ್ಡ್‌ನ 16 ಅಪ್ಲಿಕೇಶನ್‌ಗಳು ಮೊಬೈಲ್‌ನಲ್ಲಿ ಬ್ಯಾಟರಿ ಹಾಳಾಗಲು ಕಾರಣವಾಗುತ್ತವೆ. ಹಾಗಾಗಿ, ಈ ಆ್ಯಪ್‌ಗಳನ್ನು ಗೂಗಲ್‌ ಪ್ಲೇಸ್ಟೋರ್‌ನಿಂದ ತೆಗೆದು ಹಾಕಲು ಮಹತ್ತರ ನಿರ್ಧಾರ ಕೈಗೊಂಡಿದೆ. ಇದಲ್ಲದೆ,ಆ್ಯಪ್‌ಗಳು ಡಾಟಾವನ್ನು ಕೂಡ ಹ್ಯಾಕ್‌ ಮಾಡುತ್ತದೆ.

ಬುಸನ್ ಬಸ್, ಜಾಯ್ಕೋಡ್, ಕರೆನ್ಸಿ ಪರಿವರ್ತಕ, ಹೈ-ಸ್ಪೀಡ್ ಕ್ಯಾಮೆರಾ, ಸ್ಮಾರ್ಟ್ ಟಾಸ್ಕ್ ಮ್ಯಾನೇಜರ್,ಫ್ಲ್ಯಾಶ್‌ಲೈಟ್+ ಕ್ವಿಕ್‌ ನೋಟ್‌, ಇನ್ಸ್ಟಾಗ್ರಾಮ್‌ ಸ್ಟೋರಿ ಡೌನ್‌ಲೋಡರ್, EZ ನೋಟ್ಸ್, ಕೆ – ಡಿಕ್ಷನರಿಮೇಲಿನ ಅಪ್ಲಿಕೇಶನ್‌ಗಳನ್ನು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ರಿಮೂವ್‌ ಮಾಡಿದೆ.

ಡಾಟಾವನ್ನು ಕದಿಯುವಂತಹ ಆ್ಯಪ್‌ಗಳಲ್ಲಿ ಟಾರ್ಚ್‌, QR ರೀಡರ್‌ಗಳು, ಎಡಿಟಿಂಗ್‌ ಆ್ಯಪ್‌ಗಳು ಅಲ್ಲದೆ, ಕೆಲವೊಂದು ಅಪ್ಲಿಕೇಶನ್‌ಗಳು ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.

ಹಾಗಾಗಿ, ಇನ್ನೂ ಮುಂದೆ ಮೊಬೈಲ್‌ನಲ್ಲಿ ಇಂತಹ ಅಪ್ಲಿಕೇಶನ್‌ಗಳು ದೊರೆಯದು. ಆಂಡ್ರಾಯ್ಡ್‌ನ ಡಾಟಾಗಳನ್ನು ಕಾಪಾಡುವ ಉದ್ದೇಶದಿಂದ ಗೂಗಲ್ ನಿರ್ಧಾರವನ್ನು ತೆಗೆದುಕೊಂಡಿದೆ.

ಮಾಲ್‌ವೇರ್‌ಗಳ ಹೊರತಾಗಿ, ನಿರಂತರವಾಗಿ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಹಣವನ್ನು ಗಳಿಸುವ ಅನೇಕ ಅಪ್ಲಿಕೇಶನ್‌ಗಳಿದ್ದು, ಹಾಗಾಗಿ Android ಫೋನ್‌ ಬಳಸುವವರು ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.

ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳನ್ನು ನಿರಂತರವಾಗಿ ಪರಿಶೀಲಿಸುತ್ತಿರಬೇಕು.

ಅನೇಕ ಮಾಲ್ವೇರ್ ಅಥವಾ ಸ್ಪೈವೇರ್ ಐಕಾನ್ ಇಲ್ಲದೆ ಅಸ್ತಿತ್ವದಲ್ಲಿದ್ದು, ಈ ಆ್ಯಪ್ ಗಳನ್ನು ತಕ್ಷಣ ಡಿಲೀಟ್ ಮಾಡಬೇಕು.

Google ಖಾತೆಯ ಪಾಸ್‌ವರ್ಡ್ ಅನ್ನು ನಿರಂತರವಾಗಿ ನವೀಕರಿಸಲಾಗುತ್ತಿದೆ. ಇದರೊಂದಿಗೆ, ಗೌಪ್ಯತೆ ಉಲ್ಲಂಘನೆಯ ನಂತರವೂ ಖಾತೆಯು ಸುರಕ್ಷಿತವಾಗಿರುತ್ತದೆ.

ಫೋನ್‌ನೊಂದಿಗೆ ಬರುವ ಬ್ಲೋಟ್‌ವೇರ್‌ಗಳು ಕೆಲವೊಮ್ಮೆ ಸ್ಥಳಾವಕಾಶ ಮತ್ತು ಸ್ಥಿರತೆಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಸಾಧ್ಯವಾದಷ್ಟು ಈ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಬೇಕು.

ಆದ್ದರಿಂದ ಯಾವುದೇ ಅಪ್ಲಿಕೇಶನ್‌ ಅನ್ನು ಬಳಸುವಾಗ, ಡೌನ್‌ಲೋಡ್‌ ಮಾಡುವಾಗ ಎಚ್ಚರವಹಿಸುವುದು ಅಗತ್ಯ.

Leave A Reply

Your email address will not be published.