ಯುವಕನ ಕನಸು ನನಸು ಮಾಡಿದ ‘ಹತ್ತು ರೂಪಾಯಿ’ | 85 ಸಾವಿರ ರೂಪಾಯಿ ಬೆಲೆಯ ಬೈಕ್ ಖರೀದಿಗೆ ನಾಣ್ಯ ಸಾಥ್
ಪ್ರಯತ್ನವಿದ್ದರೆ ಮಾತ್ರ ಪ್ರತಿಫಲ. ಹಾಗೇನೇ ಒಂದೊಂದು ಸೇರಿದರೇನೇ ರಾಶಿ ಆಗಲು ಸಾಧ್ಯ ಅಲ್ವಾ!?. ಅದೆಷ್ಟೋ ಜನ ಒಂದು ರೂಪಾಯಿ ಅಂದ್ರೆ ತಾತ್ಸಾರದಿಂದ ನೋಡುವವರೇ ಹೆಚ್ಚು. ಒಂದು ರೂಪಾಯಿಯಿಂದ ಏನಾಗತ್ತೆ ಅನ್ನುವವರಿಗೆ ಈ ಸ್ಟೋರಿ. ರೂಪಾಯಿ ಪಾವಳಿಯ ಬೆಲೆ ತಿಳಿಯೋದೆ, ಒಂದು ಕನಸನ್ನು ಭದ್ರವಾಗಿ ಕಟ್ಟಿಕೊಂಡು ಒಂದೊತ್ತು ಊಟಕ್ಕೂ ವ್ಯಥೆ ಪಡುವಂತಹ ನಿಸ್ವಾರ್ಥ ಜನರಿಗೆ. ಹೌದು, ಈ ಘಟನೆಗೆ ಸಾಕ್ಷಿ ಎಂಬಂತೆ ಇದೆ ಈ ಹತ್ತು ರೂಪಾಯಿ ಯುವಕನ ಕನಸು ಮಾಡಿದ ಸ್ಟೋರಿ!!
ಹೌದು. ಉತ್ತರಾಖಂಡ್ನ ರುದ್ರಾಪುರದ ಯುವಕನೋರ್ವ 110 ಸಿಸಿ ಸಾಮರ್ಥ್ಯದ ಟಿವಿಎಸ್ ಜ್ಯುಪಿಟರ್ ಸ್ಕೂಟರ್ ನ್ನು ಹತ್ತು ರೂಪಾಯಿಯ ನಾಣ್ಯ ನೀಡುವ ಮುಖಾಂತರ ಖರೀದಿಸಿದ್ದಾನೆ. 85 ಸಾವಿರ ರೂಪಾಯಿ ಬೆಲೆಯ ಟಿವಿಎಸ್ ಜ್ಯುಪಿಟರ್ ಸ್ಕೂಟರ್ ಖರೀದಿಸಲು ಸಮೀಪದ ಟಿವಿಎಸ್ ಶೋರೂಮ್ಗೆ ಹೋದ ಯುವಕನೊಬ್ಬ 50 ಸಾವಿರ ರೂಪಾಯಿ ನಾಣ್ಯಗಳನ್ನು ನೀಡಿದ್ದಾನೆ.
ಸಿಂಗಲ್ ಸಿಲಿಂಡರ್ ಸ್ಕೂಟರ್ ಆಗಿದ್ದು, ಟಿವಿಎಸ್ನ ಇಕೊಥ್ರಸ್ಟ್ ಇಂಧನ ಇಂಜೆಕ್ಷನ್ ವೈಶಿಷ್ಟ್ಯವನ್ನು ಒಳಗೊಂಡಿದೆ. (ಇಕೊಥ್ರಸ್ಟ್ ಇಂಧನ ಇಂಜೆಕ್ಷನ್ ಟೆಕ್ನಾಲಜಿ ಎಂದರೆ ಮಾಲಿಕೋಟ್ ಪಿಸ್ಟನ್ ಬಳಕೆ ಮಾಡುವ ಮೂಲಕ ಎಂಜಿನ್ ಒಳಗೆ ಆಗುವ ಘರ್ಷಣೆಯನ್ನು ತಪ್ಪಿಸುವುದು. ಇದರಿಂದ ಸ್ಕೂಟರ್ನಲ್ಲಿ ಇಂಧನ ದಕ್ಷತೆ ಹೆಚ್ಚುತ್ತದೆ). ಸ್ಕೂಟರ್ ಬೆಲೆ ಈ ಶೋರೂಮ್ನಲ್ಲಿ 85,210 ರೂಪಾಯಿ ಆಗಿತ್ತು. ಅದರಲ್ಲಿ 50 ಸಾವಿರ ರೂ.ನ್ನು ನಾಣ್ಯಗಳನ್ನೇ ಕೊಟ್ಟಿರುವ ಯುವಕ, ಉಳಿದ ಹಣ ಹೇಗೆ ಪಾವತಿಸಿದ್ದಾನೆ ಎಂಬುದು ಗೊತ್ತಾಗಿಲ್ಲ. ಗ್ರಾಹಕ ಕೊಟ್ಟ ನಾಣ್ಯಗಳನ್ನು ಶೋರೂಮ್ ಸಿಬ್ಬಂದಿ ಅದನ್ನು ಎಣಿಸಿಕೊಂಡು, ಸ್ವೀಕರಿಸಿದ್ದಾರೆ.